ರೈತರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನಗಳಾಗಬೇಕು:ಕಾಗೇರಿ

0
44

3sdp1a
ಸಿದ್ದಾಪುರ,4:ರೈತರಿಗೆ ಭೀಕರ ಬರಗಾಲದಿಂದ ಬೆಳೆದ ಬೆಳೆ ಪೂರ್ಣ ಪ್ರಮಾಣದಲ್ಲಿ ಕೈ ಸೇರುತ್ತದೆ ಎಂಬ ಭರವಸೆ ಇಲ್ಲದಂತಾಗಿದೆ.ಇದರಿಂದ ರೈತರ ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ.ಆದ್ದರಿಂದ ಅಧಿಕಾರಿಗಳು ರೈತರಿಗೆ ಮಾಹಿತಿ ಕೊರತೆ ಆಗದಂತೆ ಇಲಾಕೆಗಳಲ್ಲಿಯ ಕಾರ್ಯಕ್ರಮಗಳನ್ನು ಮನಮುಟ್ಟುವಂತೆ ನೀಡಿ ಈ ಕೃಷಿ ಅಭಿಯಾನದ ಮೂಲಕ ರೈತರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನಗಳಾಗಬೇಕು ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಪಟ್ಟಣದ ಕೃಷಿ ಇಲಾಖೆಯ ಆವರಣದಲ್ಲಿ ಕೃಷಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಅಧಿಕಾರಿಗಳು ರೈತರ ಹತ್ತಿರ ಹೋದಾಗ ಅವರನ್ನು ಮಾತನಾಡಲು ಬಿಡಿ,ಅವರ ಕಷ್ಟಸುಖ ಎನು?ಸಲಹೆಗಳೇನು?ಎನ್ನುವದನ್ನು ತಿಳಿದುಕೊಳ್ಳಿ.ಇದನ್ನು ಸರಕಾರಕ್ಕೆ ಅಧಿಕಾರಿಗಳು ವರದಿ ನೀಡಿದಾಗ ಸರಕಾರಗಳು ರೈತರಿಗೆ ಅವಶ್ಯವಾದ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಾಧ್ಯ.
ಅಧಿಕಾರಿಗಳು ರೈತರಿಗೆ ಮಾಹಿತಿಯ ಕೊರತೆಯಾಗದಂತೆ ನೋಡಿಕೊಳ್ಳಿ,ಇಲಾಖಾ ಕಾರ್ಯಕ್ರಮಗಳ ಸ್ಪಷ್ಟತೆಯನ್ನು ತಿಳಿಸಿ.ಯಾಂತ್ರೀಕರಣಕ್ಕೆ ಹೆಚ್ಚುಪ್ರೋತ್ಸಾಹ ನೀಡಿ.ರೈತರು ಅವಶ್ಯಕ ಮಾಹಿತಿಯನ್ನು ಸಂಬಂಧಿಸಿದ ಅಧಿಕಾರಿಗಳ ಜೊತೆ ಪಡೆಯುವ ಮೂಲಕ ಅಭಿಯಾನದ ಪ್ರಯೋಜನ ಪಡೆದುಕೊಳ್ಳಿ ಎಂದು ಹೇಳಿದರು.
ಜಿ.ಪಂ ಕೈಗಾರಿಕಾ ಹಾಗೂ ಸ್ಥಾಯಿಸಮಿತಿ ಅಧ್ಯಕ್ಷ ಈಶ್ವರ್ ನಾಯ್ಕ ಮಾತನಾಡಿ ಸರಕಾರದ ಎಲ್ಲಾ ಯೋಜನೆಗಳು ಸೀಮಿತ ವರ್ಗದವರಿಗೆ ಮಾತ್ರ ಸಿಗುತ್ತಿವೆ.ಯಾವುದೇ ಸರಕಾರಗಳು ರೈತರನ್ನು ದೂರವಿಡುವದಿಲ್ಲ.ರೈತರು ತಮ್ಮ ಅಹವಾಲನ್ನು ತೆಗೆದುಕೊಂಡು ಸರಕಾರದ ಬಳಿಹೋಗಬೇಕು ಆಗ ಸರಕಾರಗಳು ಸ್ಪಂದಿಸುತ್ತವೆ.ಎಂದು ಹೇಳಿದರು.
ಎ.ಪಿ.ಎಂ.ಸಿ ಅಧ್ಯಕ್ಷ ಕೆ.ಕೆ ನಾಯ್ಕ,ಜಿ.ಪಂ ಸದಸ್ಯರಾದ ಕಮಲಾ ವಿ ನಾಯ್ಕ, ಶಾಲಿನಿ ಗೌಡರ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ.ಪಂ ಅಧ್ಯಕ್ಷೆ ಶಾಂತಿ ಹಸ್ಲರ್ ವಹಿಸಿದ್ದರು .ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ ಬಸವರಾಜ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

loading...

LEAVE A REPLY

Please enter your comment!
Please enter your name here