ರೈತರು ಸಂಘಟಿತವಾದಗ ಸರ್ಕಾರ ಸೌಲಭ್ಯಗಳು ಸಿಗಲು ಸಾಧ್ಯ: ಪುಟ್ಟಸ್ವಾಮಿ

0
0

ಕುಕನೂರು: ರೈತರ ಸೌಲಭ್ಯಗಳು ಇಡೆರಬೇಕಾದರೆ ಪ್ರತಿಯೋಬ್ಬ ರೈತರು ಸಂಗಟಿತವಾದಗ ಮಾತ್ರ ಸೌಲಭ್ಯಗಳು ಸಿಗಲು ಸಾಧ್ಯ ಎಂದು ಭಾರತೀಯ ಕೀಸಾನ್‌ ಸಂಘದ ರಾಜ್ಯಧ್ಯಕ್ಷ ಪುಟ್ಟಸ್ವಾಮಿ ಗೌಡ ಹೇಳಿದರು.
ಪಟ್ಟಣದ ಎಪಿಎಮ್ಸಿ ಅವರಣದಲ್ಲಿ ಹಮ್ಮಿಕೊಂಡ ರೈತರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ರೈತರಿಗೆ ಬೇಕಾದ ಸೌಲಭ್ಯಗಳು ಸಿಗಬೇಕಾದರೆ ನಮ್ಮ ಸಂಘಟನೆ ಕುಂಟಿತವಾಗಿದೆ ಅದು ಎಲ್ಲರ ಗಮನ ಸೇಳೆದಾಗ ಮಾತ್ರ ರೈ ತನ್ನ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಅದಕ್ಕಾಗಿ ಗ್ರಾಮಿಣಭಾಗದ ರೈತ ಸಮುದಾಯ ಜನರು ಸಂಘಟಿತವಾಗಲು ಶ್ರಮೀಸಬೇಕು ಪ್ರಸ್ತುತ ಬರಗಾಲ ರೈತರಿಗೆ ಎದುರಾಗಿದೆ ಅದಕ್ಕಾಗಿ ನೀರಾವರಿ, ವಿದ್ಯುತ್‌, ಬೇಳೆವಿಮೆ, ಕೃಷ್ಣಾ ಬೀ ಸ್ಕೀಂ ನಿರಾವರಿ ಯೋಜನೆ ಹಾಗೂ ರೈತರ ಅಭಿವೃದ್ದಿ ಕಾರ್ಯಗಳಾಗಲು ಸಂಘಟನೆ ಅವಶ್ಯಕವಾಗಿದೆ, ಭಾರತೀಯ ಕೀಸಾನ್‌ ಸಂಘ ಕಳೇದ 38 ವರ್ಷಗಳಿಂದಾ ರೈತ ಸಮುದಾಯದ ಜೋತೆಗೆ ಕಾರ್ಯನಿರ್ವಹಿಸುತ್ತಿದ್ದು ಪ್ರತಿಯೊಬ್ಬ ರೈತನು ನಮ್ಮನಾಯಕ ಎಂಬ ತತ್ವದ ಅಡಿಯಲ್ಲಿ ಪಾರಿವಾರಿಕ ಕಲ್ಪನೆಯಿಂದಾ ದೇಶಧ್ಯಾಂತ ರೈತರನ್ನು ಸಂಗಟಿಸುತ್ತಿದೆ ರೈತ ಸಂಘಟನೆ ಜೋತೆ ಜೋತೆಗೆ ಸ್ವಾವಲಂಬಿ ಕೃಷಿ ಜಲಸಂರಕ್ಷಣೆ, ಗೋ ಸಂರಕ್ಷಣೆ, ವಣ ಸಂರಕ್ಷಣೆ, ವಿಷಾರಹೀತಾ ಆಹಾರ ಉತ್ಪಾದನೆ ಕಂದಾಯ ಮಾರುಕಟ್ಟೆ ಹಾಗೂ ಇತರೆ ವಿಷಯಗಳ ಬಗ್ಗೆ ಮಾಹಿತಿ ತರಬೇತಿ ನೀಡುತ್ತಿದೆ ರೈತರು ಸರ್ಕಾರದಿಂದಾ ದೊರೆಯಬೇಕಾದ ಮೂಲಭೂತ ಸೌಕರ್ಯಗಳನ್ನು ಯಾವರೀತಿಯಾಗಿ ಪಡೆಯಬೇಕು ಎಂಬುದರ ಬಗ್ಗೆ ಜಾಗೃತಿ, ಹೋರಾಟ ಕಾನೂನಿ ಅರಿವು ಮೂಡಿಸುವದರ ಮೂಲಕ ಕಾರ್ಯನಿರ್ವಹಿಸಿತ್ತಿದೆ ಇದರಲ್ಲಿ ಪ್ರತಿ ರೈತರು ಶ್ರಮೀಸಲು ಮುಂದಾಗಬೇಕು ಎಂದು ಹೇಳಿದರು.
ನಂತರ ಭಾರತೀಯ ಕೀಸಾನ್‌ ಸಂಘದ ಉತ್ತರ ಕರ್ನಾಟಕ ಪ್ರಾತ್ಯ ಅಧ್ಯಕ್ಷ ಗುರುನಾಥ ಬಂಗಲಿ ಮಾತನಾಡಿ ,ಪ್ರಸ್ತುತ ಬೆನ್ನುಲುಬಾದ ರೈತನ ಪರಿಸ್ಥೀಥಿ ಹಿನಾಯವಾಗಿದೆ. ಬೀಜ ಗೊಬ್ಬರ ಕಂಪನಿಗಳು ಮದ್ಯವರ್ತಿಗಳು ವ್ಯಾಪಾರಿಗಳು ಶೋಷಿಸುತ್ತಾ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ ರೈತನ ಬೆಳೆಗೆ ಇಂದಿಗು ಲಾಭದಾಯಕ ಬೆಳೆ ಸಿಗುತ್ತಿಲ್ಲಾ. ರೈತರ ಮತ್ತು ಗ್ರಹಕರ ಮಧ್ಯ ಇರುವವರೆಲ್ಲೂರೂ ರೈತರನ್ನು ಶೋಷಣೆ ಮಾಡಿ ಶ್ರೀಮಂತರಾಗುತ್ತಿದ್ದಾರೆ ಇನ್ನೂ ಸರ್ಕಾರದ ಯೋಜನೆಗಳು ರೈತರಿಗೆ ಯಶಸ್ವಿಯಾಗಿ ತಲುಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾ ವಕೀಲ ಸಂಘದ ಅಧ್ಯಕ್ಷ ರಾಜಶೇಖರ್‌ ಹಳ್ಳಿ, ಕಾನಿಪ ಸಂಘದ ಅದ್ಯಕ್ಷ ರುದ್ರಪ್ಪ ಭಂಡಾರಿ ಹಿರಿಯ ರೈತ ಮುಖಂಡ ಹನುಮಂತಪ್ಪ ಜಳಕಿ, ಕೃಷಿಕಾ ಶ್ರೀಕಾಂತ ಪೂಜಾರ, ಪ್ರಕಾಶದೇಸಾಯಿ ಚನ್ನಪ್ಪನಹಳ್ಳಿ, ಮಲ್ಲಿಕಾರ್ಜುನ್‌ ಹುಲ್ಲೂರು, ಹಾಗೂ ರೈತರು ಇದ್ದರು.

loading...