ರೈತರ ಸಾವಿಗೆ ಬೆಲೆ ಕಟ್ಟುತ್ತಿರುವ ಕಾಂಗ್ರೆಸ್:ತಾರಾ

0
97

ಕನ್ನಡಮ್ಮ ಸುದ್ದಿ-ಬೆಳಗಾವಿ: ಕಾಂಗ್ರೆಸ್ ಸರ್ಕಾರ ರೈತರ ಸಾವಿಗೆ 5ಲಕ್ಷ ರೂ.ಬೆಲೆ ಕಟ್ಟಿ, ರೈತರಿಗೆ ಮತ್ತೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೆಪಿಸುತ್ತಿದೆ. ಹಿಂದೂ ಎಂದು ಹೇಳುತ್ತಲೇ ಹಿಂದೂ ಯುವಕರ ಹತ್ಯೆ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ ಹೇಳಿದರು.
ಶುಕ್ರವಾರಂದು ತಾಲೂಕಿನ ಕಣಬರ್ಗಿ ಗ್ರಾಮದಲ್ಲಿ ಬಿಜೆಪಿ ಪಕ್ಷದ ಮನೆ ಮನೆ ತೆರಳಿ ಮುಷ್ಠಿ ಧಾನ್ಯ ಅಭಿಯಾನ ಕೈಗೊಂಡು ಗ್ರಾಮದ ಪ್ರತಿ ಮನೆ ಸದಸ್ಯರಿಗೆ ತಿಳಿಸಿದರು.
ರೈತ ನಾಯಕ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ರೈತರ ಪರ, ಜನಪರ ಆಡಳಿತ ಮಾಡಿದ್ದರು. ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ರಾಜ್ಯದಲ್ಲಿ ಗೆಲ್ಲಿಸಿ ತಮ್ಮ ಸೇವೆಯನ್ನು ಮಾಡಲು ಅವಕಾಶ ನೀಡಿಬೇಕು. ತಮ್ಮ ಮನೆಯ ಸದಸ್ಯರೇಲ್ಲರೂ ಬಿಜೆಪಿಗೆ ಮತ ನೀಡಿ ಎಂದು ವಿನಂತಿಸಿಕೊಂಡರು.
ಕಾಂಗ್ರೆಸ್ ಸರ್ಕಾರ ಅಧಿಕಾರಿಗಳಿಗೆ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಲು ಬೀಡುತ್ತಿಲ್ಲ, ರಾಜ್ಯದಲ್ಲಿ ಅತ್ಯಾಚಾರ ,ಅಪಹರಣ ಕೃತ್ಯಗಳು ಹೆಚ್ಚಾಗುತ್ತಿವೆ. ಹಿಂದೂ ಎಂದು ಹೇಳುತ್ತಲೇ ಹಿಂದೂ ಯುವಕರ ಕೊಲೆ ಮಾಡುತ್ತಿದೆ. ಅಲ್ಲದೆ ಮಹಾದಾಯಿ ವಿಚಾರದಲ್ಲು ಸಹ ಮೌನ ವಹಿಸಿದೆ ಇಂತಹ ಸರ್ಕಾರ ರಾಜ್ಯದಲ್ಲೇ ಬೇಕಾ ಎಂದು ಜನರನ್ನು ಪ್ರಶ್ನೀಸಿದರು. ಆದ್ದರಿಂದ ರಾಜ್ಯದಲ್ಲಿ ಈ ಬಾರಿ ಬಿಜೆಪಿ ಪಕ್ಷಕ್ಕೆ ಮತ ನೀಡಿ, ಬಿಎಸ್‍ವೈ ನೇತೃತ್ವದ ಸರ್ಕಾರವನ್ನು ಆಯ್ಕೆ ಮಾಡಬೇಕು. ರೈತ ನಾಯಕ ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ಆಯ್ಕೆ ಮಾಡಿ ತಮ್ಮ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಹೇಳಿದರು.
ಸಿದ್ದು ರೈತ ವಿರೋಧಿ ನೀತಿಯಿಂದಾಗಿ ರಾಜ್ಯದಲ್ಲಿ 3 ಸಾವಿರಕ್ಕೂ ಹೆಚ್ಚು ಜನರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂತಹ ರೈತರಿಗೆ ಆತ್ಮಹತ್ಯೆ ಮಾಡಿಕೊಳ್ಳದಂತೆ ಜಾಗೃತಿ ಮೂಡಿಸಬೇಕಾದ ಸರ್ಕಾರ 5ಲಕ್ಷ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೆಪಿಸುತ್ತಿದೆ ಎಂದು ಜನರಿಗೆ ತಿಳಿಸಿದರು.
ಕೊನೆಗೆ ನಗರದ ಪ್ರಸಿದ್ದ ದೇವಿ ಮಹಾಲಕ್ಷ್ಮೀ ದೇವಾಲಯಕ್ಕೆ ಬೇಡಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜೇಂದ್ರ ಹರಕುಣಿ, ರಾಜಕುಮಾರ ಟೋಪಣ್ಣವರ, ಕಿರಣ ಜಾಧವ,ರಾಜು ಚಿಕ್ಕನಗೌಡ್ರ, ಮುರಗೇಂದ್ರ ಪಾಟೀಲ , ರವಿ ಪಾಟೀಲ, ಉಜ್ವಲಾ ಬಡವನಾಚೆ, ಜಯಶ್ರೀ ಪಾಟೀಲ ಸೇರಿದಂತೆ ಗ್ರಾಮದ ಜನರು ಉಪಸ್ಥಿದ್ದರು.

loading...