ರೈಲು ಮಾರ್ಗ ಅನುಷ್ಠಾನಕ್ಕೆ ಆಗ್ರಹಿಸಿ ಮನವಿ

0
23

ನಿಡಗುಂದಿ: ನಿಯೋಜಿತ ಆಲಮಟ್ಟಿ-ಮುದ್ದೆÃಬಿಹಾಳ-ಯಾದಗಿರಿ ರೈಲು ಮಾರ್ಗವನ್ನು ಕೂಡಲೇ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಪಟ್ಟಣದ ಆಲಮಟ್ಟಿ-ಯಾದಗಿರಿ ರೈಲು ಮಾರ್ಗ ನಿರ್ಮಾಣ ಹೋರಾಟ ವೇದಿಕೆಯಿಂದ ಪಾದಯಾತ್ರೆ ನಡೆಸಲಾಯಿತು.
ಪಟ್ಟಣದ ರುದ್ರೆÃಶ್ವರ ಮಠದಿಂದ ರುದ್ರಮುನಿ ಶ್ರಿÃಗಳ ನೇತೃತ್ವದಲ್ಲಿ ವೇದಿಕೆ ಕಾರ್ಯಕರ್ತರು ತಹಸೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ನಡೆಸಿ ತಾಲೂಕಾಡಳಿತದ ಮೂಲಕ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹೋರಾಟಗಾರ ಬಸವರಾಜ ಕುಂಬಾರ ಮಾತನಾಡಿ,ಬ್ರಿಟಿಷರು ತಮ್ಮ ಆಡಳಿತಾವಯಲ್ಲಿ ಆಲಮಟ್ಟಿ-ಮುದ್ದೆÃಬಿಹಾಳ-ಯಾದಗಿರಿ ರೈಲು ಮಾರ್ಗಕ್ಕಾಗಿ ಆಲಮಟ್ಟಿಯಿಂದ ಹುಲ್ಲೂರು ಗ್ರಾಮದವರೆಗೆ ಕಾಮಗಾರಿ ನಡೆಸಿದ್ದರು. ಆದರೆ ಸ್ವಾತಂತ್ರ÷್ಯ ಸಂಗ್ರಾಮ ತೀವ್ರಗೊಂಡಿದ್ದರಿಂದ ಕಾಮಗಾರಿ ಮುಂದುವರೆಯಲಿಲ್ಲö. ದೇಶಕ್ಕೆ ಸ್ವಾತಂತ್ರ÷್ಯ ಸಿಕ್ಕು ೭೫ ವರ್ಷ ಗತಿಸಿದರೂ ದೇಶವನ್ನಾಳಿದ ಸರಕಾರಗಳು ಈ ರೈಲು ಮಾರ್ಗವನ್ನು ಮುಂದುವರೆಸಿದಿರುವುದು ಖಂಡನೀಯ ಎಂದರು
ಈ ರೈಲು ಮಾರ್ಗ ಅನುಷ್ಠಾನಕ್ಕಾಗಿ ಅನೇಕ ಹೋರಾಟಗಳು ನಡೆದರೂ ಸೂಕ್ತ ಬೆಲೆ ಸಿಕ್ಕಿಲ್ಲö.ರೈಲು ಮಾರ್ಗ ರಚನೆಯಾದರೆ ಈ ಭಾಗದಲ್ಲಿ ಬೆಳೆಯುವ ನಾನಾ ವಾಣಿಜ್ಯ ಬೆಳೆ, ಹಣ್ಣು ಹಂಪಲುಗಳನ್ನು ವಿದೇಶಕ್ಕೂ ರಫÅ್ತ ಮಾಡಲು ಅನುಕೂಲವಾಗುತ್ತದೆ. ಗ್ರಾನೈಟ್ ಶಿಲೆ, ಪರಸಿ ಕಲ್ಲುö, ಬೀಸುವ ಕಲ್ಲುö, ಸಿಮೆಂಟ್ ತಯಾರಿಕೆ ಕಚ್ಚಾ ವಸ್ತುಗಳನ್ನು , ಸಿಮೆಂಟ್, ಸಕ್ಕರೆ, ಬೆಲ್ಲö, ಕಬ್ಬಿಣ, ಸ್ಟಿಲ್ ಸಾಮಗ್ರಿಗಳನ್ನು ಸಾಗಣೆ ಮಾಡಲು ಅನುಕೂಲವಾಗಲಿದೆ. ಅಲ್ಲದೆ ಈ ಭಾಗದ ಬಡ ಜನರಿಗೆ ಸುಗಮವಾಗಿ ಸಂಚರಿಸಲು, ನಾನಾ ಉದ್ದಿಮೆಗಳ ಸ್ಥಾಪನೆಗೆ ಅನುಕೂಲವಾಗುತ್ತದೆ ಎಂದರು.
ಆಂದ್ರ ಪ್ರದೇಶ, ವಿಶಾಖಪಟ್ಟಣ, ಗೋವಾ ಸೇರಿದಂತೆ ಪÇರ್ವ-ಪಶ್ಚಿಮ ಸಾಗರಗಳನ್ನು ಬೆಸೆಯುವ ಕೊಂಡಿಯಾಗಲಿರುವ ಈ ರೈಲು ಮಾರ್ಗದಿಂದ ಈ ಭಾಗ ಅಭಿವೃದ್ಧಿಯಾಗಲಿದೆ. ಹೀಗಾಗಿ ಸಚಿವರು ಕೂಡಲೇ ನನೆಗುದಿಗೆ ಬಿದ್ದಿರುವ ಈ ರೈಲು ಮಾರ್ಗದ ಕಾಮಗಾರಿಯನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ರುದ್ರಮುನಿ ಶ್ರಿÃಗಳು ಮಾತನಾಡಿ, ಈ ಭಾಗದ ಸಮೃದ್ಧಿಗೆ ಮತ್ತು ಜನರ ಅನುಕೂಲಕ್ಕಾಗಿ ಈ ರೈಲು ಮಾರ್ಗ ಅತ್ಯವಶ್ಯಕವಾಗಿದೆ ಎಂದರು.
ಡಾ.ಸಂಗಮೇಶ ಗೂಗಿಹಾಳ, ಪ್ರಹ್ಲಾದ ಪತ್ತಾರ, ಆರ್.ಸಿ.ರೇವಡಿ, ಮುದ್ದಪ್ಪ ಯಳ್ಳಿಗುತ್ತಿö, ರಾಜು ನದಾಫ, ಮಲ್ಲು ಕುಂಬಾರ, ಶಿವಾನಂದ ಮುಚ್ಚಂಡಿ, ತಿಪ್ಪಣ್ಣ ಕುಂದರಗಿ, ಜಟ್ಟೆಪ್ಪ ಮನಗೂರ, ಶಿವನಗೌಡ ಗೌಡರ, ಅವ್ವಣ್ಣ ನಾಯಕ, ವಿಜಯ ಚಿನಿವಾಲರ, ಮೃತ್ಯುಂಜಯ ಯರವಿನತೆಲಿಮಠ, ಬಸಯ್ಯ ಗಣಾಚಾರಿ, ಮಲ್ಲಯ್ಯ ವಸ್ತçದ ಇತರರಿದ್ದರು.

loading...