ರೈಲು ಸಂಚಾರ ಬೇಡ-ಕುಡಿಯಲು ನೀರು ಹರಿಸಿ

0
31

ಗುರುರಾಜ.ಬ.ಕನ್ನೂರ
ಬಸವನಬಾಗೇವಾಡಿ: ರೈಲು ಬೇಡ, ನೀರು ಹರಿಸಿ ಎಂದು ರೈತರು ಕೂಗಿದರೆ, ಲಿಂಗಾರಾಧನೆಗಿಂತ ನಮಗೆ ಲೋಕಾರಾಧನೆಗಾಗಿ ಮುಖ್ಯ ಎಂದು ಮಠವನ್ನು ಬಿಟ್ಟು ರೈಲು ನಿಲ್ಲಿಸಿ ಚಳುವಳಿಗಿಳಿದಿದ್ದು ಜಿಲ್ಲೆಯ ಅನೇಕ ಮಠಾಧೀಶರು. ರೈತರನ್ನು, ಮಠಾಧೀಶರ ಸುತ್ತಲೂ ಪೊಲೀಸ್ ಇಲಾಖೆ ಹಾಗೂ ರೈಲ್ವೆ ಇಲಾಖೆಯ ಪೊಲೀಸ್ ಸಿಬ್ಬಂದಿಗಳ ಕಣ್ಗಾವಲು.

ಬಸವನಬಾಗೆವಾಡಿ ಶ್ರಿÃ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಕಾಮಗಾರಿ ವಿಳಂಬಕ್ಕೆ ರೈಲ್ವೆ ಇಲಾಖೆಯೇ ನೇರ ಹೊಣೆಯಾಗಿದೆ. ಇಂದಿನಿಂದ ಕಾಮಗಾರಿ ಆರಂಭಿಸಿದಿದ್ದಲ್ಲಿ ಮತ್ತೆÃ ಹೋರಾಟಕ್ಕಿಳಿಯಲು ನಾವೆಲ್ಲಾ ಸಿದ್ಧ ಎಂದರು.
ದೇವರಹಿಪ್ಪರಗಿ ಕೆ.ಬಿ.ಜಿ.ಎನ್‌ಎಲ್ ಎಇಇ ಚಂದ್ರಶೇÉಖರ ವಾರದ ಮನವಿ ಸ್ವಿÃಕರಿಸಿ ಮಾತನಾಡಿ,೨೦೧೬ ರಲ್ಲಿ ನಮ್ಮ ಇಲಾಖೆಯಿಂದ ರೈಲ್ವೆ ಇಲಾಖೆಗೆ ೨೪ ಕೋಟ ರೂಗಳಲ್ಲಿ ಭಾಗಶ: ಹಣ ಬಿಡುಗಡೆಯಾಗಿದ್ದು, ಇನ್ನೆÃನು ಎರಡು ಪೈಪ್ ಪುಶಿಂಗ್ ಮಾಡಬೇಕಾಗಿದೆ. ಬರುವ ಹತ್ತು ದಿನಗಳಲ್ಲಿ ಕಾಮಗಾರಿ ಮುಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಅಧಿಕಾರಿ ವಿನಾಯಕ ಪುಂಗಲೇಕರ, ಕರಿಭಂಟನಾಳದ ಹಿರೇಮಠದ ಶಿವಕುಮಾರ ಸ್ವಾಮೀಜಿ,ಹುಣಶ್ಯಾಳ ಪಿಬಿಯ ಬಸವ ಶ್ರಿÃಗಳು, ಆಲಮೇಲದ ಸಂಗನಬಸವ ಶ್ರಿÃಗಳು, ಯಂಕಂಚಿಯ ರುದ್ರಮುನಿ ಶ್ರಿÃಗಳು, ತೊಣಶ್ಯಾಳದ ಸಿದ್ದಲಿಂಗ ಶಿವಾಚರ‍್ಯರು, ಈರಪ್ಪ ಲಮಾಣಿ, ಚಂದ್ರಾಮ ತೆಗ್ಗಿ, ಹೊನಕೇರಪ್ಪ ತೆಲಗಿ, ನಿಂಗನಗೌಡ ಹಡಪದ, ಸಿದ್ದಲಿಂಗ ಹಿರೇಮಠ, ಶಿವಪ್ಪ ಮಲಗೊಂಡ, ಶಿವಾನಂದ ಬಿರಾದಾರ, ಕುಮಾರಗೌಡ ಪಾಟೀಲ, ಸಿದ್ದಣ್ಣ ಬಶೆಟ್ಟಿ ,ತಾಲೂಕಾಧ್ಯಕ್ಷ ಸಿದ್ದರಾಮ ಅಂಗಡಗೇರಿ, ಈರಣ್ಣ ದೇವರಗುಡಿ, ಹಣಮಂತ್ರಾಯ ಗುಣಕಿ, ರಮೇಶ ಕೋರಿ, ಚಂದ್ರಶೇಖರ ಕುಂಟೋಜಿ ಸೇರಿದಂತೆ ತಾಲೂಕಿನ ಹೂವಿನಹಿಪ್ಪರಗಿ, ಕುದರಿಸಾಲವಾಡಗಿ, ಕರಿಭಂಟನಾಳ, ಅಗಸಬಾಳ ಸೇರಿದಂತೆ ವಿವಿಧೆಡೆಗಳಿಂದ ನೂರಕ್ಕೂ ಅಧಿಕ ರೈತರು ಭಾಗವಹಿಸಿದ್ದರು. ನಂತರ ಮಠಾಧೀಶರು, ರೈತರು ಹಾಗೂ ಅಧಿಕಾರಿಗಳು ಕಾಮಗಾರಿ ನಡೆದ ಸ್ಥಳಕ್ಕೆ ತೆರಳಿ ಕಾಮಗಾರಿ ವೀಕ್ಷಿಸಿದರು.

loading...