ರೈಲ್ವೆಯಲ್ಲಿ ಅಂಗವಿಕಲರ ಸಮಸ್ಯೆ ಈಡೇರಿಕೆಗೆ ಸಂಸತ್ ಚಲೋ ಯಶಸ್ವಿ

0
62

ಕನ್ನಡಮ್ಮ ಸುದ್ದಿ-ಕಾರವಾರ: ಅಂಗವಿಕಲರು ರೈಲ್ವೆಯಲ್ಲಿ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ನಿವಾರಣೆಗಾಗಿ ಒತ್ತಾಯಿಸಿ ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ನೀಡಿದ ಮಾ.6 ರ ದಿಲ್ಲಿ ಚಲೋ ಕರೆಗೆ ಓಗೊಟ್ಟು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ನಾಯಕತ್ವದಲ್ಲಿ ಭಾಗವಹಿಸಿದ ಉತ್ತರ ಕನ್ನಡ ಜಿಲ್ಲಾ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಸದಸ್ಯರಿಂದ ದೆಹಲಿಯ ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಗೆ ಕಾರಣ: ಅಂಗವಿಕಲರು ರೈಲ್ವೆಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೈಲ್ವೆ ಇಲಾಖೆ ಇನ್ನೂ ಕೂಡ ಅಂಗವಿಕಲರ ಸ್ನೇಹಿಯಾಗಿಲ್ಲ. ಪ್ಲಾಟ್‍ಪಾರಂಗಳಲ್ಲಿ ಓಡಾಡುವ ಸಮಸ್ಯೆಗಳಿಂದ ಹಿಡಿದು ಅಂಗವಿಕಲರ ಬೋಗಿ ಎಲ್ಲಿ ನಿಲ್ಲುತ್ತೆ ಎಂಬುದು ಗೊತ್ತಾಗುವುದಿಲ್ಲ. ಅಲ್ಲದೇ ಬೋಗಿಯಲ್ಲಿನ ಸಮಸ್ಯೆಗಳು, ಅಂಗವಿಕಲರ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಅನಗತ್ಯವಾಗಿ ನಿರಾಕರಿಸಲಾಗುತ್ತಿದೆ. ಒಂದು ಪ್ಲಾಟ್‍ಪಾರಂ ನಿಂದ ಇನ್ನೊಂದು ಪ್ಲಾಟ್‍ಪಾರಂಗೆ ಹೋಗುವ ಸಮಸ್ಯೆಗಳು, ಶೌಚಾಲಯದ ಸಮಸ್ಯೆಗಳು, ಹೀಗೆ ಹಲವಾರು ಸಮಸ್ಯೆಗಳ ನಿವಾರಣೆಗೆ ಒತ್ತಾಯಿಸಿ ಮತ್ತು ಅಂಗವಿಕಲರ ನಿರ್ದಿಷ್ಟ ಬೇಡಿಕೆಗಳನ್ನು ಇಡೇರಿಕೆಗೆ ಆಗ್ರಹಿಸಿ ಮಾ.6 ರಂದು ದೆಹಲಿಯ ಸಂಸತ್ ಭವನದ ಮುಂದೆ ಪ್ರತಿಭಟನೆಗೆ ಕರೆ ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಜಿಲ್ಲಾ ಘಟಕವು ಪ್ರತಿಭಟನೆಯಲ್ಲಿ ಪಾಲ್ಗೊಂಡು ರಾಷ್ಟ್ರೀಯ ಒಕ್ಕೂಟದ ನೇತ್ರತ್ವದಲ್ಲಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು ಎಂದು ಜಿಲ್ಲಾ ಒಕ್ಕೂಟದ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...