ರೋಗಗಳಿಗೆ ಆಹ್ವಾನಿಸುವ ಚರಂಡಿ

0
31

ಸ್ವಚ್ಛತೆಗೆ ಗಮನಕೋಡದ ಗ್ರಾಮ ಪಂಚಾಯತ

• ಅಡಿವೇಶ ಮುಧೋಳ
ಬೆಟಗೇರಿ : ದುರ್ವಾಸನೆ ಬೀರುವ ಕೊಳಚೆ ನೀರು…ರೋಗ ರುಜೀನಗಳ ತವರೂರು…ಇಲ್ಲಿ ಸೊಳ್ಳೆಗಳ ದರ್ಬಾರ.! ಭಯ ಭೀತಿಯಲ್ಲಿ ಗ್ರಾಮಸ್ಥರು.!! ಇದು ಏನು? ಎಲ್ಲಿ ಅನ್ನುತ್ತೀರಾ? ಇದು ಡೆಂಗಿ ಮತ್ತು ಚಿಕುಂಗುನ್ಯಾ ರೋಗ ಆವರಿಸುವ ಆತಂಕದಲ್ಲಿರುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮಸ್ಥರ ದುಸ್ಥಿತಿಯ ಕಥೆ.
ಇಲ್ಲಿಯ ಪ್ರಮುಖ ರಸ್ತೆಯ ಪಕ್ಕದ ಚರಂಡಿ, ಓಣಿಗಳ ಬೀದಿಯ ಪಕ್ಕದ ಸಣ್ಣ ಚರಂಡಿದಲ್ಲಿ ಹರಿಯುವ ಕೊಳಚೆ ನೀರು ಅಲ್ಲಲ್ಲಿ ನಿಂತು ರೋಗ ರುಜೀನಗಳನ್ನು ಸೃಷ್ಠಿಸುವ ತಾಣವಾದರೂ ಸಹ ಸ್ಥಾನಿಕ ಗ್ರಾಮ ಪಂಚಾಯ್ತಿಯವರು ಇತ್ತಕಡೆ ಕಣ್ತೆರೆದು ನೋಡದೆ ನಿರ್ಲಕ್ಷ್ಯದ ದೋರಣೆ ತೋರುತ್ತಿದ್ದರೆ, ಇನ್ನೊಂದಡೆ ಡೆಂಗಿ ಮತ್ತು ಚಿಕುಂಗುನ್ಯಾ ,ಸಾಂಕ್ರಾಮಿಕ ರೋಗಗಳು ಆವರಿಸುವ ಆತಂಕದಲ್ಲಿರುವ ಗ್ರಾಮಸ್ಥರನ್ನು ನಿದ್ದೆಗೇಡಿಸಿ, ಪ್ರಾಣ ಭಯದ ಭೀತಿ ಸೃಷ್ಠಿಸಿದೆ.
ಹಲವಾರು ದಿನಗಳಿಂದ ಸ್ಥಳೀಯ ಗ್ರಾಮಸ್ಥರು ಡೆಂಗಿ ಮತ್ತು ಚಿಕುಂಗುನ್ಯಾ ಜ್ವರದ ರೋಗಗಳಿಗೆ ತುತ್ತಾಗಿ ಗೋಕಾಕ ನಗರ ಹಾಗೂ ಮತ್ತಿತರ ಪಟ್ಟಣಗಳಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ರೋಗ ಮುಕ್ತರಾಗಿ ಗ್ರಾಮಕ್ಕೆ ಮರಳಿ ಬರುತ್ತಿರುವ ಮತ್ತು ಬಡ ರೋಗಿಗಳ ಈ ರೋಗದ ನರಳಾಟದ ಬದುಕನ್ನು ಲೇಕ್ಕಿಸದ ಸ್ಥಾನಿಕ ಪ್ರಾಥಮಿಕ ಆರೋಗ್ಯ ಕೇಂದ್ರದವರು ಇಲ್ಲಿಯ ತನಕ ಈ ಡೆಂಗಿ ಮತ್ತು ಚಿಕುಂಗುನ್ಯಾ ಜ್ವರದ ರೋಗಗಳ ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇರುವುದು ವಿಪರ್ಯಾಸ ಸಂಗತಿಯಾಗಿದೆ. ಈ ರೋಗಗಳಿಗೆ ತುತ್ತಾದ ರೋಗಿಗಳು ಪ್ರಾಣ ಭಯದಲ್ಲಿ ಬದುಕು ಕಳೆಯುತ್ತಿರುವದನ್ನು ಗಮನಿಸದ ಹಾಗೂ ಆರೋಗ್ಯ ಕೇಂದ್ರದಲ್ಲಿ ಈ ರೋಗಗಳ ರೋಗಿಗಳಿಗೆ ಸರಿಯಾದ ಔಷದೋಪಚಾರದ ವ್ಯವಸ್ಥೆ ಇಲ್ಲದಿರುವುದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದವರ ನೀರ್ಲಕ್ಷ್ಯತನಕ್ಕೆ ಹಿಡಿದ ಕೈಗನ್ನಡಿ.
ಆರ್ಥಿಕ ಸದೃಢತೆ ಹೊಂದಿದ ಸ್ಥಳೀಯ ಕೆಲವು ಕುಟುಂಬದ ರೋಗಿಗಳು ನಗರ ಪಟ್ಟಣದ ಖಾಸಗಿ ಆಸ್ಥತ್ರೆಗಳಲ್ಲಿ ಈ ರೋಗಗಳ ಚಿಕಿತ್ಸೆ ಪಡೆಯುತ್ತಿದ್ದರೆ, ಇನ್ನುಳಿದ ಕೂಲಿ ನಾಲಿ ಮಾಡುವ ಗ್ರಾಮದ ಬಡ ಕುಟುಂಬದ ನಾಗರಿಕ ರೋಗಿಗಳು ಯಾವ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಹೊಗಬೇಕು ಅಂಬುವದು ಪ್ರಜ್ಞಾವಂತ ನಾಗರಿಕರ ಯಕ್ಷ ಪ್ರಶ್ನೆಯಾಗಿದೆ.
ಸ್ಥಾನಿಕ ಗ್ರಾಮ ಪಂಚಾಯ್ತಿಯವರು ಗ್ರಾಮದ ಪ್ರಮುಖ ಗಟಾರು ಸ್ವಚ್ಚ ಗೋಳಿಸದ ನಿರ್ಲಕ್ಷ್ಯತನ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದವರು ಈ ರೋಗಗಳ ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಇರುವುದು ಸ್ಥಳೀಯ ಬಡರೋಗಿಗಳನ್ನು ಮುಕ-ವಿಸ್ಮಿತರನ್ನಾಗಿಸಿದೆ. ಹೀಗಾಗಿ ಸ್ಥಳೀಯ ಗ್ರಾಮ ಪಂಚಾಯ್ತಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳ ಮೇಲೆ ಪ್ರಜ್ಞಾವಂತ ನಾಗರಿಕರು ಕಿಡಿಕಾರುತ್ತಿದ್ದಾರೆ.
ಬೆಟಗೇರಿ ಗ್ರಾಮದ ಮಕ್ಕಳು, ಯುವಕರು, ವೃದ್ದರು ದಿನದಿಂದ ದಿನಕ್ಕೆ ಈ ಡೆಂಗಿ ಮತ್ತು ಚಿಕುಂಗುನ್ಯಾ ಜ್ವರದ ರೋಗಗಳಿಗೆ ತುತ್ತಾಗಿರುತ್ತಿರುವುದನ್ನು ಸಂಬಂಧಿಸಿದ ಇಲಾಖೆ ಮೇಲಾಧಿಕಾರಿಗಳು ಇತ್ತ ಕಡೆ ಗಮನಹರಿಸಿ ಔಷದೋಪಚಾರ ಹಾಗೂ ಮುನ್ನೆಚ್ಚರಿಕೆ ವ್ಯವಸ್ಥೆಗಳ ಕುರಿತು ಶಿಘ್ರ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.
ಈ ರೋಗಗಳಿಂದ ಆತಂಕ, ಭಯ-ಭೀತಿಯಲ್ಲಿರುವ ಸ್ಥಳೀಯ ಗ್ರಾಮಸ್ಥರಿಗೆ ಶೀಘ್ರ ಪರಿಹಾರ ಕಲ್ಪಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇನ್ನಾದರೂ ಕ್ರಮ ಕೈಗೊಳ್ಳಲು ಮುಂದಾಗುವರೇ ಎಂಬುದನ್ನು ಕಾದು ನೋಡಬೇಕಷ್ಟೇ…!!!
=>

ಇಲ್ಲಿಯ ಗ್ರಾಮ ಪಂಚಾಯ್ತಿ ಅಧಿಕಾರಿಗಳ ಗಮನಕ್ಕೆ ಗ್ರಾಮದ ಪ್ರಮುಖ ಗಟಾರು ಸ್ವಚ್ಚ ಗೋಳಿಸುವ ಕುರಿತು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದವರು ಈ ರೋಗಗಳ ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸುತ್ತೆನೆ.

* ಲಕ್ಷ್ಮಣ ಚಂದರಗಿ

ಗ್ರಾ.ಪಂ ಸದಸ್ಯ

=>ಡೆಂಗಿ ಮತ್ತು ಚಿಕುಂಗುನ್ಯಾ ಜ್ವರದ ರೋಗಗಳು ನಿಯಂತ್ರಿಸಲು ಬೇಕಾದ ಅಗತ್ಯ ಔಷದೋಪಚಾರ ಹಾಗೂ ಗ್ರಾಮದಲ್ಲಿರುವ ಗಟಾರದ ಕೊಳಚೆ ನೀರು ಮತ್ತು ಪ್ರಮುಖ ರಸ್ತೆ ಪಕ್ಕದಲ್ಲಿರುವ ತಿಪ್ಪೆ ಗುಂಡಿಗಳನ್ನು ಸ್ವಚ್ಚಗೊಳಿಸುವ ಕಾರ್ಯ ಶೀಘ್ರ ಕೈಗೊಳ್ಳಲಾಗುವುದು

*ಬಿ.ಎಫ್ ದಳವಾಯಿ.

ಪಿ.ಡಿ.ಓ ಗ್ರಾ.ಪಂ ಬೆಟಗೇರಿ
=>

ಡೆಂಗಿ ಜ್ವರದ ರೋಗ ಇಲ್ಲಿಯ ರೊಗಿಗಳಿಗೆ ಹರಡಿದ್ದು ಈಗ ನಮ್ಮ ಗಮನಕ್ಕೆ ಬಂದಿದೆ, ಈ ಕಾಯಿಲೆಯನ್ನು ನಿಯಂತ್ರಿಸಲು ಬೇಕಾದ ಅಗತ್ಯ ಔಷದೋಪಚಾರವನ್ನು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದು – ಶ್ರೀಮತಿ ಆರ್.ಎಸ್ ಹಿರೇಮಠ, ವೈದ್ಯಾಧಿಕಾರಿಗಳು.

ಪ್ರಾಥಮಿಕ ಆರೋಗ್ಯ ಕೇಂದ್ರ ಬೆಟಗೇರಿ

loading...

LEAVE A REPLY

Please enter your comment!
Please enter your name here