ರೋಗಿಗಳಲ್ಲಿ ಗ್ಲೆöÊಸೆಮಿಕ್ ನಿಯಂತ್ರಣ ಸಾಧಿಸಲು ನೆರವು

0
4

ಕನ್ನಡಮ್ಮ ಸುದ್ದಿ-ಧಾರವಾಡ: ಜಾಗತಿಕ ಮಟ್ಟದ ಫಾರ್ಮಾಸ್ಯುಟಿಕಲ್ ಕಂಪೆನಿಯಾದ ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ (ಗ್ಲೆನ್‌ಮಾರ್ಕ್), ಭಾರತದಲ್ಲಿ ತನ್ನ ಹೊಚ್ಚ ಹೊಸತಾದ, ಪೇಟೆಂಟ್ ಇರುವ ಹಾಗೂ ವಿಶ್ವದರ್ಜೆಯ ಸಂಶೋಧನೆಯಿಂದ ಹೊರಹೊಮ್ಮಿದ ಸೋಡಿಯಂ ಗ್ಲೂಕೋಸ್ ಕೋ-ಟ್ರಾನ್ಸ್ಪೋರ್ಟರ್ (ಎಸ್‌ಜಿಎಲ್‌ಟಿ೨) ಇನ್‌ಹಿಬಿಟರ್ ರೆಮೋಗ್ಲೆöÊಫ್ಲೊÃಜಿನೆಟಾಬೋನೇಟ್ (ರೆಮೋಗ್ಲೆöÊಫ್ಲೊÃಜಿನ್) ಔಷಧವನ್ನು ಬಿಡುಗಡೆ ಮಾಡಿದೆ.
ಈ ಔಷಧಿಯನ್ನು ವಯಸ್ಕರಲ್ಲಿ ಕಾಣಿಸಿಕೊಳ್ಳುವ ಟೈಪ್-೨ ಡಯಾಬಿಟಿಸ್ ಮೆಲಿಟಸ್‌ನ ಚಿಕಿತ್ಸೆಗೆ ಬಳಸಲಾಗುತ್ತದೆ ಎಂದು ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್ನ ಇಂಡಿಯಾ ಫಾರ್ಮುಲೇಶನ್ಸ್, ಮಧ್ಯಪ್ರಾಚ್ಯ ಹಾಗೂ ಆಫ್ರಿಕಾ ವಿಭಾಗದ ಅಧ್ಯಕ್ಷ ಸುಜೇಶ್ ವಾಸುದೇವನ್ ಹೇಳಿದರು.

ಎಸ್‌ಜಿಎಲ್‌ಟಿ೨ ಇನ್‌ಹಿಬಿಟರ್‌ಗಳು ಡಯಾಬಿಟಿಸ್‌ಗೆ ನೀಡುವ ಹೊಸ ಔಷಧಗಳಾಗಿದ್ದು, ರೋಗಿಗಳಲ್ಲಿ ಗ್ಲೆöÊಸೆಮಿಕ್ ನಿಯಂತ್ರಣ ಸಾಧಿಸಲು ನೆರವಾಗುತ್ತವೆ. ಕಿಡ್ನಿಯಲ್ಲಿರುವ ಎಸ್‌ಜಿಎಲ್‌ಟಿ೨ ರಿಸೆಪ್ಟರ್‌ಗಳ ಮೇಲೆ ಪರಿಣಾಮ ಬೀರುವ ಮೂಲಕ ಇವು ಕಿಡ್ನಿಗಳು ಗ್ಲೂಕೋಸನ್ನು ಹೀರಿಕೊಳ್ಳುವುದನ್ನು ತಡೆಯುತ್ತವೆ. ಅದರಿಂದಾಗಿ ಮೂತ್ರದ ಮೂಲಕ ಗ್ಲೂಕೋಸ್ ನಮ್ಮ ದೇಹದಿಂದ ಹೊರಹೋಗುತ್ತದೆ ಜೊತೆಗೆ ದೇಹದ ತೂಕವನ್ನು ಕಡಿಮೆ ಮಾಡಲು ಹಾಗೂ ಹೃದ್ರೊÃಗಕ್ಕೆ ಸಂಬಂಧಿಸಿದ ಅಪಾಯವನ್ನು ಕಡಿಮೆ ಮಾಡಲು ಕೂಡ ನೆರವಾಗುತ್ತವೆ ಎಂದರು.
ಜಗತ್ತಿನಲ್ಲೆÃ ರೆಮೋಗ್ಲೆöÊಫ್ಲೊÃಜಿನ್ ಔಷಧವನ್ನು ಬಿಡುಗಡೆ ಮಾಡಿರುವ ಮೊಟ್ಟಮೊದಲ ಕಂಪನಿ ಗ್ಲೆನ್‌ಮಾರ್ಕ್ ಆಗಿದೆ. ಮತ್ತು ಈ ಹೊಸ ಮಾದರಿಯ ಔಷಧವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿಸಿಕೊಳ್ಳುತ್ತಿರುವ ದೇಶ ಭಾರತವಾಗಿದೆ. ಗ್ಲೆನ್‌ಮಾರ್ಕ್ ಕಂಪೆನಿಯು ಭಾರತದಲ್ಲಿ ರೆಮೋಗ್ಲೆöÊಫ್ಲೊÃಜಿನ್ ಔಷಧವನ್ನು ‘ರೆಮೋ’ ಮತ್ತು ‘ರೆಮೋಜೆನ್’ ಎಂಬ ಬ್ರಾö್ಯಂಡ್ ನೇಮ್‌ಗಳಡಿ ಬಿಡುಗಡೆ ಮಾಡಿದೆ. ಭಾರತದಲ್ಲಿ ಆಕ್ಟಿವ್ ಫಾರ್ಮಾಸ್ಯುಟಿಕಲ್ ಇನ್‌ಗ್ರಿÃಡಿಯಂಟ್ (ಎಪಿಐ) ಬಳಸಿ ತಯಾರಿಸಲಾದ ಏಕೈಕ ರೆಮೋಗ್ಲೆöÊಫ್ಲೊÃಜಿನ್ ಆಗಿದೆ.

ಐಕ್ಯುವಿಐಎ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ವರ್ಷವೊಂದಕ್ಕೆ ೧೧,೪೧೩ ಕೋಟಿ ರೂ. ಮೊತ್ತದ ಡಯಾಬಿಟಿಸ್ ಔಷಧಗಳು ಮಾರಾಟವಾಗುತ್ತವೆ. ಅದರಲ್ಲಿ ಎಸ್‌ಜಿಎಲ್‌ಟಿ೨ ಇನ್‌ಹಿಬಿಟರ್‌ಗಳ ಮಾರುಕಟ್ಟೆಯ ಗಾತ್ರ ೨೦೧೯ರ ಮಾರ್ಚ್ ವೇಳೆಗೆ ಸುಮಾರು ೫೭೪ ಕೋಟಿ ರೂ. ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.

loading...