ರೋಗಿಗಳಿಗೆ ಹಣ್ಣು ಹಂಪಲ ವಿತರಣೆ

0
63

ನಾಲತವಾಡ: ರಾಜ್ಯ ಸರಕಾರದ ದೇಹಲಿ ವಿಶೇಷ ಪ್ರತಿನಿಧಿ, ಮಾಜಿ ಸಚಿವ ಹಾಗೂ ಹಾಲಿ ಶಾಸಕರಾದ ಅಪ್ಪಾಜಿ ನಾಡಗೌಡ ಸ್ಥಳಿಯ ವೀರೇಶ್ವರ ವೃತ್ತದ ಬಳಿ ಸೇರಿದ್ದ ಅಪಾರ ಅಭಿಮಾನಿಗಳ ಮಧ್ಯೆ ತಮ್ಮ 60ನೇ ಹುಟ್ಟು ಹಬ್ಬವನ್ನು ಪತ್ನಿ ಸುವರ್ಣಾ ಅವರೊಂದಿಗೆ ಕೆಕ್‌ ಕಟ್‌ ಕತ್ತರಿಸುವದರ ಮೂಲಕ ಆಚರಿಸಿಕೊಂಡರು.
ಕತ್ತರಿಸಿ ಭಾವುಕಾರ ಅಪ್ಪಾಜಿ: ಹುಟ್ಟು ಹಬ್ಬದ ಸಿದ್ದತೆಗಳನ್ನು ಕಂಡ ಶಾಸಕರು ಸೇರಿದ್ದ ಅಭಿಮಾನಿಗಳು ಹಾಗೂ ಪಕ್ಷ ಬೇಧ ಮರೆತು ಶುಭ ಕೋರಲು ಆಗಮಿಸಿದ್ದ ಜನತೆಯನ್ನು ಕಂಡು ಏಕಾ ಏಕಾ ಭಾವುಕರಾದರು. ರಾಜು ಕಂದಗಲ್‌ ಕುಟುಂಬದ ಮೂಲಕ ಸನ್ಮಾನ ಸ್ವೀಕರಿಸಿ ನಂತರ ಮಾತನಾಡಿದ ಶಾಸಕರು ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿದ್ದೇನೆ, ನಿಮ್ಮ ಈ ಭಾಗದ ನಿಮ್ಮ ಬಲದಿನ್ನಿ ಧಣಿಗಳು ನಿಮ್ಮ ವಿಶ್ವಾಸಕ್ಕೆ ಧಕ್ಕೆ ಬರದಂತೆ ಕಾಪಾಡಿಕೊಳ್ಳುತ್ತೇನೆ, ನಿಮ್ಮ ಆಶೀರ್ವಾದದ ಫಲವೇ ನನ್ನನ್ನು ಈ ಮಟ್ಟಕ್ಕೆ ಏರಲು ಪೂರಕವಾಯಿತು, ನಾನು ನಿರೀಕ್ಷಿಸದ ಅಭಿಮಾನವನ್ನು ನನ್ನ ಮೇಲೆ ತೋರಿದ್ದೀರಿ ನಾನು ಸದಾ ನಿಮ್ಮವ ಎನ್ನುತ್ತಲೇ ಭಾವುಕರಾದರು.
ಈ ವೇಳೆ ಪ.ಪಂ ಅಧ್ಯಕ್ಷರಾದ ಪೃಥ್ವಿರಾಜ್‌ ನಾಡಗೌಡ, ಉಪಾಧ್ಯಕ್ಷರಾದ ವೀರೇಶ ಚಲವಾದಿ, ಸಮಾಜ ಸೇವಕರಾದ ಗುರುಪ್ರಸಾದ್‌ ದೇಶಮುಖ, ವೈ.ಬಿ.ಕ್ಷತ್ರಿ, ಲಕ್ಷ್ಮೀಬಾಯಿ ಕ್ಷತ್ರಿ, ಬಾಲಚಂದ್ರ ಗದಗೀನ, ಬಸವರಾಜ ಚಿನಿವಾರ, ಪರಮಣ್ಣ ತೋಟದ ರೆಡ್ಡಿ ಸಮಾಜದ ಪ್ರಮುಖರಾದ ಶಂಕರಗೌಡ ಗಾದಿ, ಪಾಪಣ್ಣ ಕಾನೀಕೆರಿ, ಹನಮಂತ ಕಾನೀಕೇರಿ, ಸಂಗಣ್ಣ ಬಾರಡ್ಡಿ, ಮಹಾಂತೇಶ ಚಿತ್ರನಾಳ, ಸಂಗಮೇಶ ಕಾನೀಕೇರಿ, ಹನಮಗೌಡ ಮಾಗಿ, ಬಸವರಾಜ ಗಡ್ಡಿ, ನಾನಾ ಇಲಾಖೆಗಳಾದ ಕಂದಾಯ, ಹೆಸ್ಕಾಂ, ಯುಕೆಪಿ, ಸಾರಿಗೆ ಇಲಾಖೆ, ಕೃಷಿ, ತೋಟಗಾರಿಕೆ ಇಲಾಖೆಯವರೂ ಸೇರಿದಂತೆ ಶಾಸಕರಿಗೆ ಸನ್ಮಾನಿಸಿ ಗೌರವಿಸಿದರು.

loading...