ರೋಷನ್ ಬೇಗ್ ಎಲ್ಲಿಗೆ ಬೇಕಾದರೂ ಹೋಗಲಿ: ಜಮೀರ್ ತಿರುಗೇಟು

0
15

ಬೆಂಗಳೂರು:- ರೋಷನ್ ಬೇಗ್ ಮಂತ್ರಿಯಾಗಿದ್ದಾಗ ಕಾಂಗ್ರೆಸ್ ಚೆನ್ನಾಗಿತ್ತು, ಈಗ ಅವರಿಗೆ ಪಕ್ಷ ಸರಿ ಇಲ್ಲವೇ ? ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಲೇವಡಿ ಮಾಡಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು , ರೋಷನ್ ಬೇಗ್ ಹೇಳಿದ ತಕ್ಷಣ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಅವರನ್ನು ಬದಲಾವಣೆ ಮಾಡಲು ಸಾಧ್ಯವೇ ? ಎಂದು ಪ್ರಶ್ನೆ ಮಾಡಿದರು.
ಯಾವ ಮುಸ್ಲಿಮ್ ನಾಯಕರು ಕೂಡ ಬಿಜೆಪಿಗೆ ಹೋಗುವುದಿಲ್ಲ, ಎಕ್ಸಿಟ್ ಪೋಲ್ ಸಮೀಕ್ಷೆಯನ್ನು ನೋಡಿ ರೋಷನ್ ಬೇಗ್ ಅವರು ಪಕ್ಷ ಬದಲಾವಣೆ ಮಾಡುವ ಮಾತು ಹೇಳಿರಬಹುದೇನೋ ಎಂದು ಚಾಟಿ ಬೀಸಿದರು.

ರೋಷನ್ ಬೇಗ್ ಅವರು ಎಲ್ಲಿಗೆ ಬೇಕಾದರೂ ಹೋಗಲಿ, ಅಧಿಕಾರ ಅನುಭವಿಸುವಾಗ ರೋಷನ್ ಬೇಗ್ ಗೆ ಪಕ್ಷ ಚೆನ್ನಾಗಿತ್ತು, ಕಾಂಗ್ರೆಸ್ ಚೆನ್ನಾಗಿತ್ತು, ನನ್ನನ್ನು ಮಂತ್ರಿ ಮಾಡುತ್ತಾರೆ ಎಂದು ನಾನು ಕನಸಲ್ಲೂ ಅಂದುಕೊಂಡಿರಲಿಲ್ಲ, ಯಾರನ್ನು ಕೂಡ ಸುಮ್ಮನೆ ಮಂತ್ರಿ ಮಾಡುವುದಿಲ್ಲ, ಸಮೀಕ್ಷೆ ನಡೆಸಿ, ಅಳೆದು ತೂಗಿ ಮಂತ್ರಿ ಮಾಡುತ್ತಾರೆ, ಯಾವಾಗಲೂ ಅಧಿಕಾರ ಸಿಕ್ಕಿದವರಿಗೇ ಅವಕಾಶ ಸಿಗಬೇಕು ಎಂಬ ನಿಯಮ ಇಲ್ಲವಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಬೇಗ್ ಅವರಿಗೆ ಯಾವ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಸರಿ ಕಾಣುತ್ತಿಲ್ಲವೋ ಗೊತ್ತಿಲ್ಲ,
ಎಕ್ಸಿಟ್ ಪೋಲ್ ಬರುವ ಮೊದಲು ಬೇಗ್ ಎಲ್ಲಿಗೆ ಹೋಗಿದ್ದರು? ಬೇಗ್ ಮಂತ್ರಿಯಾದಾಗ ಸಿದ್ದರಾಮಯ್ಯ ಚೆನ್ನಾಗಿದ್ದರು. ಈಗ ಚೆನ್ನಾಗಿಲ್ಲ ಎಂದರೆ ಹೇಗೆ ಎಂದು ಅವರು ಮೂದಲಿಸಿದರು.

loading...