ಲಂಚ ಪಡೆದು ಕಳ್ಳರನ್ನು ಬಿಟ್ಟ ಇನ್ಸ್‍ಪೆಕ್ಟರ್..!

0
13

ಬೆಂಗಳೂರು: ಕಳ್ಳತನ ಮಾಡಿ ಜೈಲು ಸೇರಿದ್ದ ನಾಲ್ವರು ಆರೋಪಿಗಳ ಬಳಿಯೇ ಇನ್ಸ್‍ಪೆಕ್ಟರ್ ಹಣ ತೆಗೆದುಕೊಂಡು ಬಿಟ್ಟಿದ್ದಾರೆಎಂಬ ಆರೋಪ ಕೇಳಿ ಬಂದಿದೆ. ಹಾಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.
ಕಾನೂನು ಕ್ರಮಗಳನ್ನು ಪಾಲಿಸಿಬೇಕಾದ ಖಾಕಿನೇ ಇಲ್ಲಿ ಕಳ್ಳರಿಗೆ ಸಾಥ್ ನೀಡಿದೆ ಎನ್ನುವ ಆರೋಪವಿದ್ದು,ಇನ್ಸ್‍ಪೆಕ್ಟರ್ ಪ್ರಶಾಂತ್ ಆರೋಪಿ ಗಳೊಂದಿಗೆ ಹಣದ ಡೀಲ್ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇತ್ತಿಚೇಗೆ ಈ ನಾಲ್ವರು ತುಪ್ಪ್ಪ ಮಾರಾಟ ಮಾಡೋ ನೆಪದಲ್ಲಿ ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿದ್ದರು. ವಿಚಾರಣೆ ಬಳಿಕ ಈ ನಾಲ್ವರನ್ನು ಅಸ್ಸಾಂನ ನಟೋರಿಯಸ್ ಡಕಾಯಿತಿ ತಂಡದವರು ಎಂದು ಗುರುತಿಸಲಾಗಿತ್ತು.
ಈ ತಂಡಕ್ಕೆ ಬಲೆ ಬೀಸಿದ ಸಂಜಯ್ ನಗರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ಕೂಡ ವ್ಯಕ್ತಪಡಿಸಲಾಗಿತ್ತು. ಆದರೆ ಈಗ ಸಂಜಯನಗರ ಇನ್ಸ್‍ಪೆಕ್ಟರ್ ಪ್ರಶಾಂತ್ ಹಣ ಪಡೆದು ನಾಲ್ವರು ಆರೋಪಿಗಳನ್ನ ಬಿಡುಗಡೆ ಮಾಡಿದ್ದಾರೆ ಎಂಬ ಶಂಕೆಯನ್ನ ಹಿರಿಯ ಅಧಿಕಾರಿಗಳು ವ್ಯಕ್ತಪಡಿಸಿ ತನಿಖೆ ಮುಂದುವರೆಸಿದ್ದಾರೆ. ಏಕೆಂದರೆ ಇನ್ಸ್‍ಪೆಕ್ಟರ್ ಆರೋಪಿಗಳಾದ ನಾಲ್ವರನ್ನು ಕರೆತಂದು ಎಂ.ಎಸ್.ರಾಮಯ್ಯ ಐಶ್ವರ್ಯ ಕಂಫರ್ಟ್ ಬಳಿ ಒಂದು ವಾರಗಳ ಕಾಲ ಲಾಡ್ಜ್‍ನಲ್ಲಿಟ್ಟಿದ್ದಾರೆ. ಬಳಿಕ 45 ಲಕ್ಷ ಡೀಲ್ ನಡೆಸಿ ಆರೋಪಿಗಳನ್ನ ಬಿಟ್ಟು ಕಳಿಸಿದ್ದಾರೆ ಎಂದು ದೃಶ್ಯದ ಮೂಲಕ ತಿಳಿಯಲಾಗಿದೆಯಂತೆ. ಹಾಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

loading...