ಲಂಚ ಪಡೆದ ಗ್ರಾಮಲೆಕ್ಕಾಧಿಕಾರಿ ಅಮಾನತಿಗೆ ಒತ್ತಾಯ

0
63

ರಾಯಬಾಗ 26: ತಾಲೂಕಿನ ಕಂಕಣವಾಡಿ ಪಟ್ಟಣದ ಗ್ರಾಮಲೆಕ್ಕಾಧಿರಿಯ ಎನ್‌ಒಸಿ ಕೊಡಲು ರೈತನೋರ್ವರಿಂದ ಲಂಚಪಡೆದಿದ್ದಾರೆಂದು ಆರೋಪಿಸಿ ಲಂಚ ಪಡೆದ ಗಾಮಲೆಕ್ಕಾಧಿಕಾರಿಯನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತ ಸಂಘಟನೆಯವರು ಮಂಗಳವಾರ ರಾಯಬಾಗ ತಹಶೀಲ್ದಾರ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಕೂಡಲೇ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಕೆ.ಎನ್‌.ರಾಜಶೇಖರ ಅವರಿಗೆ ಲಂಚ ಪಡೆದ ರಾಯಬಾಗ ಕಂದಾಯ ನಿರೀಕ್ಷಕ ಹಾಗೂ ಕಂಕಣವಾಡಿ ಗ್ರಾಮಲೆಕ್ಕಾಧಿಕಾರಿಯಾಗಿರುವ ಅಮರ ನವರತ್ನ ಅವರನ್ನು ಸ್ಥಳಕ್ಕೆ ಕರೆಯಿಸುವಂತೆ ಪಟ್ಟು ಹಿಡಿದಾಗ ಈ ಮಧ್ಯೆ ತಹಶೀಲ್ದಾರರಿಗೂ ಹಾಗೂ ರೈತ ಸಂಘದ ಮುಖಂಡರಿಗೆ ಮಾತಿನ ಚಕಮಕಿ ಕೂಡಾ ನಡೆಯುತು. ನಂತರ ರೈತ ಸಂಘದವರು ಪ್ರತಿಭಟನೆ ಜೋರುಮಾಡಿದಾಗ ಕಂಕಣವಾಡಿ ಗ್ರಾಮಲೆಕ್ಕಾಧಿಕಾರಿ ಅಮರ ನವರತ್ನ ಅವರನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಪಟ್ಟು ಹಿಡಿದರು ತಹಶೀಲ್ದಾರರು ಗ್ರಾಮಲೆಕ್ಕಾಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲು ಮೇಲಾಧಿಕಾರಿಗಳಿಗೆ ಪತ್ರ ಬೆರೆಯುತ್ತೆನೆಂದು ಹೇಳಿದ ಬಳಿಕ ರೈತಸಂಘದವರು ಪ್ರತಿಭಟನೆ ಹಿಂಪಡೆದರು. ರೈತರಿಗೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಯಾರದರೂ ಕಾಗದಪತ್ರ ಕೊಡಲು ತೊಂದರೆಮಾಡುವುದು ಹಾಗೂ ಲಂಚ ಕೇಳಿದರೆ ನನಗೆ ನೇರವಾಗಿ ವಿಷಯ ತಿಳಿಸಿ ಅಂತಹವರ ಮೇಲೆ ಸೂಕ್ತಕ್ರಮಕೈಗೊಳ್ಳುತ್ತೇನೆಂದು ತಹಶೀಲ್ದಾರರು ಹೇಳಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕರಾದ ಚೂನಪ್ಪ ಪೂಜೇರಿ, ಮಲ್ಲಪ್ಪ ಅಂಗಡಿ, ಬಾಬುಗೌಡಾ ಪಾಟೀಲ, ಗುರುನಾಥ ಹೆಗಡೆ, ಕಲ್ಲನಗೌಡ ಪಾಟೀಲ, ಮಂಜು ಗದಾಡಿ, ರಮೇಶ ಕಲ್ಹಾರ, ತ್ಯಾಗರಾಜ ಕದಮ, ಯಮನಪ್ಪ ಮಂಟೂರ, ತುಕಾರಾಮ ಕುರನಿಂಗ, ರವೀಂದ್ರ ಪಟೆಗಾರ, ಸುರೇಶ ಕೋಕೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

loading...