ಲಾರಿ ಡಿಕ್ಕಿ;ಕರ್ತವ್ಯ ನಿರತ ಎಎಸ್‍ಐ ಸಾವು:

0
39


ಯಲಬುರ್ಗಾ : ಲಾರಿ ಅಪಘಾತ ಸ್ಥಳವನ್ನು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಲಾರಿ ಡಿಕ್ಕಿಯಿಂದ ಕರ್ತವ್ಯನಿರತ ಎಎಸ್‍ಐ ಸ್ಥಳದಲ್ಲಿಯೇ ಮೃತಪಟ್ಟು,ಇಬ್ಬರು ಪೋಲೀಸ್ ಪೇದೆಗಳಿಗೆ ಗಂಭೀರ ಗಾಯವಾಗಿರುವ ಘಟನೆ ತಾಲೂಕಿನ ಗುನ್ನಾಳ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಬೆಳಗಿನ ಜಾವ ಜರಗಿದೆ.ತಾಲೂಕಿನ ಗುನ್ನಾಳ ಗ್ರಾಮದ ರಾ.ಹೆ.55ರಲ್ಲಿ ಲಾರಿಯೊಂದು ಪಲ್ಟಿಯಾಗಿದ್ದ ಸಂದರ್ಭದಲ್ಲಿ ಬೇವೂರು ಪೋಲೀಸ್ ಠಾಣೆಯ ಎಎಸ್‍ಐ ಅಮೀನಸಾಬ ಮುಖ್ಯ ಪೇದೆ ಶ್ಯಾಮಿಸಿಂಗ್,ಪೇದೆ ದಾದಾಪೀರ ಇವರು ಅಪಘಾತ ಸ್ಥಳ ಗುನ್ನಾಳ ಗ್ರಾಮದ ರಾ.ಹೆ.55 ರಲ್ಲಿ ಪರಿಶೀಸುತ್ತಿದ್ದ ಸಂದರ್ಭದಲ್ಲಿ ತಮಿಳುನಾಡು ಮೂಲದ ಲಾರಿಯೊಂದು ಎಎಸ್‍ಐ ಅಮೀನಸಾಬ(57) ಎನ್ನುವರಿಗೆ ಡಿಕ್ಕಿ ಹೊಡೆದ ಸಂದರ್ಭದಲ್ಲಿ ಸ್ಥಳದಲ್ಲಿಯೇ ಮೃತವಾದರೆ ಮುಖ್ಯ ಪೇದೆ ಶ್ಯಾಮಿಸಿಂಗ್,ಪೇದೆ ದಾದಾಪೀರ ಎನ್ನುವರಿಗೆ ಗಂಭೀರವಾದ ಗಾಯವಾಗಿದೆ.ಅವರನ್ನು ಬಾಗಲಕೋಟಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.ಪ್ರಕರಣವನ್ನು ಬೇವೂರು ಪೋಲೀಸ್ ಠಾಣೆಯಲ್ಲಿ ದಾಖಲಿಕೊಳ್ಳಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ತ್ಯಾಗರಾಜ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

loading...

LEAVE A REPLY

Please enter your comment!
Please enter your name here