ಲಿಂಗಾಯತರಿಗೆ ೨ಎ ಸ್ಥಾನಮಾನ ಸಿಎಂ ಭರವಸೆ

0
5

ಲಿಂಗಾಯತರಿಗೆ ೨ಎ ಸ್ಥಾನಮಾನ ಸಿಎಂ ಭರವಸೆ

ಬೆಳಗಾವಿ:
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆರಾಜ್ಯ ಸರ್ಕಾರದ ೨ ಎ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಹಕ್ಕೊತ್ತಾಯಕ್ಕೆ ಕೆಲವೇ ದಿನಗಳಲ್ಲಿ ಒಳ್ಳೆಯ ನಿರ್ಧಾರವನ್ನು ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಿ ಎಸ್‌ಯಡಿಯೂರಪ್ಪನವರುಇಂದು (೨೬ ನವಂಬರ್ ೨೦) ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರ ನಿಯೋಗಕ್ಕೆ ಸಕಾರಾತ್ಮಕ ಭರವಸೆ ನೀಡಿದರು.
ಪಂಚಮಸಾಲಿ ಮೀಸಲಾತಿಗಾಗಿ ಆಗ್ರಹಿಸಿ ಕೂಡಲಸಂಗಮ ಜಗದ್ಗುರುಗಳವರು ಆಕ್ಟೊಬರ್ ೨೮ರಂದು ಬೆಳಗಾವಿಯ ಸುವರ್ಣವಿಧಾನಸೌಧದ ಮುಂಭಾಗದಲ್ಲಿಐತಿಹಾಸಿಕ ಉಪವಾಸಸತ್ಯಾಗ್ರಹ ಹಮ್ಮಿಕೊಂಡಿದ್ದರು.
ಮುಖ್ಯಮAತ್ರಿಗಳು ಫೋನ್ ಮೂಲಕ ಉಪವಾಸ ಕೈಬಿಡುವಂತೆ ಸಂಪರ್ಕಿಸಿದಾಗ , ನವಂಬರ್ ೨೮ ರ ಒಳಗಾಗಿ ಸರ್ಕಾರ ಸ್ಪಂದಿಸಬೇಕು ಎಂಬ ಕಾಲಮಿತಿಯನ್ನು ಸಿಎಂ ರವರುಒಪ್ಪಿದ ಮೇಲೆ ಶ್ರೀಗಳು ಸತ್ಯಾಗ್ರವನ್ನು ಅಂತ್ಯಗೊಳಿಸಿದರು.
ಅದರAತೆಇAದು ಭೇಟಿ ಮಾಡಿದಾಗ ಮುಖ್ಯಮಂತ್ರಿಗಳು ಕೆಲವೇ ದಿನಗಳಲ್ಲಿ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಈ ಸಂದರ್ಭದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ರಾಜ್ಯಯುವಘಟಕದಅಧ್ಯಕ್ಷರಾದ ಸೋಮಶೇಖರ್ ಹಲ್ಯಾಲ್ ಉಪಸ್ಥಿತರಿದ್ದರು.

೦೬

loading...