ಲೂಫ್ತಾನ್ಸಾ ಜೊತೆ ವಿಸ್ಟಾರಾ ಒಪ್ಪಂದ: ಕೋಡ್ಶೇರ್ ವಿಮಾನ ಸೇವೆಗೆ ಚಾಲನೆ

0
4

ಬೆಂಗಳೂರು-  ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಲೂಫ್ತಾನ್ಸಾ ಜೊತೆ ವಿಸ್ಟಾರಾ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ ಗ್ರಾಹಕರಿಗೆ ‘ಕೋಡ್ಶೇರ್’ (codeshare) ವಿಮಾನ ಸೇವೆಯನ್ನು ಒದಗಿಸಲಿವೆ. ಇದರ ಪರಿಣಾಮ ಹೆಚ್ಚುವರಿ 126 ವಿಮಾನಗಳು ಪ್ರತಿ ವಾರಕ್ಕೆ ದೇಶದ 10 ಪ್ರಮುಖ ನಗರಗಳಗೆ ಹಾರಾಟ ನಡೆಸಲಿವೆ.
ಈಗಾಗಲೇ ಲೂಫ್ತಾನ್ಸಾ ಪ್ರತಿ ವಾರಕ್ಕೆ 56 ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ದೆಹಲಿ, ಮುಂಬೈ, ಬೆಂಗಳೂರು ಮತ್ತು ಚೆನ್ನೈಗಳಿಂದ ಸೇವೆ ಒದಗಿಸುತ್ತಿದೆ. ‘ಕೋಡ್ಶೇರ್’ ಒಪ್ಪಂದದ ಪ್ರಕಾರ ವಿಸ್ಟಾರದ ನೆಟ್ವರ್ಕ್ ನಲ್ಲಿ ಇನ್ನಷ್ಟು ಸ್ಥಳಗಳನ್ನು 2020ರ ಒಳಗಾಗಿ ಸೇರಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ.
ಲೂಫ್ತಾನ್ಸಾದ ಜಾಗತಿಕ ತಲುಪುವಿಕೆ ಹಾಗು ವಿಸ್ಟಾರದ ಉತ್ತಮ ಡೊಮೆಸ್ಟಿಕ್ ನೆಟ್ವರ್ಕ್ ನಿಂದ ಯುರೋಪಿಯನ್ ಏರ್‌ಲೈನ್‌ ಗ್ರಾಹಕರಿಗೆ ಭಾರತದ ಬಹಳಷ್ಟು ನಗರಗಳಿಗೆ ಸುಲಭವಾಗಿ ಪ್ರಯಾಣಿಸುವ ಅವಕಾಶ ದೊರೆಯಲಿದೆ. ಅಷ್ಟೇ ಅಲ್ಲದೆ ಭಾರತದ ಪ್ರಮುಖ ನಗರಗಳಾದ ಕೊಲ್ಕತ್ತಾ, ಗೋವಾ, ಪೂಣೆಯಿಂದ ಗ್ರಾಹಕರು ವಿದೇಶಕ್ಕೆ ಹೋಗಲು ಲೂಫ್ತಾನ್ಸಾದ ಫೈಟ್ ಗಳ ಸೇವೆ ಪಡೆದುಕೊಳ್ಳಬಹುದು.
“ಗ್ರಾಹಕರಿಗೆ ಅತ್ಯುತ್ತಮ ವಿದೇಶಿ ಪ್ರಯಾಣದ ಅನುಭವವನ್ನು ನೀಡುವ ದಿಸೆಯಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಗ್ರಾಹಕರು ನಮ್ಮ ಆದ್ಯತೆಯ ಪೈಲೆಜ್ ಪ್ರೋಗ್ರಾಮ್ ಅನ್ನು ‘ಕೋಡ್ಶೇರ್’ ರೂಟ್ ಗಳಲ್ಲಿ ಬಳಕೆ ಮಾಡಿಕೊಳ್ಳಬಹುದು. ಈ ಒಪ್ಪಂದದ ಪರಿಣಾಮ ಭಾರತದಲ್ಲಿ ಲೂಫ್ತಾನ್ಸಾ ಪ್ರಸಿದ್ದ ಯುರೋಪಿಯನ್ ಏರ್ಲೈನ್ ಎನ್ನುವುದನ್ನು ಗಟ್ಟಿಗೊಳಿಸುತ್ತದೆ” ಎಂದು ಸೌತ್ ಏಷ್ಯಾದ ಲೂಫ್ತಾನ್ಸಾ ಗ್ರೂಪ್ ಏರ್ಲೈನ್ಸ್ ನ ಸೀನಿಯರ್ ಡೈರೆಕ್ಟರ್ ಸೇಲ್ಸ್ ಜಾರ್ಜ್ ಇಟ್ಟಿಯಿಲ್ ಹೇಳಿದರು.
“ಪ್ರಯಾಣಿಕರಿಗೆ ವಿಸ್ಟಾರಾ – ಭಾರತದ ಪಂಚತಾರಾ ವಿಮಾನಯಾನವನ್ನು ಅನುಭವಿಸಲು ಅವಕಾಶ ಕಲ್ಪಿಸುತ್ತದೆ. ಲೂಫ್ತಾನ್ಸಾದೊಂದಿಗಿನ ನಮ್ಮ ಕೋಡ್ಶೇರ್’ಈ ದಿಕ್ಕಿನ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ ಮತ್ತು ಭಾರತದ ಹೊರಗೆ ನಮ್ಮ ಗ್ರಾಹಕರ ಸಂಖ್ಯೆಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ನಾವು ಸಾಮಾನ್ಯವಾಗಿ ಅನೇಕ ವಿಷಯಗಳನ್ನು ಹಂಚಿಕೊಳ್ಳುವ ವಿಮಾನಯಾನ ಸಂಸ್ಥೆಯಾದ ಲೂಫ್ತಾನ್ಸಾದೊಂದಿಗಿನ ನಮ್ಮ ಸಹಭಾಗಿತ್ವವನ್ನು ಬಲಪಡಿಸಲು ನಾವು ಸಂತೋಷಪಡುತ್ತೇವೆ” ಎಂದು ವಿಸ್ಟಾರಾದ ಮುಖ್ಯ ಕಾರ್ಯತಂತ್ರ ಅಧಿಕಾರಿ ವಿನೋದ್ ಕಣ್ಣನ್ ತಿಳಿಸಿದ್ದಾರೆ.

loading...