ಲೋಕಸಭಾ ಚುನಾವಣಾ: ಪ್ರಚಾರಾರ್ತವಾಗಿ ರೋಡ್ ಶೋ

0
11

 

ಮುಂಡಗೋಡ: ಚಿತ್ರ ನಟಿ ತಾರಾ ಹಾಗೂ ಉತ್ತರಕನ್ನಡ ಲೋಕಸಭಾ ಕ್ಷೆÃತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಅವರಿಂದ ಲೋಕಸಭಾ ಚುನಾವಣಾ ಪ್ರಚಾರಾರ್ತವಾಗಿ ಪಟ್ಟಣದಲ್ಲಿ ಶನಿವಾರ ಬಾರೀ ರೋಡ್ ಶೋ ನಡೆಯಿತು. ಶಿರಸಿ ರಸ್ತೆಯ ಸೇವಾಲಾಲ ದೇವಾಲಯದಿಂದ ಹೊರಟ ತೆರೆದ ವಾಹನ ರೋಡ್ ಶೋ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ದೇಶಕ್ಕಾಗಿ ಮತ್ತೊಮ್ಮೆ ಮೋದಿ ಸರ್ಕಾರ ತನ್ನಿ ಎಂದು ಘೋಷಣೆ ಮೊಳಗಿಸಲಾಯಿತು. ಕಾರವಾರ ಕ್ಷೆÃತ್ರದ ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜಿ ನಾಯ್ಕ, ಮಾಜಿ ಶಾಸಕ ವಿ.ಎಸ್ ಪಾಟೀಲ, ಜಿ.ಪಂ ಸದಸ್ಯ ಎಲ್.ಟಿ.ಪಾಟೀಲ, ದುರೀಣ ಸಂತೋಷ ರಾಯ್ಕರ, ಗುಡ್ಡಪ್ಪ ಕಾತೂರ, ಉಮೇಶ ಬಿಜಾಪುರ ಮುಂತಾದವರು ಉಪಸ್ಥಿತರಿದ್ದರು.

loading...