ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಕುದುರೆಗೆ ಮೊದಲ ಆದ್ಯತೆ : ಸಚಿವ ಸತೀಶ ಜಾರಕಿಹೊಳಿ

0
31

ಕನ್ನಡಮ್ಮ ಸುದ್ದಿ- ಬೆಳಗಾವಿ: ಬೆಳಗಾವಿ ಲೋಕಸಭಾ ಚುನಾವಣೆ ಅಭ್ಯರ್ಥಿಯ ಆಯ್ಕೆ ಅಂತಿಮವಾಗಿಲ್ಲ.ಮೂರು ಸುತ್ತಿನ ಬಳಿಕವೇ ಆಯ್ಕೆ‌ಮಾಡಲಾಗುತ್ತದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಅವರು ನಗರದಲ್ಲಿ ಸೋಮವಾರ ಸುವರ್ಣಸೌಧದಲ್ಲಿ ಮಾಧ್ಯಮರೊಂದಿಗೆ ಮಾತನಾಡಿ, ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಅಭ್ಯರ್ಥಿ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಎರಡು ಮೂರು ಸುತ್ತಿನ ಮಾತುಕತೆ ಆಗಬೇಕು. ಮರಾಠ, ಲಿಂಗಾಯತ ಎಂಬುವುದನ್ನು ಪರಿಗಣಿಸದೆ. ಗೆಲ್ಲುವ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು ಎಂದರು.ಅಲ್ಲದೆ ಇನ್ನೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಸೇರಿದಂತೆ ನಾಲ್ವರಿಗೆ ಪಕ್ಷ ನೋಟಿಸ್ ನೀಡಿದ್ದು, ಪಕ್ಷದ ನಾಯಕರು ಕರೆದು ಸಮಸ್ಯೆ ಬಗೆ ಹರಿಯಬಹುದು. ಸಮಸ್ಯೆಗೆ ಹರಿಯದೆ ಇದ್ದರೆ ಪಕ್ಷ‌ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದ್ದಾರೆ.

loading...