ಲೋಕಸಭೆಯ ಜಯ ಈ ರಾಷ್ಟçದ ಜನತೆಗೆ ಸಂಧ ಜಯ: ಶಾಸಕ ದೊಡ್ಡನಗೌಡ ಪಾಟೀಲ

0
13

ಹುನಗುಂದ-ಈ ದೇಶಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಳೆದ ಐದು ವರ್ಷಗಳಲ್ಲಿ ಮಾಡಿರುವ ಅತ್ಯದ್ಬುತ ಸಾಧನೆ ಅವರು ತಗೆದುಕೊಂಡ ದಿಟ್ಟ ನಿರ್ಧಾರ, ದೇಶದ ರಕ್ಷಣೆ, ಭದ್ರತೆ ಹಾಗೂ ಅಭಿವೃದ್ದಿ ಮಾಡಿರುವುದ್ದನ್ನು ನೋಡಿದ ದೇಶದ ಜನರು ಒಂದು ತಿರ್ಮಾನ ಮಾಡಿ ದೇಶದಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡಿ ಅತೀ ಹೆಚ್ಚು ಸ್ಥಾನವನ್ನು ಕೊಡುವುದರ ಮೂಲಕ ಬಾಗಲಕೋಟಿಯಲ್ಲಿ ಪಿ.ಸಿ.ಗದ್ದಿಗೌಡರನ್ನು ನಾಲ್ಕನೆಯ ಬಾರಿಗೆ ಜನರು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ.ಇದರಿಂದ ಕರ್ನಾಟಕ ರಾಜ್ಯದಲ್ಲಿ ೨೫ ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿರುವುದು ಇದು ನಿಜವಾದ ಜನ ಆಶೀರ್ವಾದವಾಗಿದೆ.ಈ ಲೋಕಸಭೆಯ ಜಯ ಈ ರಾಷ್ಟçದ ಜನತೆಗೆ ಸಂಧ ಜಯವಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

loading...