ಲೋಕಸಭೆ ಚುನಾವಣೆ: ಎ.೧೮ಕ್ಕೆ ಗಂಗಾವತಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ

0
17

ಗಂಗಾವತಿ: ಲೋಕಸಭೆ ಚುನಾವಣೆ ಪ್ರಚಾರಾರ್ಥವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಗಂಗಾವತಿಗೆ ಎ.೧೮ ರಂದು ಆಗಮಿಸಲಿದ್ದು, ಪ್ರಯುಕ್ತ ಸಂಸದ ಸಂಗಣ್ಣ ಕರಡಿ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ಮಾಜಿ ಜಿ.ವೀರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸೇರಿದಂತೆ ಪಕ್ಷದ ಮುಖಂಡರು ಸ್ಥಳ ಪರಿಶೀಲಿಸಿದರು.
ಗುರುವಾರ ಗಂಗಾವತಿಗೆ ಆಗಮಿಸಿದ್ದ ಸಂಸದ ಸಂಗಣ್ಣ ಕರಡಿ ನಗರದ ಹೊರ ಹೊಲಯದಲ್ಲಿ ಪ್ರಧಾನಮಂತ್ರಿಗಳ ಕಾರ್ಯಕ್ರಮ ಆಯೋಜನೆಗೆ ಸ್ಥಳವನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಅವರು ದೇಶದಲ್ಲಿ ಈ ಚುನಾವಣೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಪ್ರತಿಯೊಂದು ಕ್ಷೆÃತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ. ಕೊಪ್ಪಳ ಲೋಕಸಭೆ ಕ್ಷೆÃತ್ರದಿಂದ ಪಕ್ಷದ ನಾಯಕರು ನನಗೆ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ಪಕ್ಷದ ಮುಖಂಡರು, ಎಲ್ಲಾ ಕ್ಷೆÃತ್ರದ ಶಾಸಕರು, ಮಾಜಿ ಶಾಸಕರು, ಕಾರ್ಯಕರ್ತರ ಪರಿಶ್ರಮದಿಂದ ನಾನು ಮತ್ತೆ ಆಯ್ಕೆಯಾಗುವುದು ಖಚಿತ. ಚುನಾವಣೆಯಲ್ಲಿ ಈ ಭಾಗದಲ್ಲಿ ಬಿಜೆಪಿ ಅಭ್ಯರ್ಥಿಗಳು ಪ್ರಚಂಡ ಬಹುಮತದಿಂದ ಆಯ್ಕೆಯಾಗುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಎ.೧೮ ರಂದು ಪ್ರಚಾರ ಭಾಷಣ ಮಾಡಲು ಆಗಮಿಸುತ್ತಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ. ಹೀಗಾಗಿ ಸೂಕ್ತವಾದ ಸ್ಥಳವನ್ನು ಎರಡು ಮೂರು ಕಡೆ ಗುರುತಿಸಲಾಗಿದೆ. ರಾಜ್ಯ ಸಮಿತಿ ಮುಖಂಡರು ಸೇರಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಭದ್ರತೆ, ಪಾರ್ಕಿಂಗ್ ಮತ್ತಿತರ ವ್ಯವಸ್ಥೆಗೆ ಅನುಕೂಲವಾಗುವ ಸ್ಥಳ ನಿಗದಿಪಡಿಸಲಾಗುವುದು. ಕ್ಷೆÃತ್ರದ ಎಲ್ಲಾ ಮತದಾರರು ಭಾಗವಹಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷ ವಿರೇಶ ಬಲಕುಂದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಗ್‌ರಾವ್ ಕುಲಕರ್ಣಿ, ಮುಖಂಡ ಚನ್ನವೀರಗೌಡ, ಹನುಮಂತಪ್ಪ ನಾಯಕ, ಚನ್ನಪ್ಪ ಮಳಿಗೆ ಮತ್ತಿತರು ಇದ್ದರು.

loading...