ಲೋಕಸಭೆ ಚುನಾವಣೆ ಫಲಿತಾಂಶ: ಎಚ್ಚರಿಕೆ ವಹಿಸಲು ಸೂಚನೆ

0
1

ನರಗುಂದ: ಲೋಕಸಭೆ ಚುನಾವಣೆಯ ಫಲಿತಾಂಶದ ವಿಜಯೋತ್ಸವ ಆಚರಣೆ ಮತ್ತು ನರಗುಂದ ಪುರಸಭೆಯ ಚುನಾವಣೆಗೆ ಸಂಬಂಧಿಸಿದಂತೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೋಲಿಸ ಇಲಾಖೆ ಕಟ್ಟು ನಿಟ್ಟಿನ ಎಚ್ಚರವನ್ನು ವಹಿಸಬೇಕು. ಪ್ರತಿಯೊಬ್ಬ ಸಾರ್ವಜನಿಕರು ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಸಹೋದರರಾಗಿ ಇರಬೇಕು ಎಂದು ತಹಸೀಲ್ದಾರ ಯಲ್ಲಪ್ಪ ಗೋನೆಣ್ಣವರ ಹೇಳಿದರು.

ಲೋಕಸಭೆ ಚುನಾವಣೆಯ ಮತ ಎಣಿಕೆ ಹಾಗೂ ಪಟ್ಟಣದ ಪುರಸಭೆಗೆ ಮೇ.೨೯ ರಂದು ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ತಹಸೀಲ್ದಾರ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಸಿಪಿಐ ಸುಧೀರಕುಮಾರ ಬೆಂಕಿ ಮಾತನಾಡಿ, ಮಾದರಿ ನೀತಿ ಸಂಹಿತೆ ಜಾರಿ ಇರುವುದರಿಂದ ಸಾರ್ವಜನಿಕರು ತಾಲೂಕಿನ ವಿವಿಧ ಸ್ಥಳಗಳಲ್ಲಿ ಗುಂಪು ಗುಂಪಾಗಿ ನಿಲ್ಲುವುದನ್ನು ನಿಷೇಧಿಸಲಾಗಿದೆ. ಪಟಾಕಿ, ಬಲವಂತವಾಗಿ ಬಣ್ಣ ಎರಚುವುದು, ಕುಡಿದ ಮತ್ತಿನಲ್ಲಿ ಮಹಿಳೆಯರಿಗೆ ಅವಾಚ್ಯವಾಗಿ ನಿಂದಿಸುವುದು. ಅಕ್ರಮ ಸಾರಾಯಿ ಮಾರಾಟ ಮಾಡುವುದು ಕಂಡು ಬಂದರೆ ಅಂತವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಸಂತ ಜೋಗಣ್ಣವರ, ಶಿವಾನಂದ ಮುತವಾಡ ಮಾತನಾಡಿದರು. ಚನ್ನಯ್ಯ ಸಂಗಳಮಠ, ಬಿ.ಬಿ.ಐನಾಪೂರ, ಬಸ್ಸು ಪಾಟೀಲ, ಚಂದ್ರು ಪವಾರ, ಅಜ್ಜು ಪಾಟೀಲ, ಮಂಜು ಮೆಣಸಗಿ, ವಿಠ್ಠಲ ಹವಾಲ್ದಾರ, ಪ್ರಶಾಂತ ಜೋಶಿ, ಸಂಗಣ್ಣ ಕಳಸಾ, ಮಹೇಶ ಹಟ್ಟಿ, ಚನ್ನಪ್ಪಗೌಡ ಪಾಟೀಲ, ಪವಾಡೆಪ್ಪ ವಡ್ಡಿಗೇರಿ, ಪ್ರಕಾಶ ಹಾದಿಮನಿ, ಸಂಜು ನಲವಡೆ, ರವಿ ಹುಂಬಿ ಅನೇಕರು ಉಪಸ್ಥಿತರಿದ್ದರು.

loading...