ಲೋಕಸಭೆ ಮೀಸಲು ಕ್ಷೆÃತ್ರದ ಫಲಿತಾಂಶ ಕ್ಷಣಗಣನೆ :ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ

0
10

 

ಕಾವೇರಿ ಗು ಝೇಂಡೆ
ವಿಜಯಪುರ : ವಿಜಯಪುರ ಲೋಕಸಭೆ ಮೀಸಲು ಕ್ಷೆÃತ್ರದ ಫಲಿತಾಂಶ ಕ್ಷಣಗಣನೆ ಆರಂಭವಾಗಿದೆ. ಪ್ರಜಾಪ್ರಭು ಕಳೆದ ಎಪ್ರಿಲ್ ೨೩ ರಂದು ತಿಳಿಸಿರುವ ನಿರ್ಧಾರ ಗುರುವಾರ ಬಹಿರಂಗಗೊಳ್ಳಲಿದೆ.

ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಪೂರ್ಣಗೊಳಿಸಿದೆ. ವಿಜಯಪುರದ ಸೈನಿಕ ಶಾಲೆಯಲ್ಲಿ ಬೆಳಿಗ್ಗೆ ೮ ರಿಂದ ಮತ ಎಣಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಚುನಾವಣಾ ಆಯೋಗದ ನಿರ್ದೇಶನದ ಹಿನ್ನೆಲೆಯಲ್ಲಿ ಪ್ರತಿ ವಿಧಾನಸಭಾ ಮತಕ್ಷೆÃತ್ರದಲ್ಲಿ ೦೫ ವಿವಿಪ್ಯಾಟ್‌ಗಳನ್ನು ಎತ್ತುವ ಮೂಲಕ ಗುರುತಿಸಿ ಸ್ಲಿÃಪ್‌ಗಳನ್ನು ಎಣಿಕೆ ಮಾಡಲಾಗುತ್ತಿದೆ.
ಎಂಟು ವಿಧಾನಸಭಾ ಕ್ಷೆÃತ್ರಗಳ ಇವಿಎಂ ಮಷೀನ್ ಕೌಂಟಿಂಗ್‌ಗಾಗಿ ತಲಾ ೧೪ ಟೇಬಲ್‌ಗಳಂತೆ ಒಟ್ಟು ೧೧೨ ಟೇಬಲ್‌ಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಜರುಗಲಿದೆ.

ಮತದಾನ ಎಣಿಕೆ ಪ್ರಕ್ರಿಯೆಗೆ ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದ್ದು, ಒಂದೆಡೆಯಾದದರೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಹಾಗೂ ಪಕ್ಷಗಳ ಕಾರ್ಯಕರ್ತರಲ್ಲಿ ಎದೆಬಡಿತ ಹೆಚ್ಚಿಸಿದೆ.
ಗಲ್ಲಿ-ಗಲ್ಲಿಗಳಲ್ಲಿ ಚುನಾವಣೆಯ ಕುರಿತು ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಯಾರಿಗೆ ವಿಜಯಲಕ್ಷಿö್ಮÃ ಒಲಿಯಲಿದ್ದಾಳೆ ಎಂಬುದು ನಾಳೆ ಮಧ್ಯಾಹ್ನದವರೆಗೆ ತೀರ್ಮಾನವಾಗಲಿದೆ.

ಕಳೆದ ಎಪ್ರಿಲ್ ೨೩ ರಂದು ನಡೆದಿದ್ದ ಚುನಾವಣೆಯಲ್ಲಿ ಶೇ.೬೧.೭೭ ರಷ್ಟು ಮತದಾನವಾಗಿತ್ತು. ಒಟ್ಟು ೧೭,೯೫,೯೩೧ ಮತದಾರರ ಪೈಕಿ ಒಟ್ಟು ೧೧೦೯೩೯೦ ಮತದಾರರು ಹಕ್ಕು ಚಲಾಯಿಸಿದ್ದರು. ಒಟ್ಟು ೯೨೧೨೫೮ ಪುರುಷ ಮತದಾರರ ಪೈಕಿ ೫೮೮೭೦೯ ಮತದಾರರು ಹಕ್ಕು ಚಲಾಯಿಸಿದ್ದರೆ, ಒಟ್ಟು ೮೭೪೪೦೪ ಮಹಿಳಾ ಮತದಾರರ ಪೈಕಿ ೫೨೦೬೫೬ ಮತದಾರರು ಹಕ್ಕು ಚಲಾಯಿಸಿದರು. ಒಟ್ಟು ೨೬೯ ಇತರೆ ಮತದಾರರ ಪೈಕಿ ೨೫ ಜನ ಇತರೆ ಮತದಾರರು ಮತ ಚಲಾಯಿಸಿದ್ದರು.
ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ನಿಷೇದ

ಮತಎಣಿಕೆ ಕೇಂದ್ರದಲ್ಲಿ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಸೇರಿದಂತೆ ಚುನಾವಣಾ ಏಜೆಂಟರಾದಿಯಾಗಿ ಯಾರೊಬ್ಬರು ಮೊಬೈಲ್ ಫೋನ್ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿಲ್ಲ. ಅಧಿಕೃತ ಪ್ರವೇಶ ಪತ್ರ ಹೊಂದಿವರಿಗೆ ಮಾತ್ರ ಮತಎಣಿಕೆ ಕೇಂದ್ರಕ್ಕೆ ಪ್ರವೇಶ ನೀಡಲಾಗುತ್ತಿದೆ.
ಮತ ಎಣಿಕೆ ಕೇಂದ್ರವಾದ ಸೈನಿಕ ಶಾಲೆಯ ೧ ನೇ ಗೇಟ್‌ನಿಂದ ಅಧಿಕಾರಿಗಳು, ಸಿಬ್ಬಂದಿ, ಮಾಧ್ಯಮದವರಿಗೆ ಪ್ರವೇಶ ನೀಡಲಾಗುತ್ತಿದ್ದು, ೨ ನೇ ಗೇಟ್‌ನಿಂದ ಮತ ಎಣಿಕೆ ಏಜೆಂಟರಿಗೆ ಒಳಬಿಡಲಾಗುತ್ತಿದೆ

ಕಣದಲ್ಲಿರುವ ಅಭ್ಯರ್ಥಿಗಳ ವಿವರ
ರಮೇಶ ಚಂದಪ್ಪ ಜಿಗಜಿಣಗಿ (ಬಿಜೆಪಿ), ಶ್ರಿÃನಾಥ ಪೂಜಾರಿ (ಬಹುಜನ ಸಮಾಜ ಪಕ್ಷ), ಡಾ.ಸುನೀತಾ ಚವ್ಹಾಣ (ಜೆಡಿಎಸ್), ಗುರುಬಸವ ರಬಕವಿ (ಉತ್ತಮ ಪ್ರಜಾಕೀಯ ಪಕ್ಷ), ಶ್ರಿÃ ವೆಂಕಟೇಶ್ವರ ಸ್ವಾಮೀಜಿ (ಪಕ್ಷೆÃತರ), ಯಮನಪ್ಪ ವಿಠ್ಠಲ ಗುಣದಾಳ (ಪಕ್ಷೆÃತರ), ರುದ್ರಪ್ಪ ದೇವಪ್ಪ ಚಲವಾದಿ (ಪಕ್ಷೆÃತರ), ದಾದಾಸಾಹೇಬ ಸಿದ್ಧಪ್ಪ ಬಾಗಾಯತ (ಪಕ್ಷೆÃತರ), ದೋಂಡಿಬಾ ರಾಮು ರಾಠೋಡ (ಪಕ್ಷೆÃತರ), ಧರೆಪ್ಪ ಮಹಾದೇವ ಅರ್ಧಾವೂರ (ಪಕ್ಷೆÃತರ), ಬಾಲಾಜಿ ವಡ್ಡರ ಯತ್ನಾಳ (ಪಕ್ಷೆÃತರ), ರಾಮಪ್ಪ ಹರಿಜನ (ಪಕ್ಷೆÃತರ) ಒಟ್ಟು ೧೨ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರೆಲ್ಲರ ಭವಿಷ್ಯ ಗುರುವಾರ ನಿರ್ಧಾರವಾಗಲಿದೆ.

loading...