ಲೋಕ ಕಲ್ಯಾಣಕ್ಕಾಗಿ ಸತ್ಯಾತ್ಮ ತೀರ್ಥ ಶ್ರಿÃಗಳಿಂದ ಮಹಾಪೂಜೆ

0
8

 

ಲೋಕ ಕಲ್ಯಾಣಕ್ಕಾಗಿ ಸತ್ಯಾತ್ಮ ತೀರ್ಥ ಶ್ರಿÃಗಳಿಂದ ಮಹಾಪೂಜೆ

ಕನ್ನಡಮ್ಮ ಸುದ್ದಿ-ರಾಮದುರ್ಗ: ಪಟ್ಟಣದ ಶ್ರಿÃ ರಾಘವೇಂದ್ರ ಸ್ವಾಮಿ ಮಠದಲ್ಲಿ ಸೋಮವಾರ ಲೋಕ ಕಲ್ಯಾಣಕ್ಕಾಗಿ ಶ್ರಿÃ ಸತ್ಯಾತ್ಮ ತೀರ್ಥ ಮಹಾಸ್ವಾಮಿಗಳ ಪಾದಪೂಜೆ ತಪ್ತ ಮುದ್ರಧಾರಣೆ ಹಾಗೂ ಮೂಲ ರಾಮದೇವರ ಪೂಜಾ ಕಾರ್ಯಕ್ರಮ ಹಲವು ಭಕ್ತಾಧಿಗಳ ಸಮ್ಮುಖದಲ್ಲಿ ಹಿಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿತು.
ಕಾರ್ಯಕ್ರಮದ ಪ್ರಯುಕ್ತ ವೆಂಕಟೇಶ ಉಡುಪಿ ಅವರ ನಿವಾಸದಲ್ಲಿ ಶ್ರಿÃ ಸತ್ಯಾತ್ಮ ತೀರ್ಥ ಮಹಾಸ್ವಾಮಿಗಳ ಸಮ್ಮುಖದಲ್ಲಿ ಮೂಲ ರಾಮದೇವರ ಪೂಜೆ ನೇರವೆರಿಸಲಾಯಿತು. ನಂತರ ಶ್ರಿÃ ರಾಯರ ಮಠದಲ್ಲಿ ತಪ್ತ ಮುದ್ರಧಾರಣೆ ಹಾಗೂ ಪಾದಪೂಜಾ ಕಾರ್ಯಕ್ರಮವನ್ನು ಪಟ್ಟಣದ ಸಮಸ್ತ ಬ್ರಾಹ್ಮಣ ಸಮಾಜದ ಮುಖಂಡ ಸಮ್ಮುಖದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ತಾಲೂಕಾಧ್ಯಕ್ಷ ಸದಾನಂದ ಕುಲಕರ್ಣಿ, ನಾರಾಯಣಾಚಾರ್ಯ ಚಪ್ಪರ, ಆರ್.ಬಿ. ಗದಗಕರ, ಆನಂದತೀರ್ಥ ಜೋಶಿ, ರಾಮಚಂದ್ರ ಕುಲಕರ್ಣಿ, ಗಿರೀಶ ಕುಲಕರ್ಣಿ, ವಾಸುದೇವ ಗೋಡಖಿಂಡಿ, ಸುಹಾಸ ಗೋಡಖಿಂಡಿ, ಪ್ರಸಾದ ಕುಲಕರ್ಣಿ, ವಿಜಯೇಂದ್ರಾಚಾರ್ಯ ಜೋಶಿ, ಪ್ರಹ್ಲಾದಾಚಾರ್ಯ ಜೋಶಿ, ಜಿ.ಪಂ ಸದಸ್ಯ ರಮೇಶ ದೇಶಪಾಂಡೆ, ಗೋವಿಂದ ಮೋಡಕ, ಡಾ| ನರೇಂದ್ರ ವಾಳ್ವೆÃಕರ, ಪವನ ದೇಶಪಾಂಡೆ, ರಾಮಭಟ್ ದೊಡವಾಡ, ಕೃಷ್ಣಾಜಿ ಕುಲಕರ್ಣಿ, ಸೇರಿದಂತೆ ಬ್ರಾಹ್ಮಣ ಸಮಾಜದ ಹಿರಿಯ ಮುಖಂಡರು ಹಾಗೂ ವಿವಿಧ ಮಹಿಳಾ ಭಜನಾ ಸಂಘಗಳ ಪದಾಧಿಕಾರಿಗಳು ಇದ್ದರು.

೦೬

loading...