ಲೋಹದ ಹಕ್ಕಿಗಳ ಕಲರವ: ಸದನ ಖಾಲಿ ಖಾಲಿ

0
17

ಬೆಂಗಳೂರು,ಫೆ.6-ಯಲಹಂಕದಲ್ಲಿ ಲೋಹದ ಹಕ್ಕಿಗಳ ಕಲರವದ ಚಮತ್ಕಾರವೋ ಏನೋ ಮೂರನೇ ದಿನದ ವಿಧಾನಸಭೆಯ ಕಲಾಪ ಕಳೆಕಟ್ಟಿಲ್ಲ. ಕಲಾಪ ಆರಂಭವಾಗುತ್ತಿದ್ದಂತೆಯೇ ಆಡಳಿತ ಮತ್ತು ವಿರೋಧಿ ಸದಸ್ಯರ ಸಂ­ಖ್ಯೆ ಬಹಳಷ್ಟು ಕಡಿಮೆ ಇತ್ತು. ಬಹುತೇಕ ಆಸನಗಳು ಖಾಲಿಖಾಲಿ ಇದ್ದು ಒಟ್ಟಾರೆ ಬಿಕೋ ಎನ್ನುವ ವಾತಾವರಣ ನಿರ್ಮಾಣವಾಗಿತ್ತು.

ಅತ್ತ ಪ್ರೇಕ್ಷಕರ ಗ್ಯಾಲರಿಯಲ್ಲೂ ಜನ ಇರಲಿಲ್ಲ, ಶಾಸಕರ ಸಂಖ್ಯೆಯೂ ಬೆರಳೆಣಿಕೆಯಷ್ಟು ಇತ್ತು. ಕಲಾಪ 15 ನಿಮಿಷ ತಡವಾಗಿ ಆರಂಭವಾಯಿತು. ಆದರೂ ಸದಸ್ಯರು ಬರಲಿಲ್ಲ. ಕಲಾಪ ಕಳೆ ಕಟ್ಟಲಿಲ್ಲ. ಬಿಕೋ ಎನ್ನುತ್ತಿತ್ತು. ಒಂದೇ ಮಾತಿನಲ್ಲಿ ಹೇಳುವುದಾದರೆ ಮೂರನೇ ದಿನಕ್ಕೆ ಸುಸ್ತು ಹೊಡೆದಂತೆ ಭಾಸವಾಗಿತ್ತು. ಇಂದಿನಿಂದ ನಗರದಲ್ಲಿ ಐದು ದಿನಗಳ ಕಾಲ ವೈಮಾನಿಕ ಪ್ರದರ್ಶನ ಆರಂಭವಾಗಿರುವ ಹಿನ್ನೆಲೆಯಲ್ಲಿ ವಿಧಾನಸಭೆಗೆ ಬರಬೇಕಾದ ಬಹುತೇಕ ಶಾಸಕರು ಯಲಹಂಕ ಕಡೆಗೆ ಪಯಣ ಬೆಳೆಸಿದ್ದು ಇದ­ರಿಂದಾಗಿ ಬೆಳಗಿನ ಕಲಾಪ ಕಳೆ ಕಟ್ಟಲಿಲ್ಲ. ಬಿಕೋ ಎನ್ನುವ ವಾತಾವರಣದಲ್ಲೇ ನಡೆಯಿತು.

ಇತ್ತ ವಿಧಾನ ಪರಿಷತ್ ಸಚಿವರು ಗೈರು ಹಾಜರಾದ ಬಗ್ಗೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಕೆಂಡಾಮಂಡಲವಾದರು. ಪ್ರಶ್ನೌತ್ತರ ಕಲಾಪದಲ್ಲಿ ಸಚಿವ ಯೋಗೀಶ್ವರ್ ಹಾಜರಿರಲಿಲ್ಲ. ಸಭೆಯ ಮುಂದಿಡಬೇಕಾಗಿದ್ದ ಕಾಗದ ಪತ್ರದಲ್ಲಿ ಸಚಿವ ವರ್ತೂರು ಪ್ರಕಾಶ್ ಹಾಜರಿಲ್ಲ. ಈ ರೀತಿಯ ಬೇಜಾವಾಬ್ದಾರಿ ವರ್ತನೆಯ ಬಗ್ಗೆ ಮೇಲ್ಮನೆ ಪರತಿಪಕ್ಷದ ನಾಯಕ ಎಸ್. ಆರ್.ಪಾಟೀಲ್ ಸಭಾಪತಿಗಳ ಗಮನಕ್ಕೆ ತಂದಾಗ ಸಿಟ್ಟಾದ ಶಂಕರಮೂರ್ತಿಯವರು ಪ್ರಶ್ನೌತ್ತರ ಕಲಾಪ ಸಂದರ್ಭದಲ್ಲಿ ಇನ್ನಿತರೆ ಸಂದರ್ಭದಲ್ಲಿ ಸಂಬಂಧಿಸಿದ ಸಚಿವರು ಕಡ್ಡಾಯವಾಗಿ ಹಾಜರಿರುವಂತೆ ಕಟ್ಟಪ್ಪಣೆ ಮಾಡಿದರು.

 

loading...

LEAVE A REPLY

Please enter your comment!
Please enter your name here