ವಕೀಲರ ಮೇಲೆ ಹಲ್ಲೆ: ಆರೋಪಿ ಬಂಧನಕ್ಕೆ ಆಗ್ರಹ

0
13

ಕನ್ನಡಮ್ಮ ಸುದ್ದಿ-ಧಾರವಾಡ: ರಾಜ್ಯದಲ್ಲಿ ಒಂದಿಲ್ಲೊಂದು ಕಡೆ ದಿನನಿತ್ಯ ವಕೀಲರ ಮೇಲೆ ಹಲ್ಲೆ ದಾಳಿ ಮತ್ತು ದೌರ್ಜನ್ಯದಂತಹ ಘಟನೆಗಳು ಜರುಗುತ್ತಿವೆ ಧಾರವಾಡದ ವಕೀಲರ ಸಂಘದ ಸದಸ್ಯರಾದ ರಾಜು ಠಾಕೂರ ಅವರ ಮೇಲೆ ನರೇಂದ್ರ ಗ್ರಾಮದ ಬಸವರಾಜ ದೇಸಾಯಿ ಎಂಬವವರು ಹಲ್ಲೆ ಮಾಡಿದ್ದು ಈ ಕುರಿತು ದೂರು ದಾಖಲಿಸಿದ್ದರು ಇದೂವರೆಗೂ ಆರೋಪಿಯನ್ನು ಬಂಧಿಸಿಲ್ಲ ಈ ಕುರಿತು ಶೀಘೃವೆ ಬಂದಿಸಬೇಕೆಂದು ರಾಜ್ಯ ವಕೀಲರ ಪರಿಷತ್ತ ಸದಸ್ಯರಾದ ವ್ಹಿ.ಡಿ.ಕಾಮರಡ್ಡಿ ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಈ ಘಟನೆ ಕುರಿತಂತೆ ಈಗಾಗಲೇ ವಕೀಲರೆಲ್ಲರೂ ಸೇರಿ ಪ್ರತಿಭಟನೆ ಮಾಡಿದ್ದಾರೆ ಪ್ರಕರಣ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ಆದರೆ ಆರೋಪಿಯನ್ನು ಬಂಧಿಸದೇ ಇರುವುದು ಇಲಾಖೆಯ ವೈಫಲ್ಯವನ್ನು ತೋರಿಸುತ್ತದೆ ಎಂದರು.

ಈ ಘಟನೆ ಕುರಿತು ವಿಚಾರಿಸಲೂ ಹಿರಿಯ ವಕೀಲರು ಠಾಣೆಗೆ ಹೊದರು ಸರಿಯಾಗಿ ಮಾಹಿತಿ ನೀಡದೆ ಆರೋಪಿ ಬಗ್ಗೆ ಹಾರಿಕೆ ಉತ್ತರ ನೀಡಿರುವುದು ಖಂಡನೀಯ.
ಈ ರೀತಿ ವಕೀಲರ ಮೇಲೆ ನಡೆಸಿದರೆ ಮುಂದಿನ ಉಗ್ರ ಪ್ರತಿಭಟನೆ ನಡೆಸಲಾಗುವುದು ಅಷ್ಟೆ ಅಲ್ಲದೇ ವಕೀಲರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಲಾಗುವು. ಈಗಲಾದರೂ ಆರೋಪಿ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಇನ್ನಾದರೂ ವಕೀಲರ ರಕ್ಷಣೆಗೆ ಕ್ರಮಕ್ಕೆ ಮುಂದಾಗಬೇಕೆಂದರು.

ಪ್ರಕಾಶ ಉಡಕೇರಿ, ಕೆ.ಎಚ್.ಪಾಟೀಲ ಇದ್ದರು.

loading...