ವಚನಕಾರರ ಜಯಂತ್ಯೋತ್ಸವ

0
48

ಸಿದ್ದಾಪುರ : ವಚನಕಾರರು ಸಮಾಜ ಸುಧಾರಣೆಗೆ ತಮ್ಮದೇ ಆದ ಕೊಡುಗೆ ನೀಡಿದ್ದು ಅದನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಪಶುಸಂಗೋಪನಾ ನಿರ್ದೇಶಕ ಡಾ.ನಂದಕುಮಾರ ಪೈ ಹೇಳಿದರು.
ಅವರು ಮಂಗಳವಾರ ಪಟ್ಟಣದ ತಾಪಂ ಸಭಾಭವನದಲ್ಲಿ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಡೆದ ದೇವರ ದಾಸಿಮಯ್ಯ ಹಾಗೂ ಇತರ ವಚನಕಾರರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ವಚನಕಾರರ ಕುರಿತು ಸಂಗ್ರಹಿತ ಮಾಹಿತಿಯ ಕೊರತೆ ನಮಗಿದ್ದರು ವಚನ ಸಾಹಿತ್ಯದಲ್ಲಿ ಅವರ ಕೊಡುಗೆಯ ಬಗ್ಗೆ ಯಾರೂ ಅಲ್ಲಗಳೆಯುವಂತಿಲ್ಲ ಮೋಕ್ಷ ಪಡೆಯಲು ಸಂನ್ಯಾಸವೇ ಬೇಕಿಂದಿಲ್ಲ ಗೃಹಸ್ಥಾಶ್ರಮದಲ್ಲಿದ್ದು ಭಕ್ತಿ ಮಾರ್ಗದ ಮೂಲಕವೂ ಮೋಕ್ಷವನ್ನು,ಶಿವಸಾಯುಜ್ಯವನ್ನು ಪಡೆಯಬಹುದು ಎಂದು ತೊರಿಸಿಕೊಟ್ಟವರು ದೇವರ ದಾಸಿಮಯ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಗ್ರೇಡ್2 ತಹಶೀಲ್ದಾರ ಎನ್.ಷಡಕ್ಷರಿ ಮಾತನಾಡಿ ವಚನಗಳು ನಮ್ಮ ದೈನಂದಿನ ಬದುಕಿಗೆ ಹತ್ತಿರವಾಗಿದ್ದು,ವಚನದಲ್ಲಿ ಶರಣ ವಚನ,ದಾಸ ವಚನ, ದಲಿತ ವಚನ ಎಂದು ವಿಭಾಗಿಸಿ ನೋಡಿದರು ಅವೆಲ್ಲವೂ ಭಕ್ತಿ ಮಾರ್ಗವನ್ನು ಬೋಧಿಸಿದಂತಹವು ಜನಸಾಮಾನ್ಯರಿಗೆ ದೇವರ ಒಲವುಕಷ್ಟ ಎಂಬ ಕಾಲದಲ್ಲಿ ತಮ್ಮ ವಚನಗಳ ಮೂಲಕ ಭಕ್ತಿಯೊಂದೆ ಮೋಕ್ಷಕ್ಕೆ ಸಾಧನ ಎಂದು ತೋರಿಸಿಕೊಟ್ಟವರು ವಚನಕಾರರು ಎಂದು ಹೇಳಿದರು.
ವೇದಿಕೆಯಲ್ಲಿ ಹೆಸ್ಕಾಂ ಅಧಿಕಾರಿ ಡಿ.ಟಿ.ಹೆಗಡೆ,ಪಪಂ ಮುಖ್ಯಾಧಿಕಾರಿ ಡಿ.ಆರ್.ಬೆಳ್ಳಿಮನೆ,ದೈಹಿಕ ಶಿಕ್ಷಣಾಧಿಕಾರಿ ಎಂ.ವಿ.ನಾಯ್ಕ ಮುಂತಾದವರು ಉಪಸ್ಥಿತರಿದ್ದರು

loading...

LEAVE A REPLY

Please enter your comment!
Please enter your name here