ವಜ್ರಳ್ಳಿಯಲ್ಲಿ ಆರ್.ಎಮ್.ಭಟ್ಟ ಬಾಳ್ಕಲ್‌ರಿಗೆ ಶೃದ್ಧಾಂಜಲಿ

0
8

 

ಯಲ್ಲಾಪುರ: ತಾಲೂಕಿನಲ್ಲಿ ಸಾಹಿತ್ಯದ ಪ್ರಿÃತಿಯೊಂದಿಗೆ ನಾಲ್ಕು ದಶಕಗಳ ಕಾಲ ಮುದ್ರಣ ಮಾಧ್ಯಮದಲ್ಲಿ ಕೆಲಸ ಮಾಡಿದ ಆರ್ ಎಮ್ ಭಟ್ಟ ಬಾಳ್ಕಲ್ ತಮ್ಮ ಸಹೃದಯತೆಯಿಂದ ಸಮಾಜಕ್ಕೆ ಆಪ್ತರಾಗಿದ್ದರು. ಅಂತರಂಗದಲ್ಲಿ ಕಲ್ಮಶವಿಲ್ಲದ ಅತ್ಯಂತ ಶಿಸ್ತಿನ ಸಂಘಟಕ. ಸಾಹಿತ್ಯದ ಸೇವೆ ಯಲ್ಲಿ ಅನೇಕರನ್ನು ಬೆಳೆಸಿದ್ದಾರೆ. ಅಕ್ಷರ ಪ್ರಿÃತಿ ಮನುಷ್ಯ ಹೃದಯದವರನ್ನು ಹತ್ತಿರ ಕರೆಸಿಕೊಂಡು ಅನೇಕ ಚಿಂತನೆಗಳ ಶ್ರದ್ಧಾ ಕೇಂದ್ರದ ತಂಗುದಾಣವಾಗಿದ್ದ ಚೇತನಾ ಪ್ರೆಸ್ ಬಾಳ್ಕಲ್ ಕಟ್ಟಿದ ಕನಸಿನ ಕೂಸು. ಅವರಿಲ್ಲದೇ ಬಡವಾಗಿದೆ. ಸಾಹಿತ್ಯ ಕ್ಷೆÃತ್ರಕ್ಕೆ ಇನ್ನೂ ಅವರ ಸೇವೆ ಅವಶ್ಯಕತೆ ಇತ್ತು ಎಂದು ಸಾಹಿತಿ, ಕವಿ ವನರಾಗ ಶÀರ್ಮಾ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ವಜ್ರಳ್ಳಿಯ ಗಂಧಶಾಲಿಯಲ್ಲಿ ಸ್ಥಳೀಯ ವಿವೇಕಾನಂದ ಸೇವಾ ಬಳಗವು ಮೊನ್ನೆ ಅಗಲಿದ ಆರ್ ಎಮ್ ಭಟ್ಟ ಬಾಳ್ಕಲ್ ರವರ ಕುರಿತಾದ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು.

ಪತ್ರಕರ್ತರಾಗಿ, ತಾವು ಬೆಳೆಯುವುದರ ಜೊತೆಗೆ ಬೇರೆಯವರನ್ನು ಬೆಳೆಸುವ ಅವರ ಗುಣವು ಉದಾರವಾದದ್ದು. ಮುದ್ರಣ ಮಾಧ್ಯಮದಲ್ಲಿ ದೋಷಗಳಾಗದ ಹಾಗೆ ಎಚ್ಚರವಹಿಸುವ ಭಾಷಾ ಶುದ್ಧಿ ಅವರಲ್ಲಿತ್ತು. ಸಾಹಿತ್ಯ, ಸಂಗೀತ, ಕಲೆಗಳ ಕುರಿತು ತುಡಿಯುವ ಮನಸ್ಸಿನ ಅವರ ಹೃದಯ ವೈಶಾಲ್ಯಕ್ಕೆ ಸಾವಿರಾರು ಜನ ಸ್ನೆÃಹಿತರೇ ಸಾಕ್ಷಿ. ತಾವು ವಹಿಸಿಕೊಂಡ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವ ಶಕ್ತಿ ಅವರಲ್ಲಿತ್ತು . ಅವರ ಅಗಲುವಿಕೆಯಿಂದ ಸಾಹಿತ್ಯಕ್ಷೆÃತ್ರ ಬಡವಾಗಿದೆ. ಎಂದರು.
ಸಾಮಾಜಿಕ ಕರ‍್ಯಕರ್ತ ಟಿ ಸಿ ಗಾವ್ಕಾರ ಮಾತನಾಡಿ ಆರ್ ಎಮ್ ಭಟ್ಟ ಬಾಳ್ಕಲ್ ರವರು ತಾಲೂಕಿನ ಕೇಂದ್ರದಲ್ಲಿ ಸಾಹಿತ್ಯದ ಓದುಗರಿಗೆ ಬಹಳ ವರ್ಷಗಳ ಹಿಂದೆಯೇ ಪುಸ್ತಕ ವಾಚನಾಯ ಸ್ಥಾಪಿಸಿ, ಮೌಲಿಕ ಕೃತಿಗಳನ್ನು ಸಂಗ್ರಹಿಸಿ, ಪುಸ್ತಕ ಓದುವ ಅಭಿರುಚಿ ಹೆಚ್ಚಿಸಿದರು. ಅಲ್ಲಿ ಅನೇಕ ಲೇಖಕರ ಸಮಾಗಮವಾಗುತ್ತಿತ್ತು. ಪತ್ರಕರ್ತರ, ಸಾಹಿತಿಗಳ ಸಾಂಗತ್ಯ ಅವರಿಗಿತ್ತು.

ಸಭೆಯಲ್ಲಿ ಉಪಸ್ಥಿತರಿದ್ದ ನಿವೃತ್ತ ಶಿಕ್ಷಕ ಡಿ ಜಿ ಭಟ್ಟ. ದುಂಢಿ, ಆರ್ ಜಿ ಭಟ್ಟ ಹೊನಗದ್ದೆ, ಜಿ ಎನ್ ಕೋಮಾರ, ನರಸಿಂಹ ಭಟ್ಟ ನಡಿಗೆಮನೆ, ನಾರಾಯಣ ಗಾಮದ ಸಂತಾಪದ ನುಡಿಗಳನ್ನು ಆಡಿದರು. ಬರಹಗಾರ ದತ್ತಾತ್ರೆÃಯ ಭಟ್ಟ ಕಣ್ಣಿಪಾಲ ಸಂತಾಪ ಸಭೆ ಕರ‍್ಯಕ್ರಮ ನಿರ್ವಹಿಸಿ, ಕೊನೆಯಲ್ಲಿ ವಂದಿಸಿದರು.

loading...