ವಲಸೆ ಕಾರ್ಮಿಕರ ಮೇಲೆ ಹರಿದ ರೈಲು , ಸಾವಿನ ಸಂಖ್ಯೆ 17 ಕ್ಕೆ ಏರಿಕೆ

0
15

ಔರಂಗಾಬಾದ್ :- ಮಹಾರಾಷ್ಟ್ರದಲ್ಲಿ ರೈಲ್ವೆ ಹಳಿಯ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಶುಕ್ರವಾರ ಬೆಳಿಗ್ಗೆ ಗೂಡ್ಸ್ ರೈಲು ಹರಿದಿದ್ದು ಸಾವಿನ ಸಂಖ್ಯೆ 17 ಕ್ಕೆ ಏರಿಕೆಯಾಗಿದೆ.

ಈ ದುರಂತದಲ್ಲಿ ನಾಲ್ಕು ಜನ ಗಂಭೀರವಾಗಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಮತ್ತುಷ್ಟು ಹೆಚ್ಚಾಗುವ ಸಾಧ್ಯತೆಯಿದೆ
ಔರಂಗಾಬಾದ್ನ ಜಲ್ನಾ ರೈಲ್ವೆ ಟ್ರಾಕ್ ಬಳಿ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಮೃತಪಟ್ಟ ಎಲ್ಲಾ ಕಾರ್ಮಿಕರು ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು ಎಂದೂ ವರದಿಯಾಗಿದೆ.

ಲಾಕ್ಡೌನ್ನಿಂದಾಗಿ ಕಾರ್ಖಾನೆ ಮುಚ್ಚಲ್ಪಟ್ಟಿತ್ತು. ಹೀಗಾಗಿ ಕೆಲಸವಿಲ್ಲದ ಕಾರಣ ಕಾರ್ಮಿಕರು ರೈಲ್ವೆ ಹಳಿಯ ದಾರಿ ಹಿಡಿದು ಊರಿಗೆ ಹೊರಟಿದ್ದರು. ಆದರೆ, ಮಾರ್ಗಮದ್ಯೆ ನಿನ್ನೆ ರಾತ್ರಿ ಕರ್ಮದ್ ಬಳಿಯ ರೈಲ್ವೆ ಹಳಿ ಮೇಲೆ ಮಲಗಿದ್ದಾರೆ.

ರಾತ್ರಿ ಗೂಡ್ಸ್ ರೈಲೊಂದು ಇದೇ ಮಾರ್ಗವಾಗಿ ಸಂಚರಿಸಿದ ಪರಿಣಾಮ ಊರಿಗೆ ಹೊರಟಿದ್ದ 17 ಕಾರ್ಮಿಕರು ಯಮಲೋಕ ಸೇರಿದ್ದಾರೆ.

loading...