ವಾಣಿಜ್ಯ ಮಳಿಗೆ ಮೇಲೆ ಕ್ರಮಕ್ಕೆ ಒತ್ತಾಯ

0
19

ಬೆಳಗಾವಿ 02: ನಗರದ ಹನುಮಾನ ನಗರದಲ್ಲಿ ನಿಯಮ ಉಲ್ಲಂಘಟನೆ ಮಾಡಿ ನಿರ್ಮಿಸಲಾಗಿದ್ದ ಹನುಮಾನ ಟವರ್ಸ್ ಹೆಸರಿನ ವಾಣಿಜ್ಯ ಮಳಿಗೆ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಂಗಳವಾರ ಬೆಲಗಮ ಯುತ್ ಫೌಂಡೇಶನ್ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಿಯಮ ಉಲ್ಲಂಘಿಸಿ ಕಟ್ಟಲಾಗಿರುವ ಈ ಮಳಿಗೆಯ ಬಗ್ಗೆ 2016 ಜನೇವರಿ 18 ರಂದು ಪಾಲಿಕೆ ಆಯುಕ್ತರಿಗೆ ಈ ಭಾಗದ ಜನರು ಕಾನೂನು ರೀತಿ ಕಠಿಣ ಕ್ರಮಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಗಿತ್ತು. ತಕ್ಷಣ ಮನವಿ ಸ್ಪಂಧಿಸಿ ಆಯುಕ್ತ ಜಿ. ಪ್ರಭು ಅವರು ತಮ್ಮ ಅಧಿಕಾರಿಗಳನ್ನು ಪರಿಶೀಲಿಸುವಂತೆ ಸೂಚಿಸಿ ಸ್ಥಳಕ್ಕೆ ಕಳುಹಿಸಿದ್ದರು. ಆಯುಕ್ತ ನಿದೇರ್ಶನದಂತೆ ಅಧಿಕಾರಿಗಳು ಈ ಕಟ್ಟಡದ ಕಾಗದ ಪತ್ರ ಹಾಗೂ ಅತಿಕ್ರಮಣ ಕಟ್ಟಡ ನಿರ್ಮಾಣವಾಗಿರುವುದರಿಂದ 10-6-2016 ರಂದು ಪಾಲಿಕೆ ಅಧಿಕಾರಿಗಳಾದ ಎಮ್.ವಿ. ಹಿರೇಮಠ, ವಿ.ಎಸ್.ಹಿರೇಮಠ ಹಾಗೂ ರಮೇಶ ನ್ಯಾಮಗೌರಡರ ಸೇರಿದಂತೆ ಅತಿಕ್ರಮಣ ನಿರ್ಮೂಲನಾ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಕಟ್ಟಡ ಕಾರ್ಯಕ್ಕೆ ಉಪಯೋಗಿಸಲಾಗುತ್ತಿದ್ದ ಇಟ್ಟಿಗೆ. ಮರಳು ಸೇರಿದಂತೆ ಇನ್ನೀತರ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡು ಅತಿಕ್ರಮಣ ಮಾಡಲಾಗಿದ್ದ ಕಟ್ಟಡವನ್ನು ತೆರವುಗೊಳಿಸಿದ್ದಾರೆ.
ಅನಗಧಿಕೃತ ಕಟ್ಟಡದ ವಿಚಾರಣೆ ಪೂರ್ಣಗೊಳ್ಳುವವರೆಗೆ ಮಾಲಿಕರಿಗೆ ಯಾವುದೇ ರೀತಿ ಕಟ್ಟಡ ಚಟುವಟಿಕೆ ಮುಂದುವರೆಸಬಾರದೆಂದು ಸೂಚಿಸಿದ್ದಾರೆ. ಆದರೆ, ಪಾಲಿಕೆ ಆಯುಕ್ತ ಜಿ.ಪ್ರಭು ಅವರು ವಶಪಡಿಸಿಕೊಂಡ ಇಟ್ಟಿಗೆ. ಮರಳು ಸೇರಿದಂತೆ ಇನ್ನೀತರ ಸಾಮಗ್ರಿಗಳನ್ನು ಮರಳಿ ನೀಡುವಂತೆ ಮೌಖೀಕವಾಗಿ ಸೂಚಿಸಿದ್ದಾರೆ. ದಕ್ಷ ಅಧಿಕಾರಿಗಳ ಬೆನ್ನಿಗೆ ಹಿರಿಯ ಅಧಿಕಾರಿಗಳು ನಿಲ್ಲಬೇಕು ಆದರೆ. ಪಾಲಿಕೆ ಆಯುಕ್ತರು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುವವರ ಬಿನ್ನಿಗೆ ನಿಲ್ಲುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ತಕ್ಷಣ ಅನಗಧಿಕೃತ ಕಟ್ಟಡ ನಿರ್ಮಾಣ ಮಾಡುತ್ತಿರುವ ಹನುಮಾನ ಟವರ್ಸ್ ವಾಣಿಜ್ಯ ಮಳಿಗೆ ಮಾಲಿಕರ ಮೇಲೆ ಕ್ರಮಕೈಗೊಂಡು ಅತಿಕ್ರಮಣ ಮಾಡಲಾಗಿದ್ದ ಕಟ್ಟಡವನ್ನು ತೆರವುಗೊಳಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಕ್ಲಬ್ ಅಧ್ಯಕ್ಷ ಶ್ರೀನಿವಾಸ ರಾವ್, ಎಮ್.ಬಿ.ಪುಡಕಲಕಟ್ಟಿ, ಶಾನಭಾಗ ಹಂಚಿನಮನಿ, ಖಾಲಿಮುಲ್ಲಾ ಜಮಾದಾರ, ಫವಾಜ್ ಸೌದಾಗಾರ್, ನೌಜಾಜ್ ಬೇಟಗೇರಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here