ವಾಲ್ಮೀಕಿ ಎಲ್ಲ ಜನಾಂಗಕ್ಕೂ ಸೀಮಿತ’

0
43

ಕುಂದಗೋಳ (ಚಿಕ್ಕನರ್ತಿ)29: ‘ಮಹರ್ಷಿ ವಾಲ್ಮೀಕಿ ಯಾವುದೇ ಜನಾಂಗಕ್ಕೆ ಸೀಮಿತವಾಗಿರದೇ, ಮಹಾಕಾವ್ಯ ರಚಿಸುವ ಮೂಲಕ ಎಲ್ಲ ಸಮುದಾಯಗಳಿಗೆ ಮಾದರಿ ಪುರುಷನಾಗಿದ್ದಾನೆ,’ ಎಂದು ಶಶಿಧರ ಸೋಮರಡ್ಡಿ ಹೇಳಿದರು.
ತಾಲ್ಲೂಕಿನ ಚಿಕ್ಕನರ್ತಿ ಗ್ರಾಮದ ಎಲ್ಲಮ್ಮನ ದೇವಸ್ಥಾನದಲ್ಲಿ ಮಂಗಳವಾರ ಗ್ರಾಮ ಪಂಚಾಯ್ತಿ ಸದಸ್ಯರು ಆಯೋಜಿಸಿದ್ದ ವಾಲ್ಮೀಕಿ ಜಯಂತ್ಯೂತ್ಸವ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.
ವಾಲ್ಮೀಕಿ ಮಹರ್ಷಿ ಮಹಾಕಾವ್ಯಗಳ ಮೂಲಕ ಜನರ ಮಾದರಿ ಜೀವನ ಪಾಠವನ್ನು ಉಣಬಡಿಸಿದ್ದಾರೆ. ರಾಮಾಯಣ ಕೇವಲ ಧಾರ್ಮಿಕ ಕಾವ್ಯವಾಗಿರದೇ, ಅದು ಮಾದರಿ ಜೀವನದ ಮಾರ್ಗದರ್ಶಕವಾಗಿದೆ. ಇದರಲ್ಲಿನ ದಂತಕಥೆಗಳನ್ನು ಆಯ್ದು, ಉತ್ತಮ ಜೀವನ ರೂಢಿಸಿಕೊಳ್ಳಬೇಕು, ಎಂದರು.
ಜಗದೇವಯ್ಯ ಹಿರೇಮಠ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಮಾತನಾಡಿ, ವಾಲ್ಮೀಕಿ ಮಹರ್ಷಿ ಅವರು ರಾಮಾಯಣದ ಮೂಲಕ ರಾಮರಾಜ್ಯದ ಮಾದರಿ ಪರಿಕಲ್ಪನೆ ಜನರಿಗೆ ತಲುಪಿಸುವಲ್ಲಿ ಪ್ರಥಮರಾಗಿದ್ದಾರೆ, ಎಂದರು.
ಗ್ರಾಮ ಪಂಚಾಯ್ತಿ ಸದಸ್ಯ ಅಂದಾನಗೌಡ ಪಾಟೀಲ ಮಾತನಾಡಿ, ವಾಲ್ಮೀಕಿ ಜನಾಂಗ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಉನ್ನತ ಶಿಕ್ಷಣ ಪಡೆಯುವಂತಾಗಬೇಕು. ಜನಾಂಗದ ಸದಸ್ಯರು ಅನಕ್ಷರಸ್ಥರಾಗಿರುವುದರಿಂದ, ಸರ್ಕಾರದ ಯೋಜನೆಗಳು ಕೊಳೆಯುವಂತಾಗಿವೆ, ಎಂದರು.
ಪಂಚಾಯ್ತಿಯಲ್ಲಿ ಪರಿಶಿಷ್ಟ ಜನಾಂಗದ ಅನುದಾನ ಅದೇ ವರ್ಗದ ಅಭಿವೃದ್ದಿಗೆ ಬಳಕೆಯಾಗಬೇಕು, ಎಂದು ತಿಳಿಸಿದರು.
ಗ್ರಾಮದ ಪ್ರಮುಖರಾದ ಅಡಿವೆಪ್ಪ ಶಿವಳ್ಳಿ, ಕಲ್ಲಪ್ಪ ಬಿಳೇಬಾಳ, ಮಾದೇವಪ್ಪ ಕಾಮರಡ್ಡಿ, ಬಸವಣ್ಣೆಪ್ಪ ಮಾಯಣ್ಣವರ, ಮಲ್ಲಿಕಾರ್ಜುನ ಶಾನವಾಡ, ಕಲ್ಲಪ್ಪ ಮುಂದಿನಮನಿ, ಫಕ್ಕೀರಪ್ಪ ದೊಡಮನಿ, ಮಲ್ಲೇಶಪ್ಪ ಹಿತ್ತಲಮನಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಬಾಬುಗೌಡ ಪಾಟೀಲ, ಮಂಜುನಾಥ ಮಾಯಣ್ಣವರ, ಹನುಮವ್ವ ದೊಡಮನಿ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here