ವಾಷಿಂಗ್ಟನ್‌ನಲ್ಲಿ ಗುಂಡಿನ ದಾಳಿಗೆ ಓರ್ವ ಬಲಿ: ಶಂಕಿತ ವಶಕ್ಕೆ

0
3

ವಾಷಿಂಗ್ಟನ್-  ಅಮೆರಿಕ  ರಾಜಧಾನಿ ವಾಷಿಂಗ್ಟನ್‌ನ ಡೌನ್‌ಟೌನ್‌ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದು, ದಾಳಿಕೋರ ಶಂಕಿತನನ್ನು ಬಂಧಿಸಲಾಗಿದೆ ಎಂದು ಡಿಸಿ ಪೊಲೀಸ್  ಇಲಾಖೆ ಮುಖ್ಯಸ್ಥ ಪೀಟರ್ ನ್ಯೂಶಮ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
“ಶಂಕಿತ ಬಂದೂಕುದಾರಿಯೊಬ್ಬ ಅನೇಕ ಬಾರಿ ಗುಂಡು ಹಾರಿಸಿದ್ದು, ಇದರಿಂದ ವಯಸ್ಕ ಪುರುಷನೊಬ್ಬ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು” ಎಂದು ನ್ಯೂಶಮ್ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ವಾಷಿಂಗ್ಟನ್‌ನ  ಚೈನಾಟೌನ್‌ನ ನ್ಯಾಷನಲ್ ಪೋರ್ಟ್ರೇಟ್ ಗ್ಯಾಲರಿಯ ಸಮೀಪವಿರುವ 8 ನೇ ಸ್ಟ್ರೀಟ್  ನಾರ್ತ್‌ವೆಸ್ಟ್‌ನ 700 ಬ್ಲಾಕ್‌ನಲ್ಲಿ ಅಂತಾರಾಷ್ಡ್ರೀಯ ಕಾಲಮಾನ ರಾತ್ರಿ 10 ಗಂಟೆ ಸುಮಾರಿಗೆ  ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಯುವುದು ಅಸಾಮಾನ್ಯ ಎಂದು ನ್ಯೂಶಮ್  ಹೇಳಿದ್ದಾರೆ.
ಗುಂಡಿನ  ಚಕಮಕಿಯಲ್ಲಿ ಆ ವ್ಯಕ್ತಿ ತೊಡಗುವ ಮೊದಲು ಆತನಿಗಾಗಿ ಡಿಸಿ ಪೊಲೀಸ್ ಅಧಿಕಾರಿಗಳು ಒಂದೆರಡು ಬ್ಲಾಕ್‌ಗಳಲ್ಲಿ ಹಿಂಬಾಲಿಸಿದ್ದಾರೆ ಎಂದು ಮುಖ್ಯಸ್ಥರು ತಿಳಿಸಿದ್ದಾರೆ.
ಬಂಧಿಸುವ ಮೊದಲು ಶಂಕಿತ ಮೇಲೆ ಪೊಲೀಸರು ಗುಂಡು ಹಾರಿಸಿದ್ದು, ಇದರಿಂದ ಆತನ ಕೈಗೆ ಪೆಟ್ಟಾಗಿದೆ, ಪ್ರಾಣಾಪಾಯವಿಲ್ಲ ಎಂದು ಅವರು ಹೇಳಿದರು.

loading...