ವಿಕಲತೆ ಮೆಟ್ಟಿ ನಿಂತ ಬಾಲಕ ಯಲಬುರ್ಗಾದ ಮನೋಜ

0
68

ಯಲಬುರ್ಗಾ : ಕಿತ್ತು ತಿನ್ನುವ ಬಡತನ,ಕೂಲಿ ಮಾಡಿ ಜೀವನ ನಡೆಸಬೇಕಾದ ಅನಿವಾರ್ಯತೆ.ಇದರ ಜತೆಗೆ ಹುಟ್ಟಿದ ಇಬ್ಬರು ಮಕ್ಕಳು ವಿಕಲಚೇತನರಾದರೆ…?ಸಾಮಾನ್ಯದವರಾದರೆ ಕುಗ್ಗಿ ಹೋಗಿ ಬಿಡಬಹುದು.ಆದರೆ ಯಲಬುರ್ಗಾ ಪಟ್ಟಣದ ಸಿದ್ದರಾಮೇಶ್ವರ ನಗರದ ಆಶ್ರಯ ಕಾಲೋನಿಯಲ್ಲಿ ವಾಸವಾಗಿರುವ ಉಮೇಶ ಭೀಮವ್ವ ಕಮ್ಮಾರ ದಂಪತಿ ಹೀಗೆ ಕುಗ್ಗಿಲ್ಲ.ತನ್ನೆರಡು ವಿಕಲಕಚೇತನ ಮಕ್ಕಳಾದ ಮನೋಜ(10) ಹಾಗೂ ರೇಖಾ(5) ಅವರಿಗೆ ವಿದ್ಯಾಭ್ಯಾಸದ ಜತೆಗೆ ಡ್ಯಾನ್ಯ್,ಕ್ರೀಡೆಗೂ ಪ್ರೋತ್ಸಾಹ ನೀಡಿ ಜೀವನ ಒಡ್ಡುವ ಸವಾಲು ಎದುರಿಸುವ ಸಾಮಥ್ರ್ಯ ತುಂಬುತ್ತಿದ್ದಾರೆ.ಇಬ್ಬರು ಕೂಡಾ ಸದಾ ಲವಲವಿಕೆಯಿಂದ ಇದ್ದಾರೆ. ಪ್ರತಿಭಾನ್ವಿತ ಮನೋಜ ಉಮೇಶ ದಂಪತಿಯ ಮೊದಲನೇ ಪುತ್ರ ಮನೋಜ್ ಪ್ರತಿಭಾನ್ವಿತ ಬಾಲಕ.ಆತ ಸ್ಥಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 1ರಲ್ಲಿ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಮರ್ದಾನಸಾಬ ಕೊತ್ವಾಲ್ ಅವರು, ಅಕ್ಷರಭ್ಯಾಸ ಕಡೆ ಹೆಚ್ಚು ಒತ್ತು ಕೊಟ್ಟು ಅವನಿಗೆ ಪ್ರೋತ್ಸಾಹಿಸುತ್ತಾ ಬಂದರು.ಅಲ್ಲಿ ಉತ್ತಮ ವಿದ್ಯಾರ್ಥಿಯಾಗಿ ಕ್ರೀಡೆ, ಮನರಂಜನೆ ಎಲ್ಲರದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾನೆ.ಅವನಿಗೆ ಹೆಚ್ಚು ಶಿಕ್ಷಣ ಸಿಗಲಿ ಎನ್ನುವ ಉದ್ದೇಶದಿಂದ ಈಗ ಹುಬ್ಬಳ್ಳಿಯ ವಿಶ್ವಧರ್ಮ ಅಂಗವಿಕಲರ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿರುವ ಮನೋಜ್ ಅಲ್ಲಿ ಸಹ ಉತ್ತಮ ವಿದ್ಯಾರ್ಥಿಯಾಗಿದ್ದಾನೆ.ಕ್ರಿಕೇಟ್ ಎಂದರೆ ಇವನಿಗೆ ಪಂಚಪ್ರಾಣ.ಉತ್ತಮ ಬ್ಯಾಟಿಂಗ್,ಬಾಲಿಂಗ ಮಾಡುತ್ತಾನೆ.ಅಲ್ಲದೇ ವಾಲಿಬಾಲ್,ಫುಟ್ಟಾಲ್ ಗಳಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದಾನೆ.ಡ್ಯಾನ್ಸ ಮತ್ತು ಹಾಡಿನಲ್ಲೂ ಇತ ಮುಂದಿದ್ದಾನೆ,ಚೆನ್ನಾಗಿ ಡ್ರಾಯಿಂಗ್ ಬಿಡಿಸುತ್ತಾನೆ.ಒಟ್ಟಾರೆ ಕ್ರೀಯಾಶೀಲನಾಗಿದ್ದಾನೆ.ಮನೋಜನಿಗೆ ಅಲ್ಪ ಮಾಸಾಶನ ಬರುತ್ತೆ.ಆದರೆ ರೇಖಾಗೆ ಅದೂ ಬರುತ್ತಿಲ್ಲ.ಕೂಲಿ ಮಾಡಿ ಜೀವನ ನಡೆಉಸುವ ಈ ಬಡ ಕುಟುಂಬಕ್ಕೆ ಯಾವುದೇ ಆಸರೆ ಇಲ್ಲ.ಬಾಡಿಗೆ ಮನೆಯಲ್ಲಿ ವಾಸವಾಗಿರುವ ಈ ಕುಟುಂಬಕ್ಕೆ ಶಾಶ್ವತ ಸೂರು ಬೇಕಾಗಿದೆ. ಜತೆಗೆ ತಮ್ಮ ವಿಕಲಚೇತನ ಮಕ್ಕಳ ಪ್ರತಿಭೆಯ ಪ್ರೋತ್ಸಾಹಕ್ಕೆ ಸಂಘ ಸಂಸ್ಥೆಗಳ ಸಹಾಯ ನಿರೀಕ್ಷಿಸುತ್ತಿದೆ.ಈ ವಿಕಲಚೇತನ ಮಕ್ಕಳ ಪ್ರತಿಭೆಗಳಿಗೆ ಪ್ರೋತ್ಸಾಹ,ಸಹಾಯ. ಸರಕಾರ ಮತ್ತು ಸಂಘ ಸಂಸ್ಥೆಗಳು ಇವರ ಬಾಳಿಗೆ ಬೆಳಕನ್ನು ನೀಡುವರೇ ಕಾದು ನೋಡಬೇಕು.

loading...

LEAVE A REPLY

Please enter your comment!
Please enter your name here