ವಿಕಲ ಚೇತನರ ಆತ್ಮಥೈರ್ಯ ಹೆಚ್ಚಿವ ಕೆಲಸವಾಗಬೇಕು:ನಾಯಕ

0
86


ಕಾರವಾರ : ವಿಕಲ ಚೇತನ ಮಕ್ಕಳನ್ನು ಗೌರವಯುತವಾಗಿ ನಡೆಸಿಕೊಂಡು ಅವರಲ್ಲಿ ಆತ್ಮಥೈರ್ಯ ಹೆಚ್ಚಿಸುವ ಕೆಲಸವಾಗಬೇಕು ಎಂದು ಕಾರವಾರ ಶೈಕ್ಷಣಿಕ ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಭಾರಿ ಉಪನಿರ್ದೇಶಕ ರಾಮಕೃಷ್ಣ ಯು. ನಾಯಕ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಮಾಲಾದೇವಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಕಲ ಚೇತನ ಶಾಲಾ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲ ಚೇತನ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಅವರಿಗೆ ಪೆÇ್ರೀತ್ಸಾಹ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಕರೆತರಬೇಕು. ಜಿಲ್ಲೆಯಲ್ಲಿ ಸದ್ಯ 2300 ರಷ್ಟು ವಿಶೇಷ ಚೇತನ ಮಕ್ಕಳು ಶಿಕ್ಷಣ ಪಡೆಯುತ್ತಿದಾರೆ. ಅದರಲ್ಲೂ ವಿಶೇಷವಾಗಿ 170 ಮಕ್ಕಳಿಗೆ ಗೃಹಾಧಾರಿತ ಶಿಕ್ಷಣ ನೀಡಲಾಗುತ್ತಿದೆ. ಇಲಾಖೆಯಿಂದ ವಿಶೇಷ ಚೇತನ ಮಕ್ಕಳಿಗೆ ಅಗತ್ಯ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರತ್ನಾಕರ ನಾಯ್ಕ ಮಾತನಾಡಿ, ವಿಶೇಷ ಚೇತನ ಮಕ್ಕಳಲ್ಲಿ ವಿಶಿಷ್ಟ ಪ್ರತಿಭೆಗಳಿರುತ್ತವೆ. ಅವುಗಳಿಗೆ ಸೂಕ್ತ ವೇದಿಕೆ ಒದಗಿಸಿಕೊಡಬೇಕು ಎಂದರು. ಶಿಕ್ಷಕಿ ಸಾಧನಾ ಬರ್ಗಿ, ವೆಂಕಟರಮಣ ನಾಯ್ಕ ಅವರು ವಿಶೇಷ ಚೇತನ ಮಕ್ಕಳಿಗೆ ಅನುಕಂಪದ ಬದಲು ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಕಾರಿ ಶ್ರೀಕಾಂತ ಹೆಗಡೆ ಮಾತನಾಡಿ, ಸಹಾನುಭೂತಿ ಬದಲು ಸೂಕ್ತ ಅವಕಾಶ ದೊರೆತಾಗ ಮಾತ್ರ ವಿಶೇಷ ಚೇತನರು ಸಾಧನೆ ಮಾಡಲು ಸಾಧ್ಯ. ಅವರಿಗೆ ಪೆÇ್ರೀತ್ಸಾಹ ನೀಡಲು ಇಂತಹ ವೇದಿಕೆ ಒದಗಿಸಲಾಗುತ್ತಿದೆ ಎಂದರು. ಜಿಲ್ಲಾ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಧವ ರಾಣೆ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಆರ್.ಎಚ್. ನಾಯ್ಕ, ಅರುಣ ನಾಯ್ಕ, ದಿವೇಶ ನಾಯ್ಕ, ಆರ್.ಟಿ. ರೇವಣಕರ, ಪ್ರಕಾಶ ರೇವಣಕರ, ಸಿಸ್ಟರ್ ಎಲೀಸಾ, ಶಿಕ್ಷಕ ಪ್ರವೀಣ ತಳೇಕರ ಇತರರು ಇದ್ದರು.
ಫಲಿತಾಂಶ: ಇಲ್ಲಿನ ಮಾಲಾದೇವಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಕಲ ಚೇತನರ ಕ್ರೀಡಾಕೂಟದಲ್ಲಿ ಜಿಲ್ಲೆಯ 50 ಕ್ಕೂ ಅಂಗ ವಿಕಲ ಮಕ್ಕಳು ತಮ್ಮ ಕ್ರೀಡಾ ಪ್ರತಿಭೆ ಪ್ರದರ್ಶಿಸಿದರು.
14 ಹಾಗೂ 17 ವರ್ಷದೊಳಗಿನ ಮಕ್ಕಳಿಗಾಗಿ ಭಾಗಶಃ ಅಂಧರು, ಒಂದು ಕೈ-ಕಾಲು ನ್ಯೂನತೆ ಇರುವವರು, ವಾಕ್ ಮತ್ತು ಶ್ರವಣ ದೋಷವುಳ್ಳವರ ವಿಭಾಗದಲ್ಲಿ ಶಾಟ್‍ಪುಟ್, ಜಾವೆಲಿನ್ ಎಸೆತ, ಉದ್ದ ಜಿಗಿತ, 50 ಮೀ. 100 ಮೀ.ಓಟದ ಸ್ಪರ್ಧೆಗಳು ಪ್ರತ್ಯೇಕವಾಗಿ ನಡೆದವು.
ಬಾಲಕಿಯರ ಫಲಿತಾಂಶ: 14 ವರ್ಷದೊಳಗಿನ ಭಾಗಶಃ ಅಂಧರು ವಿಭಾಗದ ಶಾಟ್‍ಪುಟ್ ಮತ್ತು ಜಾವೆಲಿನ್ ಸ್ಪರ್ಧೆಯಲ್ಲಿ ಭಟ್ಕಳ ತಾಲೂಕು ಹುರಳಿಸಾಲದ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ನಮ್ರತಾ ಹುಲಿಸ್ವಾರ ಪ್ರಥಮ, ಒಂದು ಕಾಲು ನ್ಯೂನತೆ ಇರುವವರ ವಿಭಾಗದಲ್ಲಿ ಕಾರವಾರದ ಸೈಂಟ್ ಮೈಕೆಲ್ ಕಾನ್ವೆಂಟ್‍ನ ಸಕೀನಾ ಬಾಜಿ ಪ್ರಥಮ ಸ್ಥಾನ ಗಳಿಸಿದರು.
ವಾಕ್ ಮತ್ತು ಶ್ರವಣ ದೋಷವುಳ್ಳವರ ವಿಭಾಗದ ಶಾಟ್‍ಪುಟ್‍ನಲ್ಲಿ ಕಾರವಾರದ ಆಶಾನಿಕೇತನ ಶಾಲೆಯ ಚೈತ್ರಾ ಮಡಿವಾಳ ಪ್ರಥಮ, ರಂಜಿತಾ ನಾಯ್ಕ ದ್ವಿತೀಯ, ಹೊನ್ನಾವರ ತಾಲೂಕು ಕರ್ಕಿ ಹಿರಿಯ ಪ್ರಾಥಮಿಕ ಶಾಲೆಯ ವಂದನಾ ಗೌಡ ತೃತೀಯ ಬಹುಮಾನ ಪಡೆದರು. ಜಾವೆಲಿನ್ ಎಸೆತದಲ್ಲಿ ಕಾರವಾರದ ಆಶಾನಿಕೇತನ ಶಾಲೆಯ ರಂಜಿತಾ ನಾಯ್ಕ ಪ್ರಥಮ, ನಮ್ರತಾ ಮಂಡಿಗನಾಳ ದ್ವಿತೀಯ ಹಾಗೂ ನಿಖಿತಾ ನಾಯ್ಕ ತೃತೀಯ ಬಹುಮಾನ ಸ್ಥಾನ ಪಡೆದರು.
50 ಮೀ. ಓಟದ ಸ್ಪರ್ಧೆಯಲ್ಲಿ ಕಾರವಾರದ ಆಶಾನಿಕೇತನ ಶಾಲೆಯ ಚೈತ್ರಾ ಮಡಿವಾಳ ಪ್ರಥಮ, ಸಿದ್ದರ ಶಾಲೆಯ ನಾಗಶ್ರೀ ಕೇಶವ ಪಡ್ತಿ ದ್ವಿತೀಯ, ಆಶಾನಿಕೇತನ ಶಾಲೆಯ ನಮ್ರತಾ ಮಂಡಿಗನಾಳ ತೃತೀಯ ಸ್ಥಾನ ಪಡೆದರು.
17 ವರ್ಷದೊಳಗಿನ ಭಾಗಶಃ ಅಂಧರು ವಿಭಾಗದ ಶಾಟ್‍ಪುಟ್ ಹಾಗೂ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಸಿದ್ದರ ಶಾಲೆಯ ಲಕ್ಷ್ಮಿ ಜಂಗತಿ ಪ್ರಥಮ ಬಹುಮಾನ ಪಡೆದರು. ವಾಕ್ ಮತ್ತು ಶ್ರವಣ ದೋಷವುಳ್ಳವರ ವಿಭಾಗದ ಜಾವೆಲಿನ್ ಎಸೆತದಲ್ಲಿ ಕಾರವಾರದ ಆಶಾನಿಕೇತನ ಶಾಲೆಯ ಶಿಲ್ಪಾ ಪೂಜಾರ ಪ್ರಥಮ, ಜಯಶ್ರೀ ಗೌಡ ದ್ವಿತೀಯ, ಯಶೋಧಾ ನಾಯ್ಕ ತೃತೀಯ ಬಹುಮಾನ ಪಡೆದರು.
ಶಾಟ್‍ಪುಟ್ ಎಸೆತದಲ್ಲಿ ಕಾರವಾರದ ಆಶಾನಿಕೇತನ ಶಾಲೆಯ ರಂಜಿತಾ ಖೈರುನ್ನಿಸಾ ಲಾಬೋರ ಪ್ರಥಮ, ಕವಿತಾ ಆರ್. ನಾಯ್ಕ ದ್ವಿತೀಯ ಹಾಗೂ ಭಾರತಿ ಬಿ. ನಾಯ್ಕ ತೃತೀಯ ಬಹುಮಾನ ಸ್ಥಾನ ಪಡೆದರು.
100 ಮೀ. ಓಟದ ಸ್ಪರ್ಧೆಯಲ್ಲಿ ಕಾರವಾರದ ಆಶಾನಿಕೇತನ ಶಾಲೆಯ ಯಶೋಧಾ ನಾಯ್ಕ ಪ್ರಥಮ, ಖೈರುನ್ನಿಸಾ ಲಾಬೋರ ದ್ವಿತೀಯ ಹಾಗೂ ಗೇರುಕೊಪ್ಪದ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಅಶ್ವಿನಿ ಉಪ್ಪಾರ ತೃತೀಯ ಬಹುಮಾನ ತಮ್ಮದಾಗಿಸಿಕೊಂಡರು.
ಬಾಲಕರ ವಿಭಾಗದ ಫಲಿತಾಂಶ:
14 ವರ್ಷದೊಳಗಿನ ಭಾಗಶಃ ಅಂಧರು ವಿಭಾಗದ ಜಾವೆಲಿನ್ ಎಸೆತದಲ್ಲಿ ಭಟ್ಕಳ ತಾಲೂಕು ಹುರಳಿಸಾಲ ಹಿರಿಯ ಪ್ರಾಥಮಿಕ ಶಾಲೆಯ ವಿನಾಯಕ ಬೋಪಗಾರ ಪ್ರಥಮ, ಹಂದಿಗೋಣದ ಪ್ರಾಥಮಿಕ ಶಾಲೆಯ ಉಮೇಶ ಪಟಗಾರ ದ್ವಿತೀಯ ಬಹುಮಾನ ಗಳಿಸಿದರು.
ಶಾಟ್‍ಪುಟ್ ಎಸೆತದಲ್ಲಿ ಭಟ್ಕಳ ತಾಲೂಕು ಹುರಳಿಸಾಲ ಹಿರಿಯ ಪ್ರಾಥಮಿಕ ಶಾಲೆಯ ವಿನಾಯಕ ಬೋಪಗಾರ ಪ್ರಥಮ, ಹಂದಿಗೋಣದ ಪ್ರಾಥಮಿಕ ಶಾಲೆಯ ಉಮೇಶ ಪಟಗಾರ ದ್ವಿತೀಯ ಹಾಗೂ ಭಟ್ಕಳ ತಾಲೂಕು ಹುರಳಿಸಾಲ ಹಿರಿಯ ಪ್ರಾಥಮಿಕ ಶಾಲೆಯ ನವೀನ ಹುಲಸ್ವಾರ ತೃತೀಯ ಬಹುಮಾನ ಪಡೆದರು.
ಒಂದು ಕಾಲು ನ್ಯೂನತೆ ಇರುವವರ ವಿಭಾಗದ ಶಾಟ್‍ಪುಟ್ ಎಸೆತದಲ್ಲಿ ಹೊನ್ನಾವರ ತಾಲೂಕು ಇಡಗುಂಜಿಯ ವಿಘ್ನೇಶ ನಾಯ್ಕ ಪ್ರಥಮ, ಭಟ್ಕಳ ತಾಲೂಕು ಸಾತಿಮಕ್ಕಿಯ ಮಣಿಕಂಠ ಗೌಡರ ದ್ವಿತೀಯ, ಹೊನ್ನಾವರ ತಾಲೂಕು ಮಾವಿನಕುರ್ವಾದ ಸಂದೀಪ ಗೌಡ ತೃತೀಯ ಬಹುಮಾನ ಪಡೆದರು.
ಜಾವೆಲಿನ್ ಎಸೆತದಲ್ಲಿ ಹೊನ್ನಾವರ ತಾಲೂಕು ಇಡಗುಂಜಿಯ ವಿಘ್ನೇಶ ನಾಯ್ಕ ಪ್ರಥಮ, ಭಟ್ಕಳ ತಾಲೂಕು ಸಾತಿಮಕ್ಕಿಯ ಮಣಿಕಂಠ ಗೌಡರ ದ್ವಿತೀಯ, ಹೊನ್ನಾವರ ತಾಲೂಕು ಮಾವಿನಕುರ್ವಾದ ನವೀದ ಪಟೇಲ ತೃತೀಯ ಬಹುಮಾನ ಗಳಿಸಿದರು.
ವಾಕ್ ಮತ್ತು ಶ್ರವಣದೋಷ ಉಳ್ಳವರ ವಿಭಾಗದ ಶಾಟ್‍ಪುಟ್ ಎಸೆತದಲ್ಲಿ ಕಾರವಾರದ ಆಶಾನಿಕೇತನ ಶಾಲೆಯ ಸಾಥ್ಕ ಯೇಸಾರ್ಡಿಕರ ಪ್ರಥಮ, ಶಾಸಕರ ಮಾದರಿ ಶಾಲೆಯ ಅಕ್ಷಯಕುಮಾರ ದ್ವಿತೀಯ, ಆಶಾನಿಕೇತನ ಶಾಲೆಯ ಪ್ರಮೋದ ನಾಯ್ಕ ತೃತೀಯ ಬಹುಮಾನ ಪಡೆದರು.
ಜಾವೆಲಿನ್ ಎಸೆತದಲ್ಲಿ ಸಿದ್ದರ ಬಾಪೂಜಿ ಸಂಸ್ಥೆ ಶಾಲೆಯ ನಾವು ಸಿದ್ದು ಲಾಂದೋರ ಪ್ರಥಮ, ಆಶಾನಿಕೇತನ ಶಾಲೆಯ ಸಾರ್ಥಕ ಯೇಸಾರ್ಡಿಕರ ದ್ವಿತೀಯ, ಬಾಪೂಜಿ ಸಂಸ್ಥೆ ಶಾಲೆಯ ಪವನ ಬಿಲ್ಲೆ ತೃತೀಯ ಬಹುಮಾನ ಪಡೆದರು.
50 ಮೀ. ಓಟದ ಸ್ಪರ್ಧೆಯಲ್ಲಿ ಆಶಾನಿಕೇತನ ಶಾಲೆಯ ಜೆಸನ್ ಫರ್ನಾಂಡೀಸ್ ಪ್ರಥಮ, ಸಿದ್ದರ ಬಾಪೂಜಿ ಸಂಸ್ಥೆ ಶಾಲೆಯ ಪವನ ಬಿಲ್ಲೆ ದ್ವಿತೀಯ, ಸಿದ್ದು ಲಾಂದೋರ ತೃತೀಯ ಬಹುಮಾನ ಪಡೆದರು.
17 ವರ್ಷದೊಳಗಿನ ಭಾಗಶಃ ಅಂಧರು ವಿಭಾಗದ ಶಾಟ್‍ಪುಟ್, ಜಾವೆಲಿನ್ ಎಸೆತದಲ್ಲಿ ಕುಮಲಾ ತಾಲೂಕು ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್‍ನ ನಾಗರಾಜ್ ಹರಿಕಂತ್ರ ಪ್ರಥಮ, ಒಂದು ಕೈ ನ್ಯೂನತೆ ಉಳ್ಳವರ ವಿಭಾಗದ ಶಾಟ್‍ಪುಟ್ ಎಸೆತ, ಉದ್ದ ಜಿಗಿತದಲ್ಲಿ ಹೊನ್ನಾವರದ ಎನ್‍ಇಎಸ್‍ನ ಸಚಿನ್ ಮೇಸ್ತ ಪ್ರಥಮ ಬಹುಮಾನ ಪಡೆದರು.
ಒಂದು ಕಾಲು ನ್ಯೂನತೆ ಉಳ್ಳವರ ವಿಭಾಗದ ಶಾಟ್‍ಪುಟ್, ಜಾವೆಲಿನ್ ಎಸೆತದಲ್ಲಿ ಕುಮಟಾ ತಾಲೂಕು ಕತಗಾಲ ಎಸ್‍ಕೆಪಿಯ ಆದಿತ್ಯ ಗೌಡ ಪ್ರಥಮ ಬಹುಮಾನ ಗಳಿಸಿದರು. 100 ಮೀ. ಓಟದ ಸ್ಪರ್ಧೆಯಲ್ಲಿ ಇಡಗುಂಜಿಯ ರೋಹಿತ ನಾಯ್ಕ ಪ್ರಥಮ, ಆಶಾನಿಕೇತನ ಶಾಲೆಯ ಪ್ರಜತ್ ಪೆಡ್ನೇಕರ್ ದ್ವಿತೀಯ ಹಾಗೂ ಸಿದ್ದರ ಬಾಪೂಜಿ ಸಂಸ್ಥೆಯ ಲೋಕೇಶ ರಾಠೋಡ ತೃತೀಯ ಬಹುಮಾನ ಪಡೆದರು.
ವಾಕ್ ಮತ್ತು ಶ್ರವಣದೋಷವುಳ್ಳವರ ವಿಭಾಗದ ಶಾಟ್‍ಪುಟ್‍ನಲ್ಲಿ ಸಿದ್ದರ ಬಾಪೂಜಿ ಸಂಸ್ಥೆಯ ಲೋಕೇಶ ರಾಠೋಡ ಪ್ರಥಮ, ಆಶಾನಿಕೇತನ ಶಾಲೆಯ ಅಕ್ಷಯಕುಮಾರ ದ್ವಿತೀಯ, ಜಾವೆಲಿನ್ ಎಸೆತದಲ್ಲಿ ಇಡಗುಂಜಿಯ ರೋಹಿತ ನಾಯ್ಕ ಪ್ರಥಮ, ಆಶಾನಿಕೇತನದ ಅಭಿಜೀತ ನಾಯ್ಕ ದ್ವಿತೀಯ, ದಿನೇಶ ದೇವಾಡಿಗ ತೃತೀಯ ಬಹುಮಾನ ಪಡೆದರು.

loading...

LEAVE A REPLY

Please enter your comment!
Please enter your name here