ವಿಜೃಂಭಣೆಯಿಂದ ನಡೆದ ಶ್ರೀಗಳ ಪಾದುಕೆ ಪೂಜೆ

0
63

ಕನ್ನಡಮ್ಮ ಸುದ್ದಿ-ಕುಮಟಾ: ಪಟ್ಟಣದ ಕುಂಭೇಶ್ವರ ದೇವಸ್ಥಾನದಲ್ಲಿ ಗುರುವಾರ ಸದ್ಗುರು ಶ್ರೀಧರ ಸ್ವಾಮೀಜಿ ಅವರ ಪವಿತ್ರ ಪಾದುಕೆಗಳ ದರ್ಶನ ಮತ್ತು ಪೂಜೆ ನೂರಾರು ಭಕ್ತರ ನಡುವೆ ವಿಜೃಂಭಣೆಯಿಂದ ನಡೆಯಿತು.

ಇಲ್ಲಿನ ಕುಂಭೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಭಕ್ತರಿಂದ ಸಾಮೂಹಿಕ ಪಾದುಕೆ ಪೂಜೆ ಮತ್ತು ಮಹಾ ಪೂಜೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಪಾದುಕೆಯನ್ನು ಸ್ಪರ್ಶಿಸಿ, ಇಷ್ಠಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು. ಅಲ್ಲದೆ ವಿವಿಧ ದೈವಿ ಕೈಂಕರ್ಯಗಳನ್ನು ನೆರವೇರಿಸಿದರು.
ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಶ್ರೀಧರ ಸ್ವಾಮಿಗಳ ಜೀವನ ಚರಿತ್ರೆ ಹರಿಕಥೆಯನ್ನು ಹಡಿನಬಾಳದ ಹರಿದಾಸ ಗಣಪತಿ ಹೆಗಡೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರದಾನ ಅರ್ಚಕ ವಿಶ್ವೇಶ್ವರ ಭಟ್ ಹಾಗೂ ಇತರರು ಉಪಸ್ಥಿತರಿದ್ದರು.

loading...