ವಿಜೃಂಭನೆಯ ಶೀಗೆ ಹುಣ್ಣಿಮೆ

0
49

ಕುಂದಗೋಳ,27: ಶೀಗೆ ಹುಣ್ಣಿಮೆಯ ಅಂಗವಾಗಿ ತಾಲೂಕಿನಾದ್ಯಂತ ಸಡಗರದಿಂದ ಚರಗ ಚೆಲ್ಲಿ ಸಿಹಿಯೂಟದ ಹಬ್ಬ ಆಚರಿಸಿದ ರೈತ ಭಾಂದವರು ಹಿಂಗಾರು ಬೆಳೇಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮಂಗಳವಾರ ರೈತ ಭಾಂದವರು ಅತ್ಯಂತ ಸಡಗರ ಸಂಭ್ರಮದಿಂದಲೇ ಬರದ ಕರಿ ನೆರಳ ನಡುವೆಯೂ ಭೂಮಿ ತಾಯಿಗೆ ವಿಶೇಷ ಸಿಹಿಯೂಟದ ಚರಗ ಚೆಲ್ಲಿ ಹೊಲದಲ್ಲಿದ್ದ ಬನ್ನಿ ಮಹಾಂಕಾಳಿಗೆ ಪೂಜೆ ಸಲ್ಲಿಸಿದ ಮಹಿಳೆಯರು ಮತ್ತು ಮಕ್ಕಳೂ ಸಹಿತ ರೈತ ಭಾಂದವರು ಸಿಹಿಯೂಟದ ಸಂಭ್ರಮನಾಚರಣೆ ಮಾಡಿ ಭೂ ತಾಯಿಗೆ ನಮನ ಸಲ್ಲಿಸಿದರು.
ಬರಗಾಲವಿದ್ದರೂ ಕೂಡ ಹಲವಡೆ ಮೆಣಸಿನಕಾಯಿ, ಹತ್ತಿ, ಸಹಿತ ಇನ್ನಿತರ ಬೆಳೆ ಬೆಳೆದಿರುವ ಅನ್ನದಾತರು ಕರಿಗಡಬು, ಹೂರಣ ತುಂಬಿದ ಹೋಳಿಗೆ, ಖರ್ಚಿಕಾಯಿ, ಸೇಂಗಾ, ಎಳ್ಳು ಹೋಳಿಗೆ, ಉಣಗಡಬು ಮತ್ತಿತರ ಖಾದ್ಯಗಳನ್ನು ಹೊಲದಲ್ಲಿ ಪ್ರತಿಷ್ಠಾಪಿಸಿದರು.

loading...

LEAVE A REPLY

Please enter your comment!
Please enter your name here