ವಿಟಿಯು ವಿಭಜನೆ ರಾಜಕೀಯ ನಡೆ ಸರಿಯಲ್ಲ : ಸಾಹಿತಿಗಳಿಂದ ಮನವಿ

0
44

ಕನ್ನಡಮ್ಮ ಸುದ್ದಿ- ಬೆಳಗಾವಿ: ಸಾಹಿತಿಗಳ ಆಧಾರ ಸ್ತಂಭ, ಉತ್ತರ ಕರ್ನಾಟಕದ ಅಭಿವೃದ್ಧಿ ಗ್ರಂಥವಾದ ವಿಟಿಯು ವಿಶ್ವವಿದ್ಯಾಲಯವನ್ನು ವಿಭಜಿಸುವ ಸರಕಾರ ವಿರೋಧಿಸಿ ಬೆಳಗಾವಿ ಸಾಹಿತಿ ಹಾಗೂ ಕಲಾವಿದರ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಅವರು, ವಿಟಿಯು ಸ್ಥಳಾಂತರಕ್ಕೆ ಕೈ ಹಾಕಿದ ರಾಜ್ಯ ಸರಕಾರ ಬೆಳವಣಿಗೆ ಸಾಹಿತಿಗಳಿಗೆ ಆತಂಕವನ್ನುಂಟು ಮಾಡಿದೆ.ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ಸ್ಥಾಪನೆಗೆ ಉತ್ತರ ಕರ್ನಾಟಕ ಸಾಹಿತಿಗಳು ಹಾಗೂ ಹೋರಾಟಗಾರರ ಹೋರಾಟದವ ಫಲಶುತ್ರಿಯಾಗಿದೆ.
ರಾಜ್ಯ ಸರಕಾರ ಅವೈಜ್ಞಾನಿಕ ಕಡೆ ಹೆಜ್ಜೆ ಹಾಕುತ್ತಿದೆ.
ಬಜೆಟ್ ಪ್ಯಾರದಿಂದ ವಿಟಿಯು ವಿಭಜನೆ ಕೈ ಬಿಡಬೇಕು. ಹಾಸನದ ಅಭಿವೃದ್ಧಿಗೆ ಹಳೆ ಮೈಸೂರಿನಲ್ಲಿ ಸಾಕಷ್ಟು ವಿಭಾಗಗಳಿಗೆ ಅವುಗಳನ್ನು ಸ್ಥಳಾಂತರ ಮಾಡಿಕೊಳ್ಳಬಹುದು.
ಇಲ್ಲಿನ ವಿಟಿಯು ಸ್ಥಳಾಂತರ ದಿಂದ ಹಾಸಕ್ಕೆ 470 ಕೋಟಿ ಅನುದಾನ ತಮ್ಮ ತೆಕ್ಕೆಗೆ ತೆಗೆದುಕೊಂಡು ಹೋಗುವ ಹುನ್ನಾರಕ್ಕೆ ಸಿಎಂ ಅವರು ಕೈ ಹಾಕಿದ್ದಾರೆ.
ವಿಟಿಯು ಒಡೆಯಲು ಬಿಡುವುದಿಲ್ಲ , ಉತ್ತರ ಕರ್ನಾಟಕ ಜನತೆಯ ಸಹನೆ, ತ್ಮಾಳೆ ಪರೀಕ್ಷಿಸುತ್ತಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ತೊರಲು ಎಲ್ಲ ಉ.ಕ ಸಂಘಟನೆಗಳು, ಸಾಹಿತಿಗಳು, ಕಲಾವಿದರು ಒಗ್ಗಟ್ಟಾಗಿ ಪ್ರತಿಭಟಿಸುತ್ತೆವೆ ಎಂದರು.
ಈ ಸಂದರ್ಭದಲ್ಲಿ ಸಾಹಿತಿ ಡಾ.ಸರಜೂ ಕಾಟ್ಕರ್ , ಸಾಹಿತಿ ಯ ರೂ. ಪಾಟೀಲ, ಸಾಹಿತಿ ಜ್ಯೋತಿ ಬದಾಮಿ, ಡಾ. ಚೌಗಲೆ, ಆಶಾ ಕಡ್ಡಪಟ್ಟಿ , ಬಸವರಾಜ ಜಗಜಂಪಿ, ರಾಮಕೃಷ್ಣ ಮರಾಠೆ , ಶಶಿಧರ ಘಿವಾರಿ, ಹೇಮಾ ಸೋನೂಳ್ಳಿ ಹಾಗೂ ಉಪಸ್ಥಿತರಿದ್ದರು.

loading...