ವಿದೇಶದಲ್ಲಿ ಜೀವನಸಾಬ ಬಿನ್ನಾಳ ರವರ ಜಾನಪದ ಕಂಪು

0
45

ಕುಷ್ಟಗಿ: ಇತ್ತೀಚೆಗೆ ಕತಾರ್ ದೇಶದ ರಾಜಧಾನಿ ದೋಹಾ ನಗರದಲ್ಲಿ ಕರ್ನಾಟಕ ಮುಸ್ಲೀಂ ಸಾಂಸ್ಕøತಿಕ ಸಂಘವು ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ಅಂತರಾಷ್ಟ್ರೀಯ ಜಾನಪದ ಕಲಾವಿದ ಜೀವನಸಾಬ ಬಿನ್ನಾಳ ಅವರು ಜನಪದ ಸಾಹಿತ್ಯ ಮತ್ತು ಕಲೆಗಳ ಕುರಿತು ಉಪನ್ಯಾಸ ಹಾಗೂ ಜಾನಪದ ಗಾಯನ ನಡೆಸಿಕೊಟ್ಟು ಜನಮನ ರಂಜಿಸಿದರು.
ಕತಾರ್ ರಾಷ್ಟ್ರದ ದೋಹಾ ನಗರದ ಇಂಡಿಯನ್ ಕಲ್ಚರಲ್ ಸೆಂಟರ್ ಅಶೋಕ ಹಾಲ್‍ನಲ್ಲಿ 62ನೇ ಕನ್ನಡ ರಾಜ್ಯೋತ್ಸವದ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಕಲಾವಿದ ಜೀವನಸಾಬ ಬಿನ್ನಾಳ ಮಾತನಾಡುತ್ತಾ ಜಾನಪದ ಕಲೆಯು ಕನ್ನಡ ನಾಡಿನ ಶ್ರೀಮಂತ ಕಲೆಯಾಗಿದ್ದು ಇಂದಿನ ಅತಿಯಾದ ಟಿವಿ, ಮೊಬೈಲ್ , ಪಾಶ್ಚಿಮಾತ್ಯ ಸಂಗೀತದ ಪ್ರಭಾವಕ್ಕೊಳಗಾಗಿ ನಮ್ಮ ಗ್ರಾಮೀಣ ಸೊಗಡು ಮೂಲೆ ಗುಂಪಾಗುತ್ತಿರುವುದು ವಿಷಾಧನೀಯ. ಜಾನಪದ ಕಲಾಪ್ರಕಾರಗಳು ಉಳಿದರೇ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯ, ನಾಡಿನಲ್ಲಿರುವ ನಾವುಗಳು ನಿರಾಭಿಮಾನಿಗಳಾಗಿರುವ ಈ ಸಂದರ್ಭದಲ್ಲಿ ಹೊರದೇಶದಲ್ಲಿರುವ ಅನಿವಾಸಿ ಭಾರತೀಯ ಕನ್ನಡಿಗರು ತಾವು ಹುಟ್ಟಿದ ಕನ್ನಡ ನಾಡು, ನುಡಿ, ಕಲೆ ಸಂಸ್ಕøತಿಯ ಬಗ್ಗೆ ಅಪಾರ ಅಭಿಮಾನ ಹೊಂದಿ ವಿದೇಶದಲ್ಲಿ ನೆಲೆಸಿದ್ದರೂ ಕನ್ನಡತನವನ್ನು ಮೈಗೂಡಿಸಿಕೊಂಡು ತಮ್ಮ ಹೃದಯದಲ್ಲಿ ಗಟ್ಟಿಯಾಗಿ ಕಟ್ಟಿಕೊಳ್ಳುವ ಪ್ರಯತ್ನ ಶ್ಲಾಘನೀಯ ಹಾಗೂ ಅನುಕರಣೀಯ ಎಂದರು. ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಅಥಣಿಯ ಬಸವರಾಜ ಉಮ್ರಾಣಿ ಗಣಿತ ಜಾದೂಗಾರ ಹಾಗೂ ಹಾಸ್ಯ ಕಲಾವಿದ ಅಜಯ ಸಾರಾಪುರೆ ಅವರು ಕಾರ್ಯಕ್ರಮ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಮುಸ್ಲೀಂ ಸಾಂಸ್ಕøತಿಕ ಸಂಘದ ಅಧ್ಯಕ್ಷರಾದ ಅಬ್ದುಲ್‍ಮೋನು, ನಿಯಾಜ ಅಹ್ಮದ, ಇಸ್ಮಾಯಿಲ್, ಗಿರೀಶ, ಇತರರು ಹಾಜರಿದ್ದರು.

loading...