ವಿದೇಶಿ ಸಂಸ್ಕ್ರತಿಯಿಂದ ನಮ್ಮ ಕಲೆ,ಪರಂಪರೆ ಅವನತಿಗೆ ಸಾಗುತ್ತಿದೆ: ಶಾಸಕ ಪಾಟೀಲ

0
55


ಕುಷ್ಟಗಿ : ನಮ್ಮ ನಾಡಿನ ಸಂಸ್ಕøತಿಯು ಜಗತ್ತಿನಾಧ್ಯಂತ ಹೆಸರುವಾಸಿಯಾಗಿದ್ದು ವಿದೇಶಿ ಸಂಸ್ಕøತಿಯಿಂದ ನಮ್ಮ ನಾಡಿನ ಅನೇಕ ಕಲೆಗಳು ಹಾಗೂ ಪರಂಪರೆ ಅವನತಿಯ ಹಾದಿಯತ್ತ ಸಾಗುತ್ತಿರುವುದು ವಿಷಾಧಕರ ಸಂಗತಿ ಎಂದು ಶಾಸಕ ದೊಡ್ಡನಗೌಡ ಪಾಟೀಲ ವಿಷಾಧ ವ್ಯಕ್ತ ಪಡಿಸಿದರು.
ತಾಲೂಕಿನ ತೆಗ್ಗಿಹಾಳ ಗ್ರಾಮದಲ್ಲಿ ರವಿವಾರ ಸಂಜೆ ಗ್ರಾಮದ ಬಾ.ಸ.ಹಿ.ಪ್ರಾ.ಶಾಲೆಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಹಾಗೂ ಶ್ರೀ ಹುಲಿಗೆಮ್ಮದೇವಿ ಸಾಂಸ್ಕøತಿಕ ಸಂಘ ತೆಗ್ಗಿಹಾಳ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಪದ ಕಲಾ ಉತ್ಸವ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಶಾಸಕರು ಉದ್ಘಾಟಿಸಿ ಮಾತನಾಡುತ್ತಾ ನಾವು ಈ ಹಿಂದೆ ನಮ್ಮ ಹಿರಿಯರು ಅನೇಕ ಕಲೆ ಸಂಸ್ಕøತಿಯನ್ನು ಹಾಕಿ ಕೊಟ್ಟಿರುವುದು ನಮ್ಮ ಕಣ್ಣ ಮುಂದಿದೆ. ಆದರೆ ಇಂದಿನ ಪಾಶ್ಚಾತ್ಯ ಆಚರಣೆ ಹಾಗೂ ವಿದೇಶಿ ಸಂಸ್ಕøತಿಗೆ ಜನ ಸಮೂಹ ಮಾರಿಹೋಗುತ್ತಿರುವುದು ದುರದೃಷ್ಟಕರವಾಗಿದೆ. ನಮ್ಮ ಹಿರಿಯರು ಜನಪದ, ತತ್ವಪದ, ಹಂತಿ ಪದ, ಬೀಸುವ ಪದ, ಸಂಪ್ರದಾಯ ಪದ ಹೀಗೆ ಹತ್ತಾರು ಪ್ರಕಾರಗಳ ಜೀವನದ ಹಾಗೂ ನಮ್ಮ ಸಂಸ್ಕøತಿಯ ಎಳೆಯನ್ನು ನಾವು ಕಾಣಬಹುದಾಗಿದ್ದು, ಇಂತಹ ಕಲೆಗಳನ್ನು ಉಳಿಸಿ ಬೆಳೆಸಲು ಸರಕಾರ ಸಂಸ್ಕøತಿ ಇಲಾಖೆಯ ಮೂಲಕ ಕಾರ್ಯಕ್ರಮ ಆಯೋಜಿಸಿ ಕಲೆಯನ್ನು ಜೀವಂತವಾಗಿರಿಸಲು ಉತ್ತೇಜನ ನೀಡುತ್ತಿರುವುದು ಸ್ವಾಗತಾರ್ಹವಾಗಿದೆ. ನಮ್ಮ ಕಲಾವಿದರು ಹಾಗೂ ಅವರ ಕಲೆ ಇಷ್ಟಕ್ಕೆ ಸೀಮಿತವಾಗದೇ ಅನೇಕ ಯುವ ಕಲಾವಿದರನ್ನು ಹಾಗೂ ಕಲೆಯನ್ನು ಉಳಿಸಿ ಬೆಳೆಸುವ ಮತ್ತು ಅವರನ್ನು ಬೆಳಕಿಗೆ ತರುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ. ಮಹೇಶ ಮಾತನಾಡಿ ಟಿ.ವಿ.ಮಾಧ್ಯಮದಿಂದ ನಾವು ನೀವೆಲ್ಲರೂ ದೂರವಾಗಿ ನಮ್ಮ ಹಿರಿಯರ ಹಾಕಿಕೊಟ್ಟ ಮಾರ್ಗದರ್ಶನದಂತೆ ಹಾಗೂ ನಮ್ಮ ಹಳೆ ಸಂಪ್ರದಾಯಗಳನ್ನು ಬಿಡದೇ ಕಲೆ, ಸಂಸ್ಕøತಿಯನ್ನು ಮುಂದುವರೆಸಬೇಕೆಂದು ಹೇಳಿದರು. ನಂತರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಮನ್ವಯಾಧಿಕಾರಿ ನಬಿಸಾಬ ಕುಷ್ಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾ.ಪಂ. ಸದಸ್ಯ ನಾಗಪ್ಪ ಗುಡದೂರ, ಗ್ರಾ.ಪಂ. ಸದಸ್ಯರಾದ ನಿರುಪಾದೆಪ್ಪ ಮಡಿಕೇರಿ, ಯಮನಮ್ಮ ಕೂಡ್ಲೂರ, ರೇಣಮ್ಮ ಕಠಾರಿ, ಮುಖಂಡರಾದ ಸಂಗನಗೌಡ ಜೇನರ್, ಅಡಿವೆಪ್ಪ ನೆರೆಬೆಂಚಿ, ಶರಣಪ್ಪ ನಿಡಶೇಸಿ, ದೊಡ್ಡಪ್ಪ ಕೈಲವಾಡಗಿ, ಶ್ರೀ ಹುಲಿಗೆಮ್ಮದೇವಿ ಸಂಸ್ಥೆಯ ರಾಮಣ್ಣ ಚೌಡ್ಕಿ ಸೇರಿದಂತೆ ಮತ್ತಿತರರು ಇದ್ದರು. ಕಾರ್ಯಕ್ರಮದ ಸ್ವಾಗತವನ್ನು ನಡುಗಡ್ಡೆಪ್ಪ ಜಗ್ಲರ್ ನಿರೂಪಣೆಯನ್ನು ಬಸವರಾಜ ಉಪ್ಪಲದಿನ್ನಿ ನೆರವೇರಿಸಿದರು. ನಂತರ ರಾತ್ರಿ 11.30ರ ವರೆಗೆ ವಿವಿಧ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.

loading...

LEAVE A REPLY

Please enter your comment!
Please enter your name here