ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನ ಪಡೆಯಿರಿ: ಕುಮಾರ ಗುರವ್

0
48

ಕಾಗವಾಡ: ಇಂದಿನ ವಿಜ್ಞಾನ ಯುಗದಲ್ಲಿ ಪಠ್ಯ ಪುಸ್ತಕಗಳ ಅಕ್ಷರ ಜ್ಞಾನ ಪಡೆದೂ, ಪದವಿ ಪಡೆದರೂ ಕಂಪ್ಯೂಟರ್ ಜ್ಞಾನವಿಲ್ಲದಿದ್ದರೇ ಸಮಾಜದಲ್ಲಿ ಪದವಿ ಪಡೆದರು ಅನಕ್ಷರತೆಗೆ ಸಮಾನವೆಂದು ಉಗಾರದ ಗುರವ್ ಎಜ್ಯುಕೇಶನ್ ಆ್ಯಂಡ್ ರುರಲ್ ಡೆವಲೋಪಮೆಂಟ್ ಸಂಸ್ಥೆಯ ಆಧ್ಯಕ್ಷರಾದ ಕುಮಾರ ಗುರವ್ ಇವರು ಹೇಳಿದರು.
ಶುಕ್ರವಾರ ರಂದು ಉಗಾರ ಖುರ್ದ ಪಟ್ಟಣದ ಗುರವ್ ಕಂಪ್ಯೂಟರ್ಸ್ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಾಗ ಕುಮಾರ ಗುರವ್ ಹೇಳಿದರು.
ಇಂದಿನ ಸಮಾಜದಲ್ಲಿ ಪ್ರತಿಯೊಂದು ಕ್ಷೆÃತ್ರದಲ್ಲಿ ಕಂಪ್ಯೂಟರ್ ಜ್ಞಾನ ಅತ್ಯಾವಶ್ಯಕವಾಗಿದೆ. ಇದನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳು ಬೇಸಿಗೆಯ ರಜೆ ಅವಧಿಯಲ್ಲಿ ಮನೆಯಲ್ಲಿ ಕಾಲ ಹರಣ ಮಾಡದೆ, ಕಂಪ್ಯೂಟರ್ ಜ್ಞಾನ ಪಡೆದುಕೊಳ್ಳಲು ಮುಂದಾಗಿರಿ. ಕಳೇದ ೫ ವರ್ಷಗಳಿಂದ ಸಂಸ್ಥೆಯಲ್ಲಿ ಸರ್ಕಾರದ “ರಾಷ್ಟಿçÃಯ ಡಿಜಿಟಲ್ ಸಾಕ್ಷರತಾ ಮಿಷನ್” ಯೋಜನೆಯಲ್ಲಿ ಸುಮಾರು ೧ ಸಾವಿರ ವಿದ್ಯಾರ್ಥಿಗಳು ತರಬೇತಿ ಪಡೆದುಕೊಂಡಿದ್ದಾರೆ. ಎಲ್ಲ ರೀತಿಯ ಸಹಕಾರ, ಸರ್ಕಾರಿ ಸಹಾಯ/ಸೌಲತ ನಾನು ನೀಡುತ್ತೆÃನೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಇದೇ ಸಂಸ್ಥೆಯಲ್ಲಿ ಬರುವ ಕೆಲ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕನಸ್ಸಿನ ಕುಸವಾದ “ಪ್ರಧಾನಮಂತ್ರಿ ಕೌಶಲ್ಯ ವಿಕಾಸ್ ಯೋಜನೆ” ಪ್ರಾರಂಭಗೊಳ್ಳಲಿದೆ ಎಂದರು.
ಈ ವೇಳೆ ಕಂಪ್ಯೂಟರ್ ತರಬೇತಿಗಾರ ಶಿಕ್ಷಿಕೆ ಶಭಾನಾ ಅಬ್ಬಾಸ್ ಮೋಮಿನ್, ಕಾವೇರಿ ಕದಂ, ಶಶೀಕಾಂತ ಬಹುತುಲೆ, ಜಾಸಮೀನ್ ಡಾಂಗೆ, ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

loading...