ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದಿರಲಿ: ಪ್ರಕಾಶ

0
14

ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದಿರಲಿ: ಪ್ರಕಾಶ
ಕನ್ನಡಮ್ಮ ಸುದ್ದಿ-ಮುಗಳಖೋಡ: ಇಂದಿನ ವಿದ್ಯಾರ್ಥಿಗಳು ಕೇವಲ ಅಂಕಗಳಿಸುವತ್ತ ಗಮನಹರಿಸುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಮಾಸಿಕ ಒತ್ತಡ ಹೆಚ್ಚಾಗುತ್ತಿವೆ. ಇಂದು ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗಿರದೇ ಆಟೋಟಗಳಿಗೆ ಕೂಡಾ ಆದ್ಯತೆಯನ್ನು ನೀಡಿದರೆ ಮಕ್ಕಳ ಬೆಳವಣಿಗೆ ಸಮೃದ್ದಿಯಿಂದ ಕೂಡಿರುತ್ತದೆ. ಆಟಗಳನ್ನು ಆಟುವದರ ಮೂಲಕ ದೇಹವನ್ನು ಸಧೃಢಗೋಳಿಸಿಕೊಳ್ಳಬಹುದು. ನಮ್ಮ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಬಹುದೆಂದು ಹೇಳುವುದರೊಂದಿಗೆ ಹಾಕಿ ಮಾಂತ್ರಿಕ ಧ್ಯಾನಚಂದ ಒಬ್ಬ ವಿಶ್ವ ಶ್ರೆÃಷ್ಠ ಆಟಗಾರ. ಅವರ ತಮ್ಮ ಆಟದ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೋಳಿಸಿ ತಮ್ಮ ವಿಶ್ವಶ್ರೆÃಷ್ಠ ವ್ಯಕ್ತಿತ್ವವನ್ನು ಪರಿಚಯಿಸಿದರೆಂದು ಪ್ರೊÃ. ಪ್ರಕಾಶ ಕಂಬಾರ ಅವರು ಹೇಳಿದರು.
ಅವರು ಪಟ್ಟಣದ ಶ್ರಿà ಚ ವಿ ವ ಸಂಘದ ಡಾ.ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಜನ್ಮ ದಿನ ನಿಮಿತ್ಯ “ರಾಷ್ಟಿçÃಯ ಕ್ರಿÃಡಾ ದಿನಾಚರಣೆ” ಯ ಮುಖ್ಯ ಅಥಿತಿ ಸ್ಥಾನವನ್ನು ವಹಿಸಿ ಮಾತನಾಡಿದರು.
ಪ್ರಾಚಾರ್ಯ ಡಾ.ವ್ಹಿ.ಕೆ.ನಡೋಣಿ ಮಾತನಾಡಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಜೀವನ ಚರಿತ್ರೆ ಅವರ ಮಾಡಿರುವ ಸಾಧನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಡಾ.ಪಿ.ಬಿ.ಕೊರವಿ, ಆರ್.ಎಸ್.ಶೇಗುಣಸಿ, ಬಿ.ಎಂ.ಹಿಪ್ಪರಗಿ, ಪಿ.ಎ.ನಾಯಕ, ಬಿ.ಎಸ್.ಸವಸುದ್ದಿ, ಕೆ.ಬಿ.ಕೊಚೇರಿ, ಡಿ.ಎಂ.ಹೋಸಪೇಟಿ, ಗಜಾನಂದ ತೇರದಾಳ, ಪರುಶುರಾಮ ಮಾದರ, ಎಸ್.ಜಿ.ಗೋಕಾಕ, ಎಚ್.ಈ .ಯಲಿಗಾರ, ಬಸವರಾಜ ಸನ್ನಕ್ಕಿನವರ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

loading...