ವಿದ್ಯಾರ್ಥಿಗಳ ಸರ್ವಾಂಗೀಣ ಉನ್ನತಿಗೆ ಶ್ರಮಿಸಿ: ಅನುಪಮಾನಂದಜೀ

0
17

ರಾಮಕೃಷ್ಣ ಮಿಷನ್ ಆಶ್ರಮದ ೧೬ನೇ ವಾರ್ಷಿಕೋತ್ಸವದಲ್ಲಿ ಹೇಳಿಕೆ
ವಿದ್ಯಾರ್ಥಿಗಳ ಸರ್ವಾಂಗೀಣ ಉನ್ನತಿಗೆ ಶ್ರಮಿಸಿ: ಅನುಪಮಾನಂದಜೀ

ಬೆಳಗಾವಿ: ವಿದ್ಯಾರ್ಥಿಗಳ ಜೀವನದಲ್ಲಿ ಭೌತಿಕ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣಕ್ಕೂ ಹಾಗೂ ಆಧ್ಯಾತ್ಮಿಕ ಶಿಕ್ಷಣಕ್ಕೂ ಅಷ್ಟೇ ಪ್ರಾಶಸ್ತö್ಯ ನೀಡಿ ವಿದ್ಯಾರ್ಥಿಗಳ ಸರ್ವಾಂಗೀಣ ಉನ್ನತಿಗೆ ಕಾರಣರಾಗಿ ಸಮರ್ಥರಾಷ್ಟç ನಿರ್ಮಾಣಕ್ಕಾಗಿ ಶ್ರಮಿಸಬೇಕೆಂದು ಸ್ವಾಮಿ ಅನುಪಮಾನಂದಜೀ ಮಹಾರಾಜ್‌ರವರು ಹೇಳಿದರು.

ಇಲ್ಲಿನ ರಾಮಕೃಷ್ಣ ಮಿಷನ್ ಆಶ್ರಮದ ಸಭಾಂಗಣದಲ್ಲಿ ಶನಿವಾರ ರಾಮಕೃಷ್ಣ ಮಿಷನ್ ಆಶ್ರಮದ ೧೬ನೇ ವಾರ್ಷಿಕೋತ್ಸವದ ನಿಮಿತ್ತವಾಗಿ ಆಯೋಜಿಸಿದ “ಸಮರ್ಥ ಶಿಕ್ಷಕ-ರಾಷ್ಟçರಕ್ಷಕ” ಶಿಕ್ಷಕರ ಸಮಾವೇಶವನ್ನು ಉದ್ಘಾಟಿಸಿ ದಿವ್ಯ ಸಾನಿದ್ಯ ವಹಿಸಿ ಮಾತನಾಡಿ,

ಸ್ವಾಮಿಕರುಣಾಕರಾನಂದಜೀ ಮಹಾರಾಜ್ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾಹಿತಿ ಕಲೆ ಹಾಕುವಿಕೆ, ಮತ್ತು ನೈಜಜ್ಞಾನ ಸಂಪಾದನೆಗಳ ವ್ಯತ್ಯಾಸವನ್ನು ತಿಳಿ ಹೇಳಿ ವಿಶಿಷ್ಟ ಕಲಿಕೆಯ ವಿಧಾನಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆಯಆಸಕ್ತಿಯನ್ನು ಮೂಡಿಸಬೇಕೆಂದು ಹೇಳಿದರು.

ಡಾ. ಅನಂತರಾಮು ಕೆ ಮಾತನಾಡಿ, ಸಮರ್ಥ ವಿದ್ಯಾರ್ಥಿಗಳ ನಿರ್ಮಾಣ ಮಾಡಿತತ್ಕಾರಣದಿಂದರಾಷ್ಟç ನಿರ್ಮಾಣದಲ್ಲಿ ಸಹಾಯಕರಾಗಬೇಕೆಂದು ಶಿಕ್ಷಕರನ್ನು ಆಹ್ವಾನಿಸಿದರು. ಅದರಜೊತೆಗೆಜ್ಞಾನದಾನವುಎಲ್ಲ ದಾನಗಳಲ್ಲಿ ಸರ್ವೋಚ್ಛವಾದದ್ದು, ಶಿಕ್ಷಕ ವೃತ್ತಿಯುಅತೀ ಶ್ರೇಷ್ಠವಾದದ್ದೆಂದು ಹೇಳಿದರು.

ಸ್ವಾಮಿಅನುಪಮಾನಂದಜೀ ಮಹಾರಾಜ್, ಸ್ವಾಮಿಕರುಣಾಕರಾನಂದಜೀ ಮಹಾರಾಜ್, ಡಾ. ಕೆ. ಅನಂತರಾಮು ಉಪನ್ಯಾಸ ನೀಡಿದರು. ಅಧ್ಯಕ್ಷತೆ ರಾಮಕೃಷ್ಣ ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮಪ್ರಾಣಾನಂದ ಮಹಾರಾಜ್ ವಹಿಸಿ, ಅತಿಥಿ ಸ್ವಾಗತಿಸಿದರು. ಶಾಂತಲಾ ನಾಟ್ಯಾಲಯದ ಶಿಷ್ಯ ವೃಂದದಿAದ ಪ್ರಸ್ತುತಪಡಿಸಿದ ಶ್ರೀರಾಮಕೃಷ್ಣ ಪರಮಹಂಸರ ಹಾಗೂ ಸ್ವಾಮಿ ವಿವೇಕಾನಂದರ ನಡುವಿನ ಸಂವಾದವನ್ನಾಧರಿಸಿದ ನೃತ್ಯರೂಪಕ “ಗುರು-ಶಿಷ್ಯ ಸಂವಾದ” ದೊಂದಿಗೆ ನೆರವೆರಿತು. ಕಾರ್ಯಕ್ರಮದಲ್ಲಿ ಸುಮಾರು ೧೨೦೦ ಶಿಕ್ಷಕರು ಭಾಗವಹಿಸಿದರು. ಸುರೇಶ ಬೆಟಗೇರಿ ನಿರೂಪಿಸಿ, ವಂದಿಸಿದರು.

loading...