ವಿದ್ಯಾರ್ಥಿನಿಯರಿಗೆ ನ್ಯಾಪ್ಕಿನ್ ಯಂತ್ರ ವಿತರಣೆ

0
9

ಗುಳೇದಗುಡ್ಡ: ನಗರದ ಮಾಹೇಶ್ವರಿ ಮಹಿಳಾ ಮಂಡಳದ ವತಿಯಿಂದ ನಗರದ ನಾಲ್ಕು ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರಿಗಾಗಿ ವಿತರಿಸುವ ಸ್ಯಾನಿಟರಿ ನ್ಯಾಪ್ಕಿನ್ ಯಂತ್ರಗಳನ್ನು ಅಳವಡಿಸಿದರು.
ನಾಲ್ಕು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯ, ರಾಠಿ ಮತ್ತು ಕಾವಡೆ ಆಂಗ್ಲ ಮಾಧ್ಯಮ ಶಾಲೆ, ಭಂಡಾರಿ ಹಾಗೂ ರಾಠಿ ಕಾಲೇಜು ಮತ್ತು ನೆಹರು ಅಂತರಾಷ್ಟಿçÃಯ ಪಬ್ಲಿಕ್ ಶಾಲೆ ಹೀಗೆ ಒಟ್ಟು ನಾಲ್ಕು ಕಡೆಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಯಂತ್ರಗಳನ್ನು ಮಾಹೇಶ್ವರಿ ಮಹಿಳಾ ಮಂಡಳದ ಪದಾಧಿಕಾರಿಗಳು ವಿತರಿಸಿದರು. ಮಾಹೇಶ್ವರಿ ಮಂಡಳದ ಅಧ್ಯಕ್ಷೆ ಪುಷ್ಪಾಬಾಯಿ ಧೂತ ಮಾತನಾಡಿ, ಮಹಿಳೆಯರ ಆರೋಗ್ಯದ ದೃಷ್ಠಿಯಿಂದ ಈ ನ್ಯಾಪ್ಕಿನ್ ಯಂತ್ರ ನೀಡಲಾಗಿದ್ದು, ಇದರಲ್ಲಿ ಐದು ರೂಪಾಯಿ ಕ್ವಾಯಿನ್ ಹಾಕಿದರೆ ಒಂದು ನ್ಯಾಪ್ಕಿನ್ ಬರುತ್ತದೆ. ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ನಗರದ ನಾಲ್ಕು ಕಡೆಗಳಲ್ಲಿ ಈ ಯಂತ್ರಗಳಲ್ಲಿ ಅಳವಡಿಸಿ ವಿತರಿಸಿದ್ದೆÃವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯೆ ವಂದನಾ ಗೋಪಾಲ ಭಟ್ಟಡ, ಮಾಹೇಶ್ವರಿ ಮಂಡಳದ ಕಾರ್ಯದರ್ಶಿ ಸುನಿತಾ ರಾಠಿ, ಸದಸ್ಯರಾದ ಉಮಾಬಾಯಿ ಮರ್ದಾ, ಶರಯು ಜಾಜು, ಸೋಮನಬಾಯಿ ಧೂತ, ಉಪನ್ಯಾಸಕಿ ರಶ್ಮಿ, ನೇಹಾ ಕಂಟ್ರಾಕ್ಟರ್, ಕಾರುಣ್ಯ ನಿಲುಗಲ್ ಸೇರಿದಂತೆ ಇತರರು ಇದ್ದರು.

loading...