ವಿದ್ಯಾರ್ಥಿ ಜೀವನದಲ್ಲೆÃ ಸಮಾಜಸೇವಾ ಗುಣ ಅಗತ್ಯ: ಮಂಗಸೂಳಿ

0
12

ಅಥಣಿ: ಭಾವಿ ಜೀವನದಲ್ಲಿ ಸಾಧನೆ ಗೈಯುವಲ್ಲಿ ವಿದ್ಯಾರ್ಥಿ ಜೀವನದಲ್ಲೆÃ ನಾಯಕತ್ವ ಹಾಗೂ ಸಮಾಜಸೇವಾ ಗುಣ ಬೆಳೆಸಿಕೋಳ್ಳುವುದು ಅಗತ್ಯ. ಎಂದು ಅಥಣಿ ರೋಟರಿ ಕ್ಲಬ್ ಸಂಸ್ಥಾಪಕ ಗಜಾನನ ಮಂಗಸೂಳಿ ಕಿವಿ ಮಾತು ಹೇಳಿದರು.
ರೋಟರಿ ಇಂರ‍್ಯಾಕ್ಟ ಕ್ಲಬಿನ ನೂತನ ಸದಸ್ಯರಿಗೆ ಪದಗ್ರಹಣ ನೆರವೇರಿಸಿ, ಸ್ಥಳಿಯ ಕೆಎಲ್‌ಇ ಸಂಸ್ಥೆಯ ಸಿಬಿಎಸ್‌ಸಿ ಶಾಲೆಯಲ್ಲಿ ನಡೆದ. ಸಮಾರಂಭದಲ್ಲಿ ಮಂಗಸೂಳಿಯವರು ಮಾತನಾಡಿದರು. ಅಥಣಿ ರೋಟರಿ ಕ್ಲಬ್ ಅಧ್ಯಕ್ಷ ಶ್ರಿÃಕಾಂತ ಅಥಣಿಯವರು ಮಾತನಾಡುತ್ತ ರೋಟರಿ ಸಂಸ್ಥೆ ಯುವಕರು ಹಾಗೂ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದÀರು ಪ್ರಾಚಾರ್ಯ ಕೆ ಬಿ ಆರ್ ಪಾಟೀಲ ಮಾತನಾಡಿ ವಿದ್ಯಾರ್ಥಿಗಳು ರೋಟರಿ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊÃಳ್ಳಬೇಕು ಎಂದು ಹೇಳಿದರು.

ನೂತನ ಇಂರ‍್ಯಾಕ್ಟ ಕಿಡ್ ರೋಟರಿಯ ಪದಾಧಿಕಾರಿಗಳಾಗಿ ಯಶ್ ಚಿಮ್ಮಡ, ಲಕ್ಷಿö್ಮÃ ಅಥÀಣಿ, ಪೂಜಾ ಕೋಪ್ಪ ಸೇರಿ ೧೦ ವಿದ್ಯಾರ್ಥಿಹಳ ತಂಡ ರಚಿಸಿ ಪದಗ್ರಹಣ ಮಾಡಿದರು. ಸದಸ್ಯ ಸುರೇಶ ಬಳ್ಳೊÃಳ್ಳಿ, ಸಚಿನ ದೇಸಾಯಿ, ಮೇಘರಾಜ ಪರಮಾರ, ಶೇಖರ ಕೋಲಾರ, ರವಿ ಪಾಟೀಲ, ಸಂತೋಷ ಬೊಮ್ಮಣವರ, ಅಮೃತ ಮಹಾಜನ ಇತರರು ಭಾಗಿಯಾಗಿದ್ದರು.

loading...