ವಿವಿಗಳು ಗುಣಮಟ್ಟದ ಶಿಕ್ಷಣ‌‌ ನೀಡುವಲ್ಲಿ‌ ವಿಫಲವಾಗಿವೆ: ಸಚಿವ ರಾಯರೆಡ್ಡಿ

0
320

ಕನ್ನಡಮ್ಮ  ಸುದ್ದಿ
ಬೆಳಗಾವಿ:8 ವಿದ್ಯಾರ್ಥಿಗಳು ಸ್ವಾಥ೯ ಸಾಧನೆಗಾಗಿ ಪದವಿ ಪಡೆಯುವ ಬದಲು ಸಮಾಜದ ಬದಲಾವಣೆ ಮಾಡುವ ಉದ್ದೇಶ ಇಟ್ಟುಕೊಳ್ಳಬೇಕೆಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಇಂದಿಲ್ಲಿ‌ ಹೇಳಿದರು.
ಅವರು ಸೋಮವಾರ ವಿಟಿಯು ಆವರಣದಲ್ಲಿ‌ಆರ್ ಸಿಯು ಐದನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ,
ಕನಾ೯ಟಕ ಅತ್ಯಂತ ಪದವಿದರರನ್ನು ಪಡೆದ ಕ್ಷೇತ್ರ. ವಿದ್ಯಾಕ್ಷೇತ್ರದಲ್ಲಿ ರಾಜ್ಯದಲ್ಲಿ ಒಂದು ಕೋಟಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ರಾಜ್ಯ ಸರಕಾರ 24 , 600 ಕೋಟಿ ರೂ.ಗಳನ್ನು ವಿದ್ಯಾ ಕ್ಷೇತ್ರಕ್ಕೆ‌ಮೀಸಲಿಟ್ಟಿದ್ದೇವೆ ಎಂದು ಅವರು‌ ಹೇಳಿದರು.
ಕನಾ೯ಟಕದಲ್ಲಿ ಈ ಹಿಂದೆ ಖಾಸಗಿ ಸಂಸ್ಥೆಗಳು ಶಿಕ್ಷಣಕ್ಕೆ ಹೆಚ್ಚು‌ಮಹತ್ವ ನೀಡಿದರಿಂದ ಶಿಕ್ಷಣದ ಪ್ರಮಾಣ ಹೆಚ್ಚಿದೆ ಎಂದರು. ಶಿಕ್ಷಣ ಸಂಸ್ಥೆ ಕಟ್ಟುವುದು ಒಂದೆ ಗುರಿಯಲ್ಲ. ವಿದ್ಯಾಥಿ೯ಗಳಿಗೆ ಗುಣಮಟ್ಟದ ಶಿಕ್ಷಣ‌ ನೀಡುವಲ್ಲಿ ಒತ್ತು ಕೊಡಬೇಕೆಂದು‌ ಹತ್ತು ವಷ೯ದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಚೀನಾವನ್ನು ಹಿಂದೆ ಹಾಕಲು ಸಾಧ್ಯವಾಗುತ್ತದೆ ಎಂದರು.
ಯುವಕರು ಜಾಗತಿಕ ಸ್ಪಧೆ೯ಗೆ ಹೋಗಬೇಕಾದರೆ ಗುಣಮಟ್ಟದ ಶಿಕ್ಷಣ‌ ನೀಡುವುದು ಅಗತ್ಯವಾಗಿದೆ.
ಕನಾ೯ಟಕದಲ್ಲಿ ವಿದ್ಯಾಥಿ೯ಗಳಿಗೆ ಗುಣಮಟ್ಟದ ಶಿಕ್ಷಣ‌‌ ನೀಡುವಲ್ಲಿ ವಿಫಲವಾಗಿವೆ ಇದರ ಬಗ್ಗೆ ಗಾಂಭೀರತೆ ಬಂದಾಗ ಮಾತ್ರ ಗುಣ ಮಟ್ಟ ಶಿಕ್ಣಣ ನೀಡಲು ಸಾಧ್ಯವಾಗುತ್ತದೆ. ವಿದ್ಯಾಥಿ೯ಗಳು ಸಹ‌ ಗುಣಮಟ್ಟದ ಶಿಕ್ಷಣ ಪಡೆಯಬೇಕೆಂದು ಅವರು ಸಲಹೆ ನೀಡಿದರು.
ವಿವಿಗಳು ಎಲ್ಲಿಯವರಿಗೆ ಪ್ರಾಮಾಣಿಕವಾಗಿ ಚಿಂತನೆ‌ ಮಾಡುವುದಿಲ್ಲವೋ ಅಲ್ಲಿಯವರೆಗೂ ವಿವಿಗಳು‌ ಸುಧಾರಣೆಯಾಗುವುದಿಲ್ಲ ಎಂದರು.

ಬಾಕ್ಸ್
ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ವಿಟಿಯು ಹಿಂದಿನ‌ ಕುಲಪತಿಗಳ ನಿಲ೯ಕ್ಷ್ಯ ಹಾಗೂ ಅನುದಾನದ ದುಬ೯ಳಕೆ‌ ಮಾಡಿಕೊಂಡು ವಿವಿಗೆ‌ ಮುಜುಗರ ತಂದಿದ್ದರು.
ಬಸವರಾಜ ರಾಯರೆಡ್ಡಿ‌

loading...