ವಿವಿಧ ಕಾಮಗಾರಿಗೆ ಶಾಸಕರಿಂದ ಚಾಲನೆ

0
36

ಶಿಗ್ಗಾವಿ ಃ- ಜನರಿಗೆ ಅತ್ಯಂತ ಹತ್ತಿರ ಇರುವ ಸರ್ಕಾರ ಎಂದರೆ ಅದು ಗ್ರಾಮ ಪಂಚಾಯತಿ ಮಾತ್ರ. ಗ್ರಾಮ ಪಂಚಾಯತಿಗಳು ಪಾರ್ಲಿಮೆಂಟ್‌ಗಿಂತಲೂ ಶ್ರೆÃಷ್ಠ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಹಳೆ ಬಂಕಾಪುರ ಗ್ರಾಮದಲ್ಲಿ ೧೦ ಲಕ್ಷ ರೂ ಅನುದಾನದಲ್ಲಿ ಸಿ.ಸಿ.ರಸ್ತೆ, ಡ್ರೆÃನೇಜ್ ಭೂಮಿ ಪೂಜೆ ಮತ್ತು ೨೦ ಲಕ್ಷ ರೂ ಅನುದಾನದಲ್ಲಿ ಮೊದಲನೇ ಅಂತಸ್ತಿನ ಗ್ರಾಮ ಪಂಚಾಯತಿ ಕಟ್ಟಡದ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದ ಅವರು, ಕಳೆದ ವರ್ಷ ಗ್ರಾಮಸ್ತರಿಂದ ೩ ರಸ್ತೆಗಳಿಗೆ ಬೇಡಿಕೆ ಇತ್ತು ಆ ಪ್ರಕಾರ ಈ ಬಾರಿ ನೀರಾವರಿ ಇಲಾಖೆಯ ಯೋಜನೆ ಅಡಿಯಲ್ಲಿ ಮೂರು ರಸ್ತೆಗಳಿಗೆ ಮಂಜುರಾತಿಯನ್ನು ಪಡೆದು ಕೆಲಸ ಪ್ರಾರಂಭ ಮಾಡಿದ್ದೆÃವೆ ಎಂದರು.
ಗ್ರಾಮ ಪಂಚಾಯತಿಗಳಿಗೆ ಹಲವಾರು ಇಲಾಖೆಗಳ ಕಾರ್ಯಕ್ರಮವನ್ನು ವಿಕೆಂಧ್ರಿÃಕರಣ ಮಾಡಲಾಗಿದೆ, ಆದರೇ ರಾಜಕೀಯವಾಗಿ, ಆಡಳಿತಾತ್ಮಕವಾಗಿ ವಿಕೇಂದ್ರಿಕರಣ ಮಾಡಿದರೆ ಸಾಲದು ಹಣಕಾಸಿನ ವಿಕೆಂಧ್ರಿÃಕರಣ ಆಗಬೇಕು. ಎನ.ಆರ್.ಇ.ಜಿ ಬಿಟ್ಟರೆ ಯಾವುದೇ ದೊಡ್ಡ ಹಣಕಾಸಿನ ವ್ಯವಹಾರ ಗ್ರಾಮ ಪಂಚಾಯತಿಗಳಿಗಿಲ್ಲ. ಹಾಗಾಗಿ ಕೃಳಾ ಮಾದರಿಯಲ್ಲಿ ಗ್ರಾಪಂ ಅಭವೃದ್ದಿಯಾಗಬೇಕು. ಕೇರಳಾದಲ್ಲಿ ದೊಡ್ಡ ಗ್ರಾಮ ಪಂಚಾಯತಿಗಳು ೫-೬ ಜನ ಇಂಜನೀಯರಗಳು ಇರುತ್ತಾರೆ. ಎಲ್ಲಾ ಪ್ರಮುಖ ನಿರ್ಣಯಗಳನ್ನು ಗ್ರಾಮ ಪಂಚಾಯತಿಯಲ್ಲಿಯೇ ತೆಗೆದುಕೊಳ್ಳುತ್ತಾರೆ. ರಾಜ್ಯದ ಒಟ್ಟು ಸೆಲ್ ಟ್ಯಾಕ್ಸನ ಹಣದಲ್ಲಿ ಶೇ೪೦% ಹಾಗೂ ಮೋಟರ ವೆಕಲ್ ಟ್ಯಾಕ್ಸ್ ಶೇ ೨೫% ಗ್ರಾಮ ಪಂಚಾಯತಿಗಳಿಗೆ ಕೊಡುತ್ತಾರೆ. ಹಾಗಾಗಿ ಅಲ್ಲಿಯ ಗ್ರಾಮ ಪಂಚಾಯತಿ ಬಜೆಟ್ ಸುಮಾರು ೨೦ ಕೋಟಿ ವರೆಗೂ ಇರುತ್ತದೆ. ಹಾಗಾಗಿ ನಿಜವಾಗಲೂ ಜನರಿಗೆ ಹತ್ತಿರ ಇರುವ ಸರ್ಕಾರ ಕೇರಳದಲ್ಲಿದೆ ಆತರದ ಅಭಿವೃದ್ದಿ ನಮ್ಮಲ್ಲಿ ಆದಾಗ ಗ್ರಾಮೀಣ ಸರ್ವಾಂಗೀಣ ಅಭಿವೃದ್ದಿ ಸಾದ್ಯ ಎಂದರು.
ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಸುಭಾಸ ತಳವಾರ ಹಾಗೂ ಸದಸ್ಯರು, ಶಿಕ್ಷಕರು ಸ್ಮಾರ್ಟಕ್ಲಾಸ್ ಮಾಡಲು ಶಾಸಕರಿಗೆ ಮನವಿ ಅರ್ಪಿಸಿದರು
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ನಿಂಗಪ್ಪ ಕಮ್ಮಾರ ಅಧ್ಯಕ್ಷತೆ ವಹಿಸಿ ಪ್ರಾಸ್ಥವಿಕವಾಗಿ ಮಾತನಾಡಿದರು, ಮುಖ್ಯ ಅತಿಥಿಗಳಾಗಿ ಜಿಪಂ ಸದಸ್ಯರಾದ ಶೋಭಾ ಗಂಜಿಗಟ್ಟಿ, ತಾಪಂ ಅಧ್ಯಕ್ಷರಾದ ಪಾರವ್ವ ಆರೇರ, ವಿ.ಎಸ್.ಪಾಟೀಲ, ಸಂಕಪ್ಪ ಮಡ್ಡಣ್ಣವರ, ಗ್ರಾಪಂ ಉಪಾದ್ಯಕ್ಷರಾದ ಕಮಲಮ್ಮ ಹರಿಜನ, ಸದಸಯರಾದ ಉಪ್ಪುಣಸಿ ಮತ್ತು ತಳವಾರ, ಮಂಜುನಾಥ ಮಲ್ಲಾಡದ, ಎಸ್.ಡಿ.ಎಮ್.ಸಿ ಅಧ್ಯಕ್ಷ ಸುಭಾಸ ತಳವಾರ, ಶಂಕ್ರಗೌಡ್ರ ಪಾಟೀಲ,ನಾಗರಾಜ ಪಾಟೀಲ, ಬಸವರಾಜ ಹರಿಜನ, ಹನಮಂತಪ್ಪ ತಳ್ಳಳ್ಳಿ ಸ್ವಾಗತಿಸಿದರು.

loading...