ವಿವಿಧ ಕಾಲೇಜ್ ಜಂಟಿಯಾಗಿ ನೆರೆ ಸಂತ್ರಸ್ತರಿಗೆ ಸಹಾಯ

0
12

ಬೆಳಗಾವಿ: ವಿಶ್ವೆÃಶ್ವರಯ್ಯ ತಾ೦ತ್ರಿಕ ವಿಶ್ವವಿದ್ಯಾಲಯ, ಗೋಗಟೆ ತಾಂತ್ರಿಕ ಮಹಾವಿದ್ಯಾಲಯ, ಅಂಗಡಿ ತಾಂತ್ರಿಕ ಮಹಾವಿದ್ಯಾಲಯ, ಜೈನ್ ತಾಂತ್ರಿಕ ಮಹಾವಿದ್ಯಾಲಯ, ಆರ್.ಎಲ್.ಎಸ್. ಮಹಾವಿದ್ಯಾಲಯಹಾಗೂ “ಒನ್ ನೆಷನ್ ಯುಥ್” ಸಂಸ್ಥೆ, ಬೆಳಗಾವಿ ಜಂಟಿಯಾಗಿ ರಾಜ್ಯದ ಪ್ರಸ್ತುತ ಪ್ರವಾಹ ಸಂತ್ರಸ್ತರಿಗೆ ನೆರವಿ ಹಸ್ತ ಚಾಚಿದ್ದಾರೆ.
ಗೋಕಾಕ, ಹುಕ್ಕೆÃರಿ, ನಿಪ್ಪಾಣಿ ಹಾಗೂ ಬೆಳಗಾವಿ ತಾಲೂಕುಗಳ ಪ್ರವಾಹ ಸಂತ್ರಸ್ತರ ಕೇಂದ್ರಗಳಿಗೆ ನಿತ್ಯೊÃಪಯೊಗಿ ಸಾಮಗ್ರಿಗಳನ್ನು ವಿತರಿಸಿದರು.
ಒಟ್ಟು ೬೦ ಜನರ ತಂಡ ೨೦೦೦ ಬ್ಲಾಂಕೆಟ್ಸ್, ೬೦೦೦ ಆಹಾರ ಪೆÇಟ್ಟಣಗಳು, ೫೦ ಸಾವಿರ ಮೌಲ್ಯದ ಔಷಧಗಳು, ೫೦ ಸಾವಿರ ಮೌಲ್ಯದ ಬಿಸ್ಕೆಟ್ಸ್ಗಳು, ೧೦ ಸಾವಿರ ಮೌಲ್ಯದ ಸ್ಯಾನಿಟರಿ ಪ್ಯಾಡ್ಸ್, ೧೦ ಸಾವಿರ ಮೌಲ್ಯದ ಬಟ್ಟೆಗಳು, ೧೦ ಸಾವಿರ ಮೌಲ್ಯದ ಕುಡಿಯುವ ನೀರು ಮುಂತಾದ ಸಾಮಗ್ರಿಗಳನ್ನು ಸತತ ನಾಲ್ಕೆದು ದಿನಗಳಿಂದ ವಿತರಿಸಲಾಗಿದೆ.
ವಿತಾವಿ ಕುಲಪತಿಗಳಾದ ಡಾ. ಕರಿಸಿದ್ದಪ್ಪ ಹಾಗೂ ಕುಲಸಚಿವ ಡಾ. ಎ. ಎಸ್. ದೇಶಪಾಂಡೆ ಅವರ ಮಾರ್ಗದರ್ಶನದಲ್ಲಿ, ವಿತಾವಿ ಎಸ್.ಎಸ್.ಎಸ್. ಘಟಕದ ಸಯೋಜಕ ಡಾ. ಅಪ್ಪಾಸಾಬ ಎಲ್. ವಿ. ಹಾಗೂ “ಒನ್ ನೆಷನ್ ಯುಥ್” ಸಂಸ್ಥೆಯ ಸಂಯೋಜಕ ಗಿರೀಶ ಬಡಿಗೇರ ಹಾಗೂ ಎಸ್.ಎಸ್.ಎಸ್ ಹಾಗೂ ಎನ್.ಸಿ.ಸಿ ಸ್ವಯಂ ಸೇವಕರು ಹಾಗೂ ವಿತಾವಿ ಸಿಬ್ಬಂದಿ ವರ್ಗ ಅತ್ಯಂತ ಅಚ್ಚುಕಟ್ಟಾಗಿ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ.

loading...