ವಿವಿಧ ಬೇಡಿಕೆ ಈಡೇರಿಕೆಗಾಗಿ ಎಐಟಿಯುಸಿ ಕಾರ್ಯಕರ್ತರ ಪ್ರತಿಭಟನೆ

0
10

ಬೆಳಗಾವಿ
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗುರುವಾರ ಎಐಟಿಯುಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ ನೀತಿಗಳನ್ನು ಹಾಗೂ ಕೆಲಸದ ಅವಧಿ ಹೆಚ್ಚಳ ಮತ್ತು ಕಾರ್ಮಿಕ ಕಾನೂನುಗಳ ಜಾರಿಯಿಂದ ಮಾಲೀಕರಿಗೆ ವಿನಾಯಿತಿ ನೀಡಲು ತರಲು ಉದ್ದೇಶಿಸಿರುವ ಸುಗ್ರೀವಾಜ್ಞೆಯನ್ನು ಮನವಿಯಲ್ಲಿ ಖಂಡಿಸಿದರು.
ಈಗಾಗಲೇ ನಿವೃತ್ತಿಯಾಗಿರುವ ಮತ್ತು ಮುಂದೆ ನಿವೃತ್ತಿಯಾಗಲಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ 10,000 ಹಾಗೂ ಸಹಾಯಕರಿಗೆ 5, ಸಾವಿರ ಪಿಂಚಣಿ ನೀಡಬೇಕು. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರನ್ನು ಕಾರ್ಮಿಕರೆಂದು ಪರಿಗಣಿಸಿ, ಕೇಂದ್ರ ಸರಕಾರ 7ನೇ ವೇತನ ಆಯೋಗದಲ್ಲಿರುವ 21 ಸಾವಿರ ರು. ಕನಿಷ್ಠ ವೇತನ ನಿಗದಿಪಡಿಸಬೇಕೆಂದು ಆಗ್ರಹಿಸಿದರು.
ಸರಕಾರದ ಸಮಾಜಿಕ ಭದ್ರತಾ ಯೋಜನೆಗಳಾದ ಇಎಸ್ ಐ, ಭವಿಷ್ಯದ ನಿಧಿ ಗ್ರ‍್ಯಾಚ್ಯುಟಿ ಸೌಲಭ್ಯಗಳನ್ನು ಒದಗಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್ ಕೆಜಿ ಹಾಗೂ ಯುಕೆಜಿ ಪ್ರಾರಂಭಿಸಲು ಸರಕಾರ ಆದೇಶ ಹೊರಡಿಸಬೇಕು. ಬೆಳಗಾವಿ ಗ್ರಾಮೀಣ ಪ್ರದೇಶದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕರಿಗೆ ಜುಲೈ 2019ರ ಗೌರವ ಧನ ವಿತರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.
ನಾಗೇಶ ಸಾತೇರಿ, ವಾಯ್.ಬಿ.ಶೀಗಿಹಳ್ಳಿ, ಮೀನಾಕ್ಷಿ ಕೊಟಗಿ, ಸುಜಾತಾ ಬೆಳಗಾವಕರ, ಸುರೇಖಾ ವಿಶ್ವನಾಥ ದೆಸಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...