ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹ

0
5

ವಿಜಯಪುರ : ಕಮಲೇಶ್ಚಂದ್ರ ೭ನೇ ವೇತನ ಆಯೋಗ ವರದಿಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರು ನಗರದ ಪ್ರಧಾನ ಅಂಚೆ ಕಚೇರಿ ಎದುರು ಅನಿರ್ದಿಷ್ಟ ಧರಣಿ ಸತ್ಯಾಗ್ರಹ ೩ನೇ ದಿನಕ್ಕೆ ಮುಂದುವರೆದಿದೆ.
ಗುರುವಾರ ಬೆಳಿಗ್ಗೆ ಗ್ರಾಮೀಣ ಅಂಚೆ ನೌಕರರು ನಗರದ ಪ್ರಧಾನ ಅಂಚೆ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಸಂಘÀದ ಖಜಾಂಚಿಗಳಾದ ವಿಠ್ಠಲಸಿಂಗ ರಜಪೂತ ಅವರು, ಸುಮಾರು ೧೫೫ ವರ್ಷಗಳಿಂದ ಅಂಚೆ ಇಲಾಖೆ ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಸರ್ಕಾರಿ ನೌಕರರಾಗಿ ಸುಮಾರು ೧ ಲಕ್ಷ ಜನರಿರುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಅತೀ ಹೆಚ್ಚು ಸಂಪರ್ಕ ಜಾಲ ಇರುವ ಇಲಾಖೆ ಎಂದರೆ ಅದು ಅಂಚೆ ಇಲಾಖೆ ಮಾತ್ರ. ದೇಶದಲ್ಲಿ ಪ್ರತಿಶತ ೭೦ ಸಾವಿರ ರಷ್ಟುಗ್ರಾಮೀಣ ಭಾಗವಾಗಿದ್ದು ಇಲ್ಲಿ ಗ್ರಾಮೀಣ ಅಂಚೆ ಸೇವಕರಾಗಿ ಸುಮಾರು ೨ ಲಕ್ಷ ೭೦ ಜನ ಅರೆ ಕಾಲಿಕ ನೌಕರರಿದ್ದಾರೆ. ಇದುವರೆಗೆ ತಲೆ ತಲೆಮಾರುಗಳಿಂದ ಕೆಲಸ ನಿರ್ವಹಿಸಿ ನಿವೃತ್ತಿಯಾಗಿ ಯಾವುದೇ ಸೌಲಭ್ಯಗಳನ್ನು ಪಡೆಯದೇ ಮನೆಗೆ ಹೋದವರ ಸಂಖ್ಯೆ ಲಕ್ಷಗಟ್ಟಲೇ ಇದೆ ಎಂದರು.
ನ್ಯಾಶನಲ್ ಯೂನಿಯನ್ ಕಾರ್ಯದರ್ಶಿ ಶಾಂತಗೌಡ ಬಿರಾದಾರ ಮಾತನಾಡಿ, ಮೊದಲು ಗ್ರಾಮೀಣ ಅಂಚೆ ಸೇವಕರನ್ನು ಸಿವಿಲ್ ಸರ್ವಂಟಾಗಿ ಮಾಡಿ, ೨೧ನ ಶತಮಾನದಲ್ಲಿ ತಂತ್ರಜ್ಞಾನದೊಂದಿಗೆ ಇಲಾಖೆ ಕಾರ್ಯನಿರ್ವಹಿಸುವಾಗ ಸಮಾನವಾಗಿ ಗ್ರಾಮೀಣ ಅಂಚೆ ಸೇವಕರಿಗೆ ತಂತ್ರಜ್ಞಾನದ ತರಬೇತಿಯೊಂದಿಗೆ ಕಾರ್ಯನಿರ್ವಹಿಸಲು ಸಜ್ಜಾಗಿದೆ ಎಂದು ತಿಳಿಸಿದರು.

ಕೆ.ಎಸ್.ಓಂಕಾರ, ಆರ್.ಎಸ್.ದೇಶಪಾಂಡೆ, ಸಂಘಟನಾ ಕಾರ್ಯದರ್ಶಿ ಜಿ.ಎಸ್.ಬೆಳ್ಳುಬ್ಬಿ, ಲೆಕ್ಕ ಪರಿಶೋಧಕ ಎಸ್.ಆರ್.ನರಳೆ, ಮಾಜಿ ಅಧ್ಯಕ್ಷ ಬಿ.ಎನ್.ಬಿರಾದಾರ, ಹೊಸಮನಿ, ಎಲ್.ಎಂ.ಖಾನೆ, ಸಿ.ಕೆ.ಚವ್ಹಾಣ, ಸವಿತಾ ಗಿರಿಸಾಗರ, ಜ್ಯೊÃತಿ ಬಿರಾದಾರ, ಶೋಭಾ ಗಲಗಲಿ, ಈರಮ್ಮಾ ಅವಟಿ, ಸೈದಾವಿ ಓಲೆಕಾರ, ಜಯಶ್ರಿÃ ಹಿರೇಮಠ ಸೇರಿದಂತೆ ಸುಮಾರು ೩೦೦ ಕ್ಕಿಂತ ಹೆಚ್ಚು ಜನ ಭಾಗವಹಿಸಿದ್ದರು.

loading...