ವಿಶ್ವಕಪ್‌ ಫೈನಲ್‌ನಲ್ಲಿ ಸಂಭವಿಸಿದ್ದ ಓವರ್ ಥ್ರೋ ಬಗ್ಗೆ ಸೆಪ್ಟಂಬರ್‌ನಲ್ಲಿ ಪರಿಶೀಲನೆ

0
4

ಲಂಡನ್:- ಇಲ್ಲಿನ ದಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಕಳೆದ ಜುಲೈ 14 ರಂದು ನಡೆದಿದ್ದ 2019ರ ಐಸಿಸಿ ವಿಶ್ವಕಪ್‌ ಟೂರ್ನಿಯ ಫೈನಲ್‌ ಹಣಾಹಣಿಯಲ್ಲಿ ಸಂಭವಿಸಿದ ಓವರ್‌ ಥ್ರೋ ಬಗ್ಗೆ ಮುಂಬರುವ ಸೆಪ್ಟಂಬರ್‌ ಪರಿಶೀಲಿಸಲಾಗುವುದು ಎಂದು ಮೆಲ್ಬೋರ್ನ್‌ ಕ್ರಿಕೆಟ್‌ ಕ್ಲಬ್‌(ಎಂಸಿಸಿ) ಸ್ಪಷ್ಟಪಡಿಸಿದೆ.
ಇಂಗ್ಲೆಂಡ್‌ ಹಾಗೂ ನ್ಯೂಜಿಲೆಂಡ್‌ ನಡುವೆ ನಡೆದಿದ್ದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ನೀಡಿದ್ದ 242 ರನ್‌ ಗುರಿ ಹಿಂಬಾಲಿಸಿದ್ದ ಇಂಗ್ಲೆಂಡ್‌ ತಂಡಕ್ಕೆ ಮೂರು ಎಸೆತಗಳಲ್ಲಿ 9 ರನ್‌ ಅಗತ್ಯವಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಚೆಂಡನ್ನು ಕವರ್ಸ್ ಕಡೆ ಹೊಡೆದು ಒಂದು ರನ್‌ ಮುಗಿಸಿ ಎರಡನೇ ರನ್‌ ಓಡುತ್ತಿದ್ದ ವೇಳೆ ಮಾರ್ಟಿನ್‌ ಗುಪ್ಟಿಲ್‌ ಅವರು ರನೌಟ್‌ ಮಾಡಲು ಎಸೆದ ಚೆಂಡು ಸ್ಟೋಕ್ಸ್ ಬ್ಯಾಟ್‌ಗೆ ತಗುಲಿ ಬೌಂಡರಿ ಗೆರೆ ದಾಟಿತು.
ಈ ವೇಳೆ ಇಂಗ್ಲೆಂಡ್‌ಗೆ ಒಟ್ಟು ಆರು ರನ್‌ ನೀಡಲಾಯಿತು. ನಿಗದಿತ 50 ಓವರ್‌ಗಳಿಗೆ ಪಂದ್ಯ ಟೈ ಆಯಿತು. ನಂತರ, ಸೂಪರ್‌ ಓವರ್‌ನಲ್ಲೂ ಟೈ ಆಗಿದ್ದರಿಂದ ಬೌಂಡರಿ ನಿಯಮದ ಪ್ರಕಾರ ಇಂಗ್ಲೆಂಡ್‌ಗೆ ಚಾಂಪಿಯನ್ ಎಂದು ಘೋಷಿಸಲಾಯಿತು.
ಆದರೆ, ಓವರ್‌ ಥ್ರೋ ಬಗ್ಗೆ ಸಾಕಷ್ಟು ವಾದ-ವಿವಾದಗಳ ನಡೆದವು. 2011ರ ಐಸಿಸಿ ವಿಶ್ವಕಪ್ ಫೈನಲ್‌ನಲ್ಲಿ ಅಂಪೈರ್‌ ಆಗಿ ಕಾರ್ಯ ನಿರ್ವಹಿಸಿದ್ದ ಸಿಮನ್‌ ಟಫೆಲ್‌ ಅವರು ಅಂಪೈರ್‌ಗಳಾದ ಕುಮಾರ್ ಧರ್ಮಸೇನ ಮತ್ತು ಮಾರೈಸ್ ಎರಾಸ್ಮಸ್ ಅವರು ಓವರ್‌ ಥ್ರೋ ವಿಚಾರದಲ್ಲಿ ತಪ್ಪು ಮಾಡಿದ್ದಾರೆಂದು ಆರೋಪಿಸಿದ್ದರು.
ಐಸಿಸಿ ವಿಶ್ವಕಪ್‌ ಫೈನಲ್‌ ನಲ್ಲಿ ಸಂಭವಿಸಿದ ಓವರ್‌ ಥ್ರೋ ಬಗ್ಗೆ ಚರ್ಚೆ ಮಾಡಲು ವಿಶ್ವ ಕ್ರಿಕೆಟ್‌ ಸಮಿತಿ ನಿರ್ಧರಿಸಿದೆ. ಹಾಗಾಗಿ, ಓವರ್‌ ಥ್ರೋ ಬಗ್ಗೆ ಸೆಪ್ಟಂಬರ್‌ನಲ್ಲಿ 19.8 ನಿಯಮದ ಬಗ್ಗೆ ಪರಿಶೀಲಿಸಲಾಗುವುದು ಎಂದು ಎಂಸಿಸಿ ತಿಳಿಸಿದೆ.

loading...