ವಿಶ್ವಕಪ್ ಗೆ ತಂಡದ ರಚನೆ ದೊಡ್ಡ ಸವಾಲು: ಕ್ರಿಸ್ ವೋಕ್ಸ್

0
10

ದುಬೈ:- ಇದೇ 30ರಿಂದ ಇಂಗ್ಲೆಂಡ್ ನಲ್ಲಿ ನಡೆಯಲಿರುವ ವಿಶ್ವಕಪ್ ಗೆ ಮೇ 23ರ ಒಳಗೆ ತಂಡವನ್ನು ಪ್ರಕಟಿಸಬೇಕಿದ್ದು, ಇಂಗ್ಲೆಂಡ್ ತಂಡವನ್ನು ಪ್ರಕಟಿಸುವುದು ದೊಡ್ಡ ಸವಾಲಾಗಿದೆ ಎಂದು ವೇಗಿ ಕ್ರಿಸ್ ವೋಕ್ಸ್ ಅಭಿಪ್ರಾಯ ಪಟ್ಟಿದ್ದಾರೆ.

‘ ನಾವು ಡ್ರೆಸ್ಸಿಂಗ್ ರೂಮ್ ನಲ್ಲಿ ವಿಶ್ವಕಪ್ ತಂಡದ ಬಗ್ಗೆ ಮಾತನಾಡುವುದಿಲ್ಲ. ಯಾರು ತಂಡ ಸೇರಿಕೊಳ್ಳಲಿದ್ದಾರೆ, ಯಾರು ಹೊರ ಹೋಗಬಹುದು ಎಂಬುದರ ಬಗ್ಗೆ ಚರ್ಚಿಸುವುದಿಲ್ಲ’ ಎಂದು ವೋಕ್ಸ್ ತಿಳಿಸಿದ್ದಾರೆ.
2011ರಲ್ಲಿ ಇಂಗ್ಲೆಂಡ್ ಪರ ಪದಾರ್ಪಣೆ ಮಾಡಿದ ವೋಕ್ಸ್, ಏಕದಿನ ಕ್ರಿಕೆಟ್ ನಲ್ಲಿ 121 ವಿಕೆಟ್ ಕಬಳಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ಮೂರನೇ ಪಂದ್ಯದಲ್ಲಿ ವೋಕ್ಸ್ ಬಿಗುವಿನ ದಾಳಿ ನಡೆಸಿ 4 ವಿಕೆಟ್ ಉರುಳಿಸಿದ್ದರು.
‘ಉತ್ತಮ ಪ್ರದರ್ಶನ ನೀಡಬೇಕೆಂಬುವುದೇ ನನ್ನ ತುಡಿತ. ಪ್ರದರ್ಶನದ ಬಲದ ಮೇಲೆ ತಂಡದಲ್ಲಿ ನಿಮ್ಮ ಸ್ಥಾನ ಭದ್ರ ಎಂದು ಭಾವಿಸುತ್ತೇವೆ. ಆದರೆ ತಂಡದ ಆಯ್ಕೆಯವರೆಗೂ ಏನನ್ನು ಹೇಳಲು ಆಗದು’ ಎಂದು ಅವರು ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಸಿಕ್ಕ ಅವಕಾಶಗಳಲ್ಲಿ ಉತ್ತಮ ದಾಳಿ ನಡೆಸಿದ್ದೇನೆ. ಇನ್ನು ಹಲವು ಆಟಗಾರರು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಕಾತುರರಾಗಿದ್ದಾರೆ. ತಂಡದಲ್ಲಿ ಸ್ಪರ್ಧೆ ಇರುವುದು ಒಳ್ಳೆಯದು ಎಂದು ವೋಕ್ಸ್ ಅಭಿಪ್ರಾಯ ಪಟ್ಟಿದ್ದಾರೆ.
ಇಂಗ್ಲೆಂಡ್ ತಂಡ ಪಾಕ್ ವಿರುದ್ಧ ಇನ್ನು ಎರಡು ಏಕದಿನ ಪಂದ್ಯ ಆಡಲಿದೆ. ಮೇ 19 ರಂದು ಪಾಕ್ ವಿರುದ್ಧದ ಸರಣಿ ಕೊನೆಗೊಳ್ಳಲಿದೆ. ವಿಶ್ವಕಪ್ ಗೂ ಮುನ್ನ ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ್ ವಿರುದ್ಧ ಎರಡು ಅಭ್ಯಾಸ ಪಂದ್ಯ ಆಡಲಿದೆ.

loading...