ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸದಕ್ಕೆ ಬೇಸರ: ಹ್ಯಾಜಲ್ ವುಡ್

0
6

ಮೆಲ್ಬರ್ನ್:- ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸದೇ ಇರುವುದಕ್ಕೆ ತಮಗೆ ಬೇಸರವಾಗಿದೆ ಎಂದು ಆಸ್ಟ್ರೇಲಿಯಾ ವೇಗಿ ಜೋಶ್ ಹ್ಯಾಜಲ್ ವುಡ್ ಹೇಳಿದ್ದಾರೆ.
2019ರ ವಿಶ್ವಕಪ್ 15 ಆಟಗಾರರ ತಂಡದಲ್ಲಿ ಹ್ಯಾಜಲ್ ವುಡ್ ಗೆ ಅವಕಾಶ ಲಭಿಸಿರಲಿಲ್ಲ. ಜಾಯ್ ರಿಚರ್ಡ್ಸನ್ ಅವರು ಗಾಯದಿಂದ ಹೊರ ನಡೆದಾಗಲೂ, ಅವರ ಸ್ಥಾನಕ್ಕೆ ಕೇನ್ ರಿಚರ್ಡ್ಸನ್ ಅವರನ್ನು ಆಯ್ಕೆ ಮಾಡಿತು. ಹ್ಯಾಜಲ್ ವುಡ್ ಗೆ ಗಾಯವಾಗಿದ್ದರಿಂದ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಅವರನ್ನು ತಂಡದಲ್ಲಿ ನಾಲ್ಕು ತಿಂಗಳು ಆಯ್ಕೆ ಮಾಡಿರಲಿಲ್ಲ. ವಿಶ್ವಕಪ್ ಬಳಿಕ ಇಂಗ್ಲೆಂಡ್ ನಲ್ಲಿ ಆಸ್ಟ್ರೇಲಿಯಾ ಆ್ಯಷಸ್ ಸರಣಿ ಆಡಲಿದೆ. ಬೋರ್ಡ್ ಅನುಸಾರ ಹ್ಯಾಜಲ್ ವುಡ್ ಅವರು ಗಾಯದಿಂದ ಚೇತರಿಸಿಕೊಂಡ ಬಳಿಕ ಹೆಚ್ಚು ಪಂದ್ಯಗಳನ್ನು ಆಡಿಲ್ಲ. ಹೀಗಾಗಿ ದೊಡ್ಡ ಟೂರ್ನಿಯಲ್ಲಿ ಆಡುವುದು ಸೂಕ್ತವಲ್ಲ ಎಂದು ಲೆಕ್ಕಾಚಾರ ಹಾಕಿದೆ. ಅಲ್ಲದೆ ಹ್ಯಾಜಲ್ ವುಡ್, ಆ್ಯಷಸ್ ಸರಣಿಗೆ ತಯಾರಾಗಬೇಕು ಎಂದು ತಿಳಿಸಿದೆ.

‘ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸದೇ ಇರುವುದಕ್ಕೆ ಬೇಸರವಾಗಿದೆ. ಈ ಟೂರ್ನಿ ನಾಲ್ಕು ವರ್ಷಗಳಿಗೆ ಒಮ್ಮೆ ನಡೆಯುತ್ತದೆ. ಕಳೆದ ಬಾರಿ ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಆಯೋಜಿಸಿದ್ದರಿಂದ ಅದರ ಮಹತ್ವದ ಅರಿವಾಗಿದೆ. ಟೂರ್ನಿ ಆರಂಭವಾದ ಬಳಿಕ ಹೆಚ್ಚಿನ ಬೇಸರವಾಗಲಿದ್ದು, ಟಿವಿಯಲ್ಲಿ ಪಂದ್ಯ ನೋಡುವೆ ಎಂದು ತಿಳಿಸಿದ್ದಾರೆ.

ಹ್ಯಾಜಲ್ ವುಡ್ 44 ಏಕದಿನ ಪಂದ್ಯಗಳಲ್ಲಿ 72 ವಿಕೆಟ್ ಕಬಳಿಸಿದ್ದಾರೆ.

loading...